Live Stream

[ytplayer id=’22727′]

| Latest Version 8.0.1 |

Chamarajanagar

ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ, ಕಬಡ್ಡಿ ಪಂದ್ಯಾವಳಿ

ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ, ಕಬಡ್ಡಿ ಪಂದ್ಯಾವಳಿ

ಚಾಮರಾಜನಗರ: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಅಮಚವಾಡಿ ಚೆನ್ನಪ್ಪನಪುರ ಗ್ರಾಮದ ಮಧ್ಯ ಭಾಗದಲ್ಲಿರುವ ಮೈದಾನದಲ್ಲಿ ಶ್ರೀ ಕೃಷ್ಣ ಕಬಡ್ಡಿ ಪಂದ್ಯಾವಳಿಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಶ್ರೀ ಎಚ್ ವಿ ಚಂದ್ರುರವರು ಉದ್ಘಾಟಿಸಿದರು.


ಅವರು ಮಾತನಾಡಿ ಕಬ್ಬಡ್ಡಿ ಭಾರತೀಯ ಸಾಂಪ್ರದಾಯಿಕ ಕ್ರೀಡೆ . ಕಬಡ್ಡಿ ಸ್ಪರ್ಧೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಇದು ಭಾರತದ ಕ್ರೀಡೆಯಾಗಿದ್ದು ,ಹಳ್ಳಿಗಳಲ್ಲಿ ಮತ್ತೊಮ್ಮೆ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಮನುಷ್ಯ ಹೇಗೆ ಸಿರಿಧಾನ್ಯಗಳಿಗೆ ಮತ್ತೆ ಮೊರೆ ಹೋಗುತ್ತಿದ್ದಾರೋ ಹಾಗೆ ಭಾರತೀಯ ಕ್ರೀಡೆಗಳಿಗೆ ಮತ್ತೆ ಮಹತ್ವ ಬಂದಿದೆ. ವಿಶೇಷವಾದ ಸ್ಪೂರ್ತಿ ತುಂಬುತ್ತಿದೆ. ಶ್ರೀ ಕೃಷ್ಣ ಪ್ರತಿಷ್ಠಾನ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇಶಿಯ ಕ್ರೀಡೆಗಳನ್ನು ರೂಪಿಸಿಕೊಂಡು ಯುವಕರನ್ನು ಪ್ರೋತ್ಸಾಹಿಸುತ್ತಿರುವುದು ಬಹಳ ಸಂತೋಷವಾದದ್ದು . ಅಮಚವಾಡಿ ಯಲ್ಲಿ ನೂರಾರು ಕ್ರೀಡಾ ಕಬಡ್ಡಿ ಪ್ರತಿಭೆಗಳು ಕೀರ್ತಿವಂತರಾಗಿದ್ದಾರೆ. ನಿರಂತರ ಶ್ರಮ, ಆಸಕ್ತಿಯಿಂದ ವಿದ್ಯಾಭ್ಯಾಸದ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಕೀರ್ತಿ ಪಡೆಯಿರಿ ಎಂದರು.

ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಶ್ರೀ ಕೃಷ್ಣ ಪ್ರತಿಷ್ಠಾನ ಕಳ್ಳದ 15 ವರ್ಷಗಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ಆಚರಿಸುವ ಮೂಲಕ ಸಾಂಸ್ಕೃತಿಕ ಏಕತೆ ,ಆಧ್ಯಾತ್ಮಿಕ ಚಿಂತನೆ ಹಾಗೂ ಸಾಮೂಹಿಕ ಸಂಘಟನೆಗೆ ಸ್ಪೂರ್ತಿ ನೀಡುತ್ತಿದೆ. ಯುವಕರಲ್ಲಿ ಹೊಸ ಶಕ್ತಿಯನ್ನು ಹಾಗೂ ಪ್ರತಿಭಾವಿಕಸಕ್ಕೆ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡು ಯುವಶಕ್ತಿಯನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದೆ. ಶ್ರೀ ಕೃಷ್ಣನ ಹೆಸರಿನಲ್ಲಿ ಕಬ್ಬಡ್ಡಿ ಸ್ಪರ್ಧೆ, ಕೆಸರುಗದ್ದೆ ಓಟ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಶ್ರೀ ಕೃಷ್ಣ ಕವನ ಸ್ಪರ್ಧೆ ಹಾಗೂ ಶ್ರೀ ಕೃಷ್ಣ ಹಾಗೂ ರಾಧೆಯರ ವೇಷ ಸ್ಪರ್ಧೆಗಳ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳು ಮತ್ತು ಯುವಕರನ್ನು ಆಧ್ಯಾತ್ಮಿಕ ಜಾಗೃತಿ ಹಾಗೂ ರಾಷ್ಟ್ರೀಯ ಮೌಲ್ಯಗಳ ಬಗ್ಗೆ ಅರಿವನ್ನು ಉಂಟುಮಾಡುವ ದಿಕ್ಕಿನಲ್ಲಿ ಸಮಾಜಮುಖಿ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಆಗಸ್ಟ್ 31ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಪ್ರತಿಯೊಂದು ಮನೆಯಿಂದಲೂ ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧೆಯ ವೇಷ ಧಾರಣೆಯೊಂದಿಗೆ ಆಗಮಿಸಿ ಮೊಸರು ಮಡಿಕೆ ಒಡೆಯುವ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಪರಂಪರೆಯ ಮೌಲ್ಯವನ್ನು ತಿಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವ ಕಾರ್ಯವನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸುರೇಶ್ ನಾಗ್ ಹರದನಹಳ್ಳಿ , ಮಾತನಾಡಿ ಶ್ರೀ ಕೃಷ್ಣ ಕವನ ಸ್ಪರ್ಧೆ ಹಾಗೂ ಹೂ ಕಟ್ಟುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು. ಕಬ್ಬಡ್ಡಿ ತರಬೇತುದಾರ ಪ್ರಸಾದ್ ಅಮಚವಾಡಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಸಾದ್ ರವರು ಕಬಡ್ಡಿ ತರಬೇತಿದಾರರಾಗಿ ಗ್ರಾಮೀಣ ಪ್ರದೇಶದ ನೂರಾರು ಯುವಕ ಯುವತಿಯರಿಗೆ ಮಾರ್ಗದರ್ಶಕರಾಗಿ ಕಬಡ್ಡಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆ ಎಂದು ಋಗ್ವೇದಿ ತಿಳಿಸಿದರು. ಆರ್ ಬಿಸಿ ಕ್ಲಬ್ ಸಂಸ್ಥೆಯ ಸದಸ್ಯರು ಇದ್ದರು. ಕಬ್ಬಡ್ಡಿ ಪಂದ್ಯಾವಳಿ ರೋಚಕವಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹೊರತಂದಿರುವ ಪ್ರಚಾರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";