Live Stream

[ytplayer id=’22727′]

| Latest Version 8.0.1 |

Bengaluru Urban

ಅಲೆಮಾರಿಗಳ ವಿಮೋಚನಾ ದಿನಾಚರಣೆ

ಅಲೆಮಾರಿಗಳ ವಿಮೋಚನಾ ದಿನಾಚರಣೆ
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅಲೆಮಾರಿಗಳ ವಿಮೋಚನಾ ದಿನಾಚರಣೆ ಕಾರ್ಯಕ್ರಮದ ನಿರ್ಣಯಗಳು ಇಂತಿವೆ.
೧. ಅಲೆಮಾರಿ ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿಯ ದೃಷ್ಟಿಯಿಂದ ಆಗಸ್ಟ್ 31 ರಂದು “ಅಲೆಮಾರಿಗಳ ವಿಮೋಚನಾ ದಿನಾಚರಣೆ”  ಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ಮುಂದಿನ ವರ್ಷ ರಾಜ್ಯ ಸರ್ಕಾರವೇ ಆಚರಣೆ ಮಾಡಬೇಕು.
೨. ಅಲೆಮಾರಿ ಸಮುದಾಯಗಳ ಮಾನವ ಹಕ್ಕುಗಳ ದಮನ ಮಾಡಲು ದುರ್ಬಳಕೆ ಆಗುತ್ತಿರುವ Habitual offenders act-1952 ಅನ್ನು ತಿದ್ದುಪಡಿ ಮಾಡಬೇಕು.
೩. ವಿಮುಕ್ತ ಅಲೆಮಾರಿ ಸಮುದಾಯಗಳ ಶಿಕ್ಷಣ, ಉದ್ಯೋಗ ಮತ್ತು ಅರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ವಿಮುಕ್ತ ಅಲೆಮಾರಿಗಳ ಶಾಶ್ವತ ಆಯೋಗ ಸ್ಥಾಪನೆ ಮಾಡಬೇಕು. ಕೇಂದ್ರ ರಾಜ್ಯ ಸರ್ಕಾರಗಳು ಈ ಸಮುದಾಯಗಳಿಗೆ ವಿಷೇಶ ಪ್ಯಾಕೇಜ್ ನೀಡಬೇಕು.
೪. ರಾಜ್ಯದ ವಿಮುಕ್ತ ಅಲೆಮಾರಿ ಸಮುದಾಯಗಳು  SC, ST, OBC ಪಟ್ಟಿಗಳಲ್ಲಿ ಹಂಚಿಹೊಗಿದ್ದಾರೆ. ಈ ಸಮುದಾಯಗಳನ್ನು ಎಲ್ಲಾ ಹಂತದಲ್ಲಿ ಸಂಘಟಿಸಲು ಯೋಜನೆ ರೂಪಿಸಲಾಗುವುದು.
೫. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಿದೆ. ಬಂಜಾರ, ಬೋವಿ, ಕೊರಮ ಜಾತಿಗಳ ಒಳಗೊಂಡ ಪ್ರವರ್ಗ-ಸಿ ಗುಂಪಿನಲ್ಲಿ ಕೊರಚ ಸೇರಿದಂತೆ ಐವತ್ತಕ್ಕೂ ಹೆಚ್ಚು ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇಕಡಾ 5 ರಷ್ಟು  ಮೀಸಲಾತಿ ಹಂಚಿಕೆ ಮಾಡಿದೆ. ಸೂಕ್ಷ್ಮ ಸಮುದಾಯಗಳು ಸಿ ಗುಂಪಿನಲ್ಲಿ ಇರಲು ಇಚ್ಚಿಸದಿದ್ದರೆ ಅವರಿಗೆ ಪ್ರತ್ಯೇಕ ಗುಂಪು ಮಾಡಿ ಹೆಚ್ಚುವರಿ ಮೀಸಲಾತಿ ಹಂಚಿಕೆ ಮಾಡಬೇಕು.
6. ವೀರಶೈವ ಲಿಂಗಾಯತ ಜಂಗಮರು ಸಮುದಾಯಗಳ ಜನರು ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣಪತ್ರ ಗಳನ್ನು ಪಡೆದಿದ್ದಾರೆ. ಪರಿಶಿಷ್ಟರ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅವರುಗಳ ಜಾತಿ ಪ್ರಮಾಣಪತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು. ಮೀಸಲಾತಿ ಮತ್ತಿತರ ಸಮಸ್ಯೆಗಳ ಪರಿಹಾರಕ್ಕಾಗಿ ತಕ್ಷಣ ಪರಿಶಿಷ್ಟ ಜಾತಿಗಳ ಶಾಶ್ವತ ರಾಜ್ಯ ಆಯೋಗವನ್ನ ಪ್ರಾರಂಭಿಸಬೇಕು.
ಕಾರ್ಯಕ್ರಮವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ನ್ಯಾಯವಾದಿ ಎನ್ ಅನಂತನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ಯಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ಸುಭಾಷ್ ರಾಠೋಡ್ ವಿಷಯ ಮಂಡನೆ ಮಾಡಿದರು. ಮಾಜಿ ಸಚಿವೆ ಡಾ ಬಿ ಟಿ ಲಲಿತನಾಯ್ಕ, ನಿವೃತ್ತ ನ್ಯಾಯಾಧೀಶ ವೆಂಕಟೇಶ ವೊರ್ಸೆ, ಶಿವರುದ್ರಸ್ವಾಮಿ, ಕೃಷ್ಣಪ್ಪ ಕೊರಚ, ಹನುಮಂತ ದೊಂಬರ, ಎನ್ ಆರ್ ನಾಯ್ಕ, ಸಿದ್ದಾನಾಯ್ಜ, ಅಂಜನಪ್ಪ, ಮಹೇಶ್ ನಾಯ್ಕ, ಬಸವರಾಜ್ ರಾಠೋಡ್, ಕುಬೇರ ನಾಯ್ಕ, ಗೋಪಾಲ ನಾಯ್ಕ, ಶಾಂತನಾಯ್ಕ ಚನ್ನಗಿರಿ, ಚಂದ್ರಿಕಾ, ಕೊಟ್ರಮ್ಮ ಮತ್ತಿತರರು ಭಾಗವಹಿಸಿ ಮಾತನಾಡಿದರು.
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";