ಬೆಂಗಳೂರು: ಪ್ರಜಾಪ್ರಭುತ್ವದ 4 ನೇ ಅಂಗ ಎಂದು ಪರಿಗಣಿಸಲಾಗುವ ಪತ್ರಿಕೋದ್ಯಮವು ಯಾವುದೇ ಪಕ್ಷ ಪರ ನಿಲುವು ತಾಳದೇ ಜನಪರವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು,
ವಾರ್ತಾಸೌಧದಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆ 2025 ಹಾಗೂ ನಿಜ ಸುದ್ದಿಯಾಗಿ ಸಮರ ಸಂವಾದವನ್ನು ಉದ್ಘಾಟಿಸಿ ಪತ್ರಕರ್ತರು ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದ ಪತ್ರಿಕೋದ್ಯಮ ಮತ್ತು ಇಂದಿನ ಪತ್ರಿಕೋದ್ಯಮದ ಸುದ್ದಿ ಪ್ರಸಾರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚಿರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು, ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು,
ಪತ್ರಕರ್ತರು ನಿರ್ಭೀತಿಯಿಂದ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು, ಸುಳ್ಳು ಸುದ್ದಿ ಹರಡಿ ಮತ್ತೆ ಬದಲಾಯಿಸುವುದು ಇದ್ಯಾವ ರೀತಿಯ ಪತ್ರಿಕೋದ್ಯಮ ಎಂದು ಸಿಎಂ ಪ್ರಶ್ನಿಸಿದರು, ಯಾವುದೇ ಊಹಾಪೋಹಗಳಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು, ಸುಳ್ಳು ಸುದ್ದಿ ಹರಡವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ, ತನಿಖೆ ಮಾಡಿ ಸುದ್ದಿ ಮಾಡಿ ಎಂದು ಕಿವಿಮಾತು ಹೇಳಿದ ಸಿಎಂ ಸುಳ್ಳು ಮತ್ತು ದ್ವೇಷದ ಸುದ್ದಿ ಹರಡುವವರ ವಿರುದ್ಧ ಕಾನೂನು ತರಲು ಮುಂದಾಗಿದ್ದೇವೆ ಎಂದು ಸಿಎಂ ಇದೇ ವೇಳೆ ತಿಳಿಸಿದರು,
ದ್ವೇಷ ಹರಡುವ ಪ್ರಯತ್ನಕ್ಕೆ ಯಾವುದೇ ಸಹಾಯ ಮಾಡಬಾರದು, ದೇಶದ ಆಡಳಿತ ಹಿಡಿದಿರುವವರ ಬಗ್ಗೆಯಾಗಲಿ ನನ್ನ ಪರವಾಗಿಯೂ ಮಾತನಾಡಬಾರುದ, ಸತ್ಯವನ್ನೇ ಪತ್ರಕರ್ತರು ಜನರ ಮುಂದಿಡಬೇಕು,ಎಲ್ಲರಿಗೂ ಸಮಾನವಾದ ಅವಕಾಶ ಇರುವಂತಹ ಸಮಾಜ ನಿರ್ಮಾನವಾಗಬೇಕು, ಮಾನವೀಯ ಸಮಾಜಬೇಕು, ಪರಸ್ಪರ ಪ್ರೀತಿಸುವಂತಹ ಸಮಾಜಬೇಕು ಎಂದು ಸಿಎಂ ಪ್ರತಿಪಾದಿಸಿದರು,
ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಊಹಾ ಪತ್ರಿಕೋದ್ಯಮ ಪ್ರತಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ ತಂದೊಡುತ್ತವೆ, ಮಾಧ್ಯಮ ಸ್ವತಂತ್ರವಾಗಿ ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು ಎಂದು ಸಿಎಂ ಹೇಳಿದರು,
Veekay News > State News > ಪತ್ರಿಕೋದ್ಯಮ ಜನಪರವಾಗಿರಬೇಕು-ಸಿಎಂ
ಪತ್ರಿಕೋದ್ಯಮ ಜನಪರವಾಗಿರಬೇಕು-ಸಿಎಂ
ವೀ ಕೇ ನ್ಯೂಸ್01/07/2025
posted on
