Live Stream

[ytplayer id=’22727′]

| Latest Version 8.0.1 |

ChamarajanagarState News

ಹರೇರಾಮ ಹರೇ ಕೃಷ್ಣನಾಮ ಜಪವನ್ನು ಮಾಡಿ. ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ

ಹರೇರಾಮ ಹರೇ ಕೃಷ್ಣನಾಮ ಜಪವನ್ನು ಮಾಡಿ. ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ

ಚಾಮರಾಜನಗರ:Chamarajanagar ಪ್ರತಿಯೊಬ್ಬರು ಹರೇರಾಮ ಹರೇ ಕೃಷ್ಣನಾಮ ಜಪವನ್ನು ಮಾಡಿ. ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ಮೈಸೂರಿನ ಇಸ್ಕಾನ್  (ISCKON) ಸಂಸ್ಥೆಯ ಗುರುಗಳಾದ ಅಲರ್ ನಾಥ್ ದಾಸ್ ಪ್ರಭು ALARNATH DAS PRABHU ರವರು ತಿಳಿಸಿದರು.

ಅವರು ಹರದನಹಳ್ಳಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ ಮಂಡಳಿ ಹಾಗೂ ಶ್ರೀಕೃಷ್ಣ ಪ್ರತಿಷ್ಠಾನ ಚಾಮರಾಜನಗರದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ, ಗೋಪೂಜೆ, ಶ್ರೀ ರಾಧಾಕೃಷ್ಣ ವೇಷಧಾರ ಮೆರವಣಿಗೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಸಂಕೀರ್ತನೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಹರೇನಾಮ ಮತ್ತು ಹರೇ ಕೃಷ್ಣ ನಾಮಸ್ಮರಣೆ ಕಲಿಯುಗದ ಮಹಾಮಂತ್ರವಾಗಿದೆ. ನಾಮ ಜಪದಿಂದ ಮನಸ್ಸು ಶುದ್ದವಾಗಿ, ಸನ್ಮಾರ್ಗದಲ್ಲಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ದೇವರ ನಾಮ ಸ್ಮರಣೆ ಕೆಟ್ಟ ಕಾರ್ಯಗಳನ್ನು ಮಾಡದಂತೆ ನಮ್ಮನ್ನು ಸರಿದಾರಿಗೆ ತರುತ್ತದೆ. ದೇವನಾಮ ಸ್ಮರಣೆಯಿಂದ ಪ್ರತಿಯೊಬ್ಬರು ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳಬಹುದು. ಪ್ರತಿ ಗ್ರಾಮಗಳಲ್ಲೂ ಯುವಶಕ್ತಿ ಆಧ್ಯಾತ್ಮಿಕ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಹರದನಹಳ್ಳಿ ಶ್ರೀ ವಿದ್ಯಾ ಗಣಪತಿ ಯುವಕ ಮಂಡಳಿ ಹಾಗೂ ಯುವ ಶಕ್ತಿ ಇಡೀ ರಾಷ್ಟ್ರಕ್ಕೆ ಮಾದರಿಯಾದ ಯುವಕ ಸಂಘವಾಗಿದೆ. ಗ್ರಾಮದ ಅಭಿವೃದ್ಧಿಗೆ ಸದಾಕಾಲ ಕಂಕಣಭದ್ಧರಾಗಿ ,ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುತ್ತಿರುವ ಯುವಕ ಸಂಘ. ಎಲ್ಲಾ ಕಾರ್ಯಕರ್ತರಿಗೆ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಗ್ರಾಮದ ದೇವಸ್ಥಾನಗಳ ಅಭಿವೃದ್ಧಿ, ಕಲ್ಯಾಣಿಯಅಭಿವೃದ್ಧಿ ಹಾಗೂ ಸ್ವಚ್ಛತೆ ,ಶಿಕ್ಷಣ, ಮಕ್ಕಳ ಅಭಿವೃದ್ಧಿ ,ಸಂಕೀರ್ತನೆ, ದೇವತಾ ಕಾರ್ಯಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿರುವ ಸಂಘಟನೆಗೆ ಭಗವಂತನ ಆಶೀರ್ವಾದ ಹಾಗೂ ಗ್ರಾಮದ ಎಲ್ಲ ಹಿರಿಯ ಹಿರಿಯರ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತಾ ,ಶ್ರೀ ಕೃಷ್ಣ ಜಯಂತಿ ಚಾಮರಾಜನಗರದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಮೊಸರು ಮಡಿಕೆ ಒಡೆಯುವ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದೆ .ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ 2013ರಿಂದಲೂ ಶ್ರೀ ಕೃಷ್ಣ ಜಯಂತಿ ಹಾಗೂ ಮೊಸರು ಮಡಿಕೆ ಉತ್ಸವ ನಡೆಯುತ್ತಿರುವುದು ಯುವಶಕ್ತಿ ಆಧ್ಯಾತ್ಮಿಕದ ಭಾವದೊಂದಿಗೆ ಸನ್ಮಾರ್ಗದ ನಡೆ ಹಾಗೂ ಸಂಘಟನೆಯ ಶಕ್ತಿಯಾಗಿ ಬೆಳೆಯುತ್ತಿರುವುದು ಭಗವಾನ್ ಶ್ರೀ ಕೃಷ್ಣನ ಆಶೀರ್ವಾದದಿಂದ. ಶ್ರೀಕೃಷ್ಣ ಜಗತ್ತಿನ ವಿಸ್ಮಯಕಾರಿ ವ್ಯಕ್ತಿತ್ವ ಹೊಂದಿದವ . ಶ್ರೀ ಕೃಷ್ಣ ಆನಂದದ ಸ್ವರೂಪ . ಶ್ರೀ ಕೃಷ್ಣನೇ ಇಡೀ ಜಗತ್ತಿನ ಸರ್ವಧಾರಿ. ಶ್ರೀಕೃಷ್ಣ ಧರ್ಮರಕ್ಷಕ . ಮಕ್ಕಳು ಕೃಷ್ಣ ಮತ್ತು ರಾಧಾ ವೇಷಧಾರಿಗಳಾಗಿ ಆಗಮಿಸಿ ಹರೇ ಕೃಷ್ಣ ಮಂತ್ರದೊಂದಿಗೆ ಇಡೀ ಹರದನಹಳ್ಳಿ ಸಂಕೀರ್ತನೆಯನ್ನು ನಡೆಸಿಕೊಟ್ಟು ಭಗವಂತನ ಕೃಪೆಗೆ ಪಾತ್ರರಾಗಿ ಸನ್ಮಾರ್ಗದ ಕಾರ್ಯಕ್ರಮದಲ್ಲಿ ಪಾಲ್ಕೊಳ್ಳುವಂತೆ ಪೋಷಕರು, ನಾಗರಿಕರು ಪ್ರೋತ್ಸಾಹ ತುಂಬ ತುಂಬಿರುವುದು ಅಭಿನಂದನೀಯ ಎಂದರು.

ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ,ವಿಶೇಷ ಅಲಂಕಾರಗೊಂಡ ಗೋವಿನ ಮೆರವಣಿಗೆ ,ಶ್ರೀ ಕೃಷ್ಣ ರಾಧಾ ವೇಷಧಾರಿಗಳ ಜೊತೆಗೆ ಮೈಸೂರಿನಿಂದ ಆಗಮಿಸಿದ್ದ ಇಸ್ಕಾನ್ ಸಂಸ್ಥೆಯ ಸಂಕೀರ್ತನ ತಂಡ ಹಾಗೂ ಹರದನಹಳ್ಳಿಯ ಶ್ರೀ ಶಾರದಾ ಮಾತ ತಂಡದೊಂದಿಗೆ ಇಡೀ ಗ್ರಾಮದಲ್ಲಿ ಸಂಕೀರ್ತನೆ, ನಾದಸ್ವರ, ಹರೇ ಕೃಷ್ಣಮಂತ್ರದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಮಾರಿಗುಡಿ ಮುಂಭಾಗ ಮೊಸರು ಮಡಿಕೆ ಒಡೆಯುವ ಉತ್ಸವದ ಮೂಲಕ ಮಕ್ಕಳು ಕುಡಿಕೆಯನ್ನು ಒಡೆಯುವ ಮೂಲಕ ಬೆಣ್ಣೆ ಮತ್ತು ಮೊಸರನ್ನು ತೆಗೆಯುವ ಸಂಭ್ರಮದಲ್ಲಿ ಪಾಲ್ಗೊಂಡು ಧನ್ಯರಾದರು.

ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ದೀಕ್ಷಿತ್, ಪುರೋಹಿತರಾಧ ಶ್ರೀಧರ್, ನಟರಾಜ್, ಸುರೇಶ್ ನಾಗ್ ,ವಿದ್ಯಾಗಣಪತಿ ಮಂಡಳಿಯ ಮೋಹನಕುಮಾರ್ ,ವೆಂಕಟೇಶ್, ಕೆಂಪಣ್ಣ, ಮಂಜುನಾಥ್ ,ಶಂಕರ್, ಜಗದೀಶ್, ಪ್ರವೀಣ್, ಮಧು , ನವೀನ, ಶಶಿಕುಮಾರ್,ಗಿರೀಶ,ಸೇರಿದಂತೆ ಎಲ್ಲಾ ಸದಸ್ಯರು,ಯಜಮಾನರು, ಗ್ರಾಮಸ್ಥರು ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು.

ವೀ ಕೇ ನ್ಯೂಸ್
";