ಬೆಂಗಳೂರು : ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ (Nrithya Disha Trust) ಸಂಸ್ಥಾಪಕರೂ ಗುರುಗಳೂ ಆದ ‘ಕಲಾಭೂಷಿಣಿ’ (Kalabhushini) ಡಾ|| ದರ್ಶಿನಿ ಮಂಜುನಾಥ್ ರವರ (Dr. Darshini Manjunath) ಶಿಷ್ಯೆ ಕು||.ಪ್ರಿಯಾಂಕಾ ಶ್ರೀನಿವಾಸ್ (Priyanka Srinivas) ಅವರ ರಂಗಪ್ರವೇಶ ಸೆಪ್ಟೆಂಬರ್ 28, ಭಾನುವಾರ ಸಂಜೆ 6-00ಕ್ಕೆ
ನಗರದ ಜೆ. ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಬಿ. ಎಚ್. ನಿಶ್ಚಲ್ (ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ), ಶ್ರೀ ನಂಜುಂಡರಾವ್ (ಖ್ಯಾತ ವಿಮರ್ಶಕರು ಮತ್ತು ಅಂಕಣಕಾರರು), ಶ್ರೀ ಶ್ರೀನಿವಾಸಮೂರ್ತಿ (ಚಲನಚಿತ್ರ ನಿರ್ಮಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರು), ಶ್ರೀ ಗಣೇಶ ಆರ್, (ಅರ್ಚಕರು), ಶ್ರೀ ಶಿವಕುಮಾರ್, (ಮಾಜಿ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು) ಆಗಮಿಸಲಿದ್ದಾರೆ.
ಇದು ನೃತ್ಯ ದಿಶಾ ಟ್ರಸ್ಟ್ ನ 17ನೇ “ರಂಗಪ್ರವೇಶ” ಆಗಿದ್ದು, ಗುರು. ಡಾ|| ದರ್ಶಿನಿ ಮಂಜುನಾಥ್ ಅವರ ಸಂಯೋಜನೆಗೆ ಕು|| ಪ್ರಿಯಾಂಕಾ ಶ್ರೀನಿವಾಸ್ ಅತ್ಯಂತ ಆಸಕ್ತಿಯಿಂದ, ಶ್ರದ್ಧಾಭಕ್ತಿಯೊಂದಿಗೆ ಸಜ್ಜಾಗಿದ್ದಾರೆ.
ವಾದ್ಯಮೇಳದಲ್ಲಿ : ನಟ್ಟುವಾಂಗ-ಗುರು ಡಾ|| ದರ್ಶಿನಿ ಮಂಜುನಾಥ್, ಗಾಯನ-ವಿದುಷಿ ಶ್ರೀಮತಿ ಭಾರತಿ ವೇಣುಗೋಪಾಲ್, ಮೃದಂಗಂ : ವಿದ್ವಾನ್ ಶ್ರೀ ಎಸ್.ವಿ. ಗಿರಿಧರ್, ಪಿಟೀಲು : ವಿದ್ವಾನ್ ಶ್ರೀ ಸಿ. ಮಧುಸೂದನ್, ಕೊಳಲು : ವಿದ್ವಾನ್ ಶ್ರೀ ಎಂ.ಎಸ್. ಪ್ರಮುಖ್, ರಿದಂ ಪ್ಯಾಡ್ : ವಿದ್ವಾನ್ ಶ್ರೀ ಕಾರ್ತೀಕ್ ವೈಧತ್ರಿ, ವೀಣಾ : ಮಾ|| ಅಚ್ಯುತ್ ಜಗದೀಶ್ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ, ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
Veekay News > Feature Article > Cultural > ಕು|| ಪ್ರಿಯಾಂಕಾ ಶ್ರೀನಿವಾಸ್ “ಭರತನಾಟ್ಯ ರಂಗಪ್ರವೇಶ”
ಕು|| ಪ್ರಿಯಾಂಕಾ ಶ್ರೀನಿವಾಸ್ “ಭರತನಾಟ್ಯ ರಂಗಪ್ರವೇಶ”
ವೀ ಕೇ ನ್ಯೂಸ್26/09/2025
posted on





















