ಬೆಂಗಳೂರು,ಆ.14: ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದಿಂದ ಬೆಂಗಳೂರಿನಲ್ಲಿ ತನ್ನ ಕಾರುಗಳ ಮಾರಾಟ ಜಾಲ ವಿಸ್ತರಣೆಯಾಗಿದ್ದು, ಯಲಹಂಕದ ಕೋಗಿಲು ಕ್ರಾಸ್ ನ ಸರ್ವೀಸ್ ರಸ್ತೆಯಲ್ಲಿ ಅತ್ಯಾಧುನಿಕ, ಸುಸಜ್ಜಿತ ಹೊಸ ಶೋರೂಮ್ ಶುಭಾರಂಭವಾಗಿದೆ.
7,000 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಶೋರೂಮ್ನಲ್ಲಿ 7 ಕಾರುಗಳ ಪ್ರದರ್ಶನ ಸ್ಥಳವಿದ್ದು, ಆಧುನಿಕ ಎಂಜಿ ಮಾದರಿಗಳನ್ನು ಅನಾವರಣಗೊಳಿಸಲಾಗಿದೆ. ಕಾರು ಖರೀದಿದಾರರು ಎಂಜಿ ಹೆಕ್ಟರ್, ಅಸ್ಟರ್, ಗ್ಲೋಸ್ಟರ್ ಹಾಗೂ ಮೆಚ್ಚುಗೆ ಪಡೆದಿರುವ ಎಲೆಕ್ಟ್ರಿಕ್ ವಾಹನಗಳ ಸರಣಿ – ಕಾಮೆಟ್, ಝಡ್ ಎಸ್ ಇವಿ ಮತ್ತು ಭಾರತದ ಅತ್ಯಂತ ಹೆಚ್ಚು ಮಾರಾಟವಾಗಿರುವ ವಿಂಡ್ಸರ್ ಇವಿ, ಎಂಜಿ ಅರ್ಥ ಕಾರ್ಸ್, ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಗಳ ಮೂಲಕ ಇಂಡಿಯಾದ ಜಾಲ ವಿಸ್ತರಣೆ ಮಾಡಲಾಗಿದೆ. ಅತ್ಯುತ್ತಮ ಖರೀದಿ ಮತ್ತು ಮಾಲೀಕತ್ವದ ಅನುಭವವನ್ನು ನೀಡುವ ತನ್ನ ತಂತ್ರಜ್ಞಾನ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಈ ಮೂಲಕ ಕಂಪನಿ ರಾಜ್ಯದಲ್ಲಿ 14 ಕೇಂದ್ರಗಳನ್ನು ತೆರೆದಂತಾಗಿದೆ.
ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ ಮಾತನಾಡಿ, “ಕರ್ನಾಟಕ ನಮ್ಮ ಅತ್ಯಂತ ಮುಖ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಒಟ್ಟು ಮಾರಾಟದಲ್ಲಿ ಮಹತ್ವದ ಪಾಲು ಹೊಂದಿದೆ. ಬೆಂಗಳೂರಿನಲ್ಲಿ ನಮ್ಮ ಹೊಸ ಶೋರೂಮ್ ಮೂಲಕ, ಗ್ರಾಹಕರಿಗೆ ಭವಿಷ್ಯದ ಉತ್ಪನ್ನಗಳು ಪಡೆಯಲು ಹಾಗೂ ಗ್ರಾಹಕ ಕೇಂದ್ರಿತ ಸೇವಾ ದೃಷ್ಟಿಕೋನವನ್ನು ಇನ್ನಷ್ಟು ಹತ್ತಿರ ತರುತ್ತಿದ್ದೇವೆ. ಇದು ನಿರಂತರ ಮಾರಾಟ ಮತ್ತು ನಂತರದ ಸೇವಾ ಅನುಭವವನ್ನು ಖಚಿತಪಡಿಸುತ್ತದೆ.” ಎಂದರು.
ಸಮಾರಂಭದಲ್ಲಿ ಎಂಜಿ ಅರ್ಥ ಕಾರ್ಸ್ನ ಡೀಲರ್ ಪ್ರಿನ್ಸಿಪಲ್ ನಿಕ್ಕಿತಾ ಪರಮೇಶ್ ಮಾತನಾಡಿ, ಎಂಜಿ ಮೋಟಾರ್ನ ಭಾರತ ಪ್ರವೇಶದ 6ನೇ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಗುರುತಿಸಲು, ಹೆಕ್ಟರ್ ಮತ್ತು ಅಸ್ಟರ್ ಸೇರಿದಂತೆ ಆಯ್ದ ಮಾದರಿಗಳ ಮೇಲೆ ಸೀಮಿತ ಅವಧಿಯ ವಿಶೇಷ ಆಫರ್ಗಳನ್ನು ಘೋಷಿಸಲಾಗಿದೆ, ಇದರಿಂದ ಹೆಚ್ಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ಎಸ್.ಯು.ವಿಗಳನ್ನು ಸುಲಭವಾಗಿ ಪಡೆಯುವ ಅವಕಾಶ ಸಿಗಲಿದೆ. ಈ ಸೌಲಭ್ಯವು ಗ್ರಾಹಕರಿಗೆ ವಿಶಿಷ್ಟವಾದ ಖರೀದಿ ಅನುಭವವನ್ನು ಒದಗಿಸುವುದರೊಂದಿಗೆ, ಭವಿಷ್ಯಕ್ಕೆ ಸಿದ್ದವಾದ ಶಾಶ್ವತ ಸಂಚಾರದತ್ತ ಎಂಜಿ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು.