ನವದೆಹಲಿ: ಖ್ಯಾತ ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರನ್ನು ನವದೆಹಲಿ 2025 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ಘೋಷಿಸಿದೆ,
ಈ ಹೊಸ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಕಂಗನಾ, ಭಾರತದ ಪ್ಯಾರಾ ಅಥ್ಲೀಟ್‍ಗಳು ಪ್ರತಿದಿನ ಅದ್ಭುತ ಸಾಧನೆಗಳ ಇತಿಹಾಸವನ್ನು ಪುನಃ ಬರೆಯುತ್ತಿದ್ದಾರೆ, ಅವರನ್ನು ಬೆಂಬಲಿಸಲು ಮತ್ತು ಅವರ ಅದ್ಬುತ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ, ಪ್ಯಾರಾ ಕ್ರೀಡೆ ಕೇವಲ ಸ್ಪರ್ಧೆಯ ಬಗ್ಗೆ ಅಲ್ಲ, ಇದು ಧೈರ್ಯವನ್ನು ತೋರಿಸುತ್ತದೆ, ಮತ್ತು ನಮ್ಮ ಚಾಂಪಿಯನ್ ಗಳ ಹಿಂದೆ ನಿಲ್ಲಲು ನನಗೆ ತುಂಬಾ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ,
ಕಂಗನಾ ರನೌತ್ ಅವರ ಧ್ವನಿಯ ಪ್ಯಾರಾ ಕ್ರೀಡೆಗಳೊಂದಿಗೆ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವಿಕೆಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಮತ್ತು ದೇಶಾದ್ಯಂತ ಮುಂದಿನ ಪೀಳಿಗೆಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಸ್ಫೋರ್ತಿ ನೀಡುತ್ತದೆ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ಹೇಳಿದೆ,
Veekay News > National News > ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಗೆ ಕಂಗನಾ ರನೌತ್ ರಾಯಭಾರಿ!
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಗೆ ಕಂಗನಾ ರನೌತ್ ರಾಯಭಾರಿ!
ವೀ ಕೇ ನ್ಯೂಸ್18/06/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply