Live Stream

[ytplayer id=’22727′]

| Latest Version 8.0.1 |

State News

ಮಠ ಸೇರಿಕೊಂಡು ಆಮೇಲೆ ಜ್ಯೋತಿಷ್ಯ ಹೇಳಲಿ-ಸವದಿ ಲೇವಡಿ

ಬೆಂಗಳೂರು: ಮುಂದಿನ ದಸರಾ ಹಬ್ಬದ ಒಳಗೆ ರಾಜ್ಯದ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ನೀಡಿದ್ದ ಹೇಳಿಕೆಗೆ ಶಾಸಕ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ,
ಅಶೋಕ್ ಅವರು ನಮ್ಮ ಬಬಲಾದಿ ಮಠಕ್ಕೆ ಬಂದು ಒಂದು ತಿಂಗಳು ಇದ್ದು, ಸಾಧನೆ ಮಾಡಿ ಬಳಿಕ ಜ್ಯೋತಿಷ್ಯ ಹೇಳಲಿ ಎಂದು ಅವರು ಟಾಂಗ್ ನೀಡಿದ್ದಾರೆ,
ಅಶೋಕ್ ಅವರು ನನ್ನ ಆತ್ಮೀಯರಾಗಿದ್ದಾರೆ, ರಾಜಕೀಯವಾಗಿ ನನಗಿಂತ ಹಿರಿಯರೂ ಆಗಿದ್ದಾರೆ, ಅದರೂ ಅವರು ಜ್ಯೋತಿಷ್ಯ ಹೇಳುವುದನ್ನೇ ವೃತ್ತಿಯಾಗಿಸಿಕೊಳ್ಳಬೇಕು ಎಂದಿದ್ದಾರೆ, ಬಬಲಾದಿ ಮಠಕ್ಕೆ ಸೇರಿಸುವ ಜವಾಬ್ದಾರಿ ನನ್ನದು ಎಂದು ಲಕ್ಷ್ಮಣ್ ಸವದಿ ಹೇಳಿದರು,
ದೋಷಿಗಾರ ಎಂದುಕೊಂಡು ಹಾಸಿಗ್ಯಾಗ ಸತ್ತ ಎಂದು ನಮ್ಮ ಕಡೆ ಒಂದು ಗಾದೆಯಿದೆ, ಇದೇ ರೀತಿ ಆರ್ ಅಶೋಕ್ ತಮ್ಮ ರಾಜಕೀಯ ಭವಿಷ್ಯ ಹೇಳುವುದನ್ನು ಮಠಕ್ಕೆ ಬಂದು ಸಾಧನೆ ಮಾಡಿ ಕಲಿಯಲಿ ಎಂದು ಸವದಿ ಟಾಂಗ್ ನೀಡಿದ್ದಾರೆ.

ವೀ ಕೇ ನ್ಯೂಸ್
";