Live Stream

[ytplayer id=’22727′]

| Latest Version 8.0.1 |

CulturalState News

ಬೆಂಗಳೂರಿನಲ್ಲಿ ‘ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು !’

ಬೆಂಗಳೂರಿನಲ್ಲಿ ‘ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು !’
ಈ ಕುರಿತು ವಿಶೇಷ ಸಂವಾದ ಸಂಪನ್ನ !
ರಾಷ್ಟ್ರನಿಷ್ಠ ವಕೀಲರು, ಉದ್ಯಮಿಗಳು, ಸೇರಿದಂತೆ 350 ಕ್ಕೂ ಅಧಿಕ ಮಂದಿ ಸಹಭಾಗ

“ಹಿಂದೂ ಜೀವನಶೈಲಿ ಎಲ್ಲವನ್ನೂ ರಕ್ಷಿಸುವ ಚಿಂತನೆಯಾಗಿದೆ. ಆದರೆ ಇಂದಿನ ಕಾಲದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ತರುವ ಚಿಂತನೆಗಳನ್ನು ಪೋಷಿಸಲಾಗುತ್ತಿದೆ. ಇತರ ಪಂಥಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿರುವಂತೆ ತೋರಿಸಲಾಗುತ್ತಿದೆಯಾದರೂ, ಸನಾತನ ಧರ್ಮದ ನಾಶಕ್ಕೆ ಕಾನೂನಿನ ಸಹಕಾರವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಹಿಂದೂ ಧರ್ಮವು ಮತವಲ್ಲ. ಮತಗಳು ಸಂಕುಚಿತ ಪರಿಕಲ್ಪನೆಯಾಗಿವೆ; ಕೆಲ ಪಂಥಗಳಲ್ಲಿ ಬದಲಾವಣೆಗೇ ಅವಕಾಶವಿಲ್ಲ. ಆದರೆ ಭಾರತದ ಚಿಂತನೆ ಈ ಸಂಕುಚಿತ ಪರಿಕಲ್ಪನೆಗಳಿಗೆ ವಿರುದ್ಧ. ಹಿಂದೂ ಧರ್ಮವು ಎಲ್ಲವನ್ನೂ ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಅದಕ್ಕಾಗಿ ಇದನ್ನು ವಿಶಾಲ ಆಲದ ಮರವೆಂದು ಕರೆಯಬಹುದು  ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ. ಪಿ. ಕೃಷ್ಣ ಭಟ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಆಡಿಟೋರಿಯಂ, ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಂವಾದ ಟಿವಿಯ ಸಂಪಾದಕರಾದ ಶ್ರೀ. ವೃಷಾಂಕ ಭಟ್,  ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ್ಯ ಅಧ್ಯಕ್ಷರಾದ ಶ್ರೀ. ದೀಪಕ್ ರಾಜಗೋಪಾಲ್, ಶ್ರೀ. ಸಂದೀಪ್ ಬಾಲಕೃಷ್ಣ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರು, ದಿ ಧರ್ಮ ಡಿಸ್ಪ್ಯಾಚ್, ಸ್ಟ್ರಿಂಗ್ ರಿವಿಲ್ಸ್ ನ ಶ್ರೀ. ವಿನೋದ್, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಸೇರಿದಂತೆ 350ಕ್ಕೂ ಅಧಿಕ ರಾಷ್ಟ್ರ- ಧರ್ಮ ಪ್ರಮಿ ಹಿಂದೂಗಳು ಉಪಸ್ಥಿತರಿದ್ದರು.

 ಹಿಂದೂ ಧರ್ಮವನ್ನು ಪಂಥಗಳೊಂದಿಗೆ ಹೋಲಿಕೆ ಯೋಗ್ಯವಲ್ಲ !
– ಶ್ರೀ. ಸಂದೀಪ್ ಬಾಲಕೃಷ್ಣ, ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರು, ದಿ ಧರ್ಮ ಡಿಸ್ಪ್ಯಾಚ್

ಇಬ್ರಹಾಮಿಕ್ ಧರ್ಮಗಳೊಂದಿಗೆ ಹಿಂದೂ ಧರ್ಮವನ್ನು ಹೋಲಿಸಲಾಗದು. ಅವುಗಳ ಕೇವಲ ಪುಸ್ತಕದ ಆಧಾರದಲ್ಲಿ ನಡೆಯುತ್ತಿದ್ದು ಸಂಕುಚಿತ ವಿಚಾರಧಾರೆಯಾಗಿದೆ, ‘ಹಿಂದೂ’ ಇದೊಂದೇ ಧರ್ಮವಾಗಿದ್ದು, ಇತರ ಎಲ್ಲವೂ ಪಂಥಗಳಾಗಿವೆ. ನಾವು ಹಿಂದೂಗಳು ಇಂತಹ ತುಷ್ಟೀಕರಣಕ್ಕೆ ಬಲಿಯಾಗಬಾರದು ಎಂದರು.

ಜಾಗೃತಿ ಐಕ್ಯತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ ! – ಶ್ರೀ. ದೀಪಕ್ ರಾಜಗೋಪಾಲ್, ದಕ್ಷಿಣ ಪ್ರಾಂತ್ಯ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್
ಸದ್ಯ ಇತರ ಪಂಥಗಳನ್ನು ಹೊರತು ಪಡಿಸಿ ನಮ್ಮಲ್ಲಿಯೇ ಅನೇಕ ಮಂದಿ ಧರ್ಮದ ಅಪಪ್ರಚಾರ ಮಾಡುವಲ್ಲಿ ತೊಡಗಿದ್ದಾರೆ, ಅದಕ್ಕಾಗಿ ಹಿಂದೂಗಳು ಹಿಂದೂ ಧರ್ಮದ ಪ್ರಸಾರವನ್ನು ಮಾಡುವ ಮಠ, ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳೊಂದಿಗೆ ಸೇರಿ, ನಿಯಮಿತ ಸತ್ಸಂಗಗಳನ್ನು ಮಾಡಬೇಕು ಮತ್ತು ಈ ಸತ್ಸಂಗಗಳಲ್ಲಿ ನಮ್ಮ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಅದಕ್ಕಾಗಿ ಯೋಜನೆಗಳನ್ನು ಹುಡುಕಬೇಕು, ಈ ಮೂಲಕ ಒಟ್ಟಾಗಬೇಕು ಎಂದು ತಿಳಿಸಿದರು.


ಜನಸಂಖ್ಯಾ ಬದಲಾವಣೆ : ರಾಷ್ಟ್ರದ ಭವಿಷ್ಯದ ಎಚ್ಚರಿಕೆ ! – ಶ್ರೀ. ವಿನೋದ್, ಸಂಸ್ಥಾಪಕರು, ಸ್ಟ್ರಿಂಗ್ ರಿವೀಲ್ಸ್

ಜನರಾಶಿ ಮತ್ತು ಜನಸಂಖ್ಯೆ ಪರಸ್ಪರ ಅವಿಭಾಜ್ಯ ಎಂಬುದನ್ನು ಒತ್ತಿ ಹೇಳಿದರು. ನಮ್ಮ ದೇಶದ ಜನಸಂಖ್ಯಾ ಬದಲಾವಣೆಗಳ ವಿಷಯವನ್ನು ನಾವು ಗಮನಿಸಬೇಕಾಗಿದೆ. ನಾವು ಮೇಲ್ನೋಟಕ್ಕೆ ಬಹುಸಂಖ್ಯಾತ ಸಮಾಜ ಎನಿಸಿದ್ದರೂ ಅದರಲ್ಲಿ ಎಷ್ಟು ಜನ ಮತಾಂತರಗೊಂಡಿದ್ದಾರೆ ? ಎಷ್ಟು ಜನ ಧರ್ಮದ ವಿಚಾರಧಾರೆಗಳ ವಿರುದ್ಧ ನಿಂತಿದ್ದಾರೆ ? ಎಷ್ಟು ಜನ ಶ್ರದ್ಧೆಯಿಂದ ಧರ್ಮಪಾಲನೆ ಮಾಡುತ್ತಿದ್ದಾರೆ ಈ ರೀತಿಯಲ್ಲಿ ನಿಜವಾಗಿ ಅವಲೋಕನ ಮಾಡಬೇಕಿದೆ ಮತ್ತು ಶ್ರದ್ಧಾವಂತ ಸಮಾಜದ ನಿರ್ಮಾಣವಾಗಬೇಕಿದೆ ಎಂದರು.

ದೇವಾಲಯದಿಂದ ಬೌದ್ಧಿಕ ಆಕ್ರಮಣದವರೆಗೆ ನಡೆದು ಬಂದ ದಾಳಿ; ಮುಂದೇನು ? – ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದು ಜನಜಾಗೃತಿ ಸಮಿತಿ

ಇವರು ಹಿಂದೂ ಧರ್ಮವನ್ನು ಗುರಿಯಾಗಸಿ ನಡೆಸಲಾಗುತ್ತಿರುವ ಯತ್ನಗಳ ಕಾಲಕ್ರಮದ ಬಗ್ಗೆ ಮಾತನಾಡಿದರು. ಮೊದಲು ದೇವಾಲಯ ಹಾಗೂ ಧಾರ್ಮಿಕ ಕಟ್ಟಡಗಳ ಧ್ವಂಸದ ಮೂಲಕ ಶಾರೀರಿಕ ಮಟ್ಟದಲ್ಲಿ ಆಕ್ರಮಣಗಳು ನಡೆಯುತ್ತಿದ್ದವು. ನಂತರ ಸಂಸ್ಕೃತಿಯ ಮೇಲೆ ಆಘಾತ, ಈಗ ಆಕ್ರಮಣಗಳು ಬೌದ್ಧಿಕ ಮಟ್ಟದಲ್ಲಿ, ಯುಕ್ತಿವಾದಿಗಳು, ಎಡಪಂಥೀಯ ಕಾರ್ಯಕರ್ತರು ಮತ್ತು ಲೇಖಕರ ಮುಖಾಂತರ ಹೆಚ್ಚಾಗಿವೆ. ಇತ್ತೀಚಿನ ಕಾಲದಲ್ಲಿ ಶನಿಶಿಂಗಣಾಪುರ ಘಟನೆ, ಶಬರಿಮಲಾ ದೇವಸ್ಥಾನ ವಿವಾದ ಕೊನೆಯದಾಗಿ ಧರ್ಮಸ್ಥಳವನ್ನು ಕಳಂಕಗೆಡುವ ದುರುದ್ದೇಶಪೂರಿತ ಪ್ರಯತ್ನಗಳ ಬಗ್ಗೆ ತಿಳಿಸಿದರು.
ಗೌರಿ ಲಂಕೇಶ್ ಹತ್ಯೆಯ ನಂತರ, ರಾಜ್ಯದಲ್ಲಿ ಸನಾತನ ಸಂಸ್ಥೆ ಮತ್ತು ಇತರ ಹಿಂದೂ ಸಂಘಟನೆಗಳನ್ನು ಕೇಸರಿ ಭಯೋತ್ಪಾದನೆ ಎಂದು ತಪ್ಪು ಪ್ರಚಾರ ನಡೆಸುವ ಪ್ರಯತ್ನಗಳಾಯಿತು. ಗೌರಿ ಲಂಕೇಶ್ ಹತ್ಯೆಯ ಬಳಿಕ ಸುಮಾರು 20 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಲಾಗಿತ್ತು. ಈಗ ಸೌಜನ್ಯ ಪ್ರಕರಣದಲ್ಲಿ ಎಡಪಂಥೀಯರ ಹಸ್ತಕ್ಷೇಪವನ್ನು ನೋಡಬಹುದು. ಈ ಬೌದ್ಧಿಕ, ಸಿದ್ಧಾಂತಪೂರ್ಣ ಉಪದ್ರವಗಳಿಗೆ ಪ್ರತ್ಯುತ್ತರ ನೀಡಬೇಕಾದ ಸಮಯ ಬಂದಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಯುಟ್ಯೂಬ್ ಮತ್ತು ಫೇಸ್ಬುಕ್ ಮುಖಾಂತರ ನೇರ ಪ್ರಸಾರ ಮಾಡಲಾಯಿತು, 5000ಕ್ಕೂ ಹೆಚ್ಚು ಜನರು ನೇರ ಪ್ರಸಾರವನ್ನು ವೀಕ್ಷಿಸಿದರು.
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";