Live Stream

[ytplayer id=’22727′]

| Latest Version 8.0.1 |

State NewsTrade & Commerce

*ಮಹಿಳಾ ಉದ್ಯಮಿಗಳು ಡಿಜಿಟಲ್‌ ಕೌಶಲ್ಯವನ್ನು ಅರಿತರೆ ಭಾರತದ ಆರ್ಥಿಕತೆ ಅಭಿವೃದ್ಧಿಯಾಗಲಿದೆ*

*ಮಹಿಳಾ ಉದ್ಯಮಿಗಳು ಡಿಜಿಟಲ್‌ ಕೌಶಲ್ಯವನ್ನು ಅರಿತರೆ ಭಾರತದ ಆರ್ಥಿಕತೆ ಅಭಿವೃದ್ಧಿಯಾಗಲಿದೆ*
ಬೆಂಗಳೂರು, ಜು.11:  ಉಬುಂಟು ನಿಯೋಗದ ವತಿಯಿಂದ LEXSHIP, UN ESCAP, ಹೆಚ್‌ಡಿಎ ಮೋಟಾರ್ಸ್‌ ಸಹಯೋಗದೊಂದಿಗೆ ಮಹಿಳಾ ಉದ್ಯಮಿಗಳ ಕೌಶಲ್ಯ ಅಭಿವೃದ್ಧಿ ಕುರಿತಾದ ರಾಷ್ಟ್ರೀಯ ಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ  ಶಾಸಕರ ಭವನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್‌ ಹೇಮಲತಾ ಗೋಪಾಲಯ್ಯ ಅವರು ಮಾತನಾಡಿ, ಡಿಜಿಟಲ್‌ ತಂತ್ರಜ್ಞಾನದ ಕುರಿತು ಮಹಿಳೆಯರಿಗೆ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಹಿಳೆಯರು ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತಳಾಗಿಲ್ಲ ಟೈಲರಿಂಗ್‌, ಬ್ಯೂಟಿ ಪಾರ್ಲರ್‌, ಅಡುಗೆ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಅವರಿಗೂ ಡಿಜಿಟಲ್‌ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳನ್ನು ಮಹಿಳಾ ಉದ್ಯಮಿಗಳು ಉಪಯೋಗಿಸಿಕೊಳ್ಳಬೇಕು ಎಂದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ, ಮಹಾಲಕ್ಷ್ಮಿ ಲೇಔಟ್ ಟ್ರಸ್ಟ್‌ನ ಸದಸ್ಯರಾಗಿ 4,500 ಮಹಿಳಾ ಸಂಘಗಳನ್ನು ಹೊಂದಿದ್ದೇವೆ. ಅನೇಕರು ಟ್ರಸ್ಟ್ ಮೂಲಕ ಅಡುಗೆ, ಟೈಲರಿಂಗ್, ಹೆಣಿಗೆ ಮತ್ತು ಕಸೂತಿ ಕೆಲಸಗಳನ್ನು ಕೈಗೊಂಡಿದ್ದಾರೆ. ಈ ಮಹಿಳೆಯರು ಗಳಿಸುವುದರ ಜೊತೆಗೆ ಇತರರಿಗೂ ಕಲಿಸಿಕೊಡುತ್ತಾರೆ ಎಂದು ಹೇಮಲತಾ ಗೋಪಾಲಯ್ಯ  ತಿಳಿಸಿದರು.
ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ನಿಯೋಗದ ಸ್ಥಾಪಕರಾದ ಕೆ. ರತ್ನಪ್ರಭಾ ಮಾತನಾಡಿ, ಕೋವಿಡ್‌ ವೇಳೆ ಮಹಿಳಾ ಉದ್ಯಮಿಗಳಿಗೆ ದೊಡ್ಡ ಆಘಾತ ಎದುರಾಗಿತ್ತು. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳಿಗೆ ಆನ್‌ಲೈನ್‌ ಮೂಲಕ ತರಬೇತಿ ಆರಂಭಿಸಿದ್ದೆವು. 100ಕ್ಕೂ ಹೆಚ್ಚು ಮಹಿಳೆಯರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು, ನಂತರದಲ್ಲಿ  ಉದ್ಯಮದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡರು. ಈ ರೀತಿಯ ಯಶಸ್ಸಿನ ಮಹಿಳಾ ಉದ್ಯಮಿಗಳು ವಿದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡಲಾಯಿತು. ಇದರಿಂದ ಇತರ ಮಹಿಳೆಯರೂ ಪ್ರೇರಿತರಾದರು. ಮಹಿಳೆಯರು ಆಧುನಿಕ ತಂತ್ರಜ್ಞಾನಗಳ ಕುರಿತಾದ ಕೌಶಲ್ಯದ ಕೊರತೆಯಿಂದಾಗಿ ಮುಂದುವರೆಯಲು ಹಿಂಜರಿಯುತ್ತಾರೆ. ಆದರೆ ಈ ರೀತಿಯ ಕಾರ್ಯಕ್ರಮಗಳು ಅವರಿಗೆ ಮಾನಸಿಕವಾಗಿ ಧೈರ್ಯವನ್ನು ತುಂಬುವ ಕೆಲಸ ಮಾಡುತ್ತದೆ. ಈ ಕಾರ್ಯಗಾರವು ಮಹಿಳಾ ಉದ್ಯಮಿಗಳಿಗೆ ಹೂಡಿಕೆ ಇದ್ದಂತೆ, ಈ ವರೆಗೆ ನಾವು ಭಾರತದಾದ್ಯಂತ 3,300 ಮಹಿಳೆಯರಿಗೆ ತರಬೇತಿ ನೀಡಿದ್ದೇವೆ. ತರಬೇತಿ ಪಡೆದ ಮಹಿಳೆಯರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
2022 ರಿಂದ ಉಬುಂಟು- ಯುಎನ್ ಇಎಸ್‌ಸಿಎಪಿ ಸಹಯೋಗದೊಂದಿಗೆ ಭಾರತದಾದ್ಯಂತ 3,300ಕ್ಕೂ ಹೆಚ್ಚು ಮಹಿಳೆಯರು ಡಿಜಿಟಲ್ ತಂತ್ರಜ್ಞಾನದ ತರಬೇತಿಯನ್ನು ಪಡೆದಿದ್ದಾರೆ.  ಈ ಕಾರ್ಯಗಾರದಲ್ಲಿ ಪಾಲ್ಗೊಂಡ ಮಹಿಳೆಯರು ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ಆತ್ಮವಿಶ್ವಾಸವುಳ್ಳ ಉದ್ಯಮಿಗಳಾಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮುಂಬರುವ ನವೆಂಬರ್ 19 ರಂದು ‘ಟುಗೆದರ್ ವಿ ಗ್ರೋ’ ಎಂಬ ಪ್ರಮುಖ ಕಾರ್ಯಕ್ರಮ ಮತ್ತು ಆಗಸ್ಟ್ 1 ರಿಂದ 3ರ ವರೆಗೆ BIEC ನಲ್ಲಿ ಅಂತರರಾಷ್ಟ್ರೀಯ ಕೃಷಿ ತಂತ್ರಜ್ಞಾನ ಪ್ರದರ್ಶನವನ್ನು ನಡೆಸುತ್ತಿದ್ದೇವೆ ಎಂದು ಕೆ. ರತ್ನಪ್ರಭಾ ತಿಳಿಸಿದರು.
ಯುಎನ್‌ ಇಎಸ್‌ಸಿಎಪಿ ದಕ್ಷಿಣ ಮತ್ತು ನೈಋತ್ಯ ಏಷ್ಯಾ ಕಚೇರಿಯ ಮುಖ್ಯಸ್ಥರಾದ ಮಿಕಿಕೊ ತನಕಾ ಮಾತನಾಡಿ, ಸಮುದಾಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಭಾರತದಲ್ಲಿ ಕೇವಲ 14%ರಷ್ಟು ಮಹಿಳಾ ಉದ್ಯಮಿಗಳಿದ್ದಾರೆ. 58.5 ಮಿಲಿಯನ್‌ ಉದ್ಯಮಗಳಲ್ಲಿ ಸುಮಾರು 20%ರಷ್ಟು ಎಂಎಸ್‌ಎಂಇ ಗಲ್ಲಿ ತೊಡಗಿಕೊಂಡಿದ್ದಾರೆ. ಎಷ್ಟೇ ಉನ್ನತ ಉದ್ಯಮಿಗಳಾಗಿದರೂ ಡಿಜಿಟಲ್‌ ತಂತ್ರಜ್ಞಾನಗಳ ಕೌಶಲ್ಯ ಕೊರತೆ, ಹಣಕಾಸು ಸೇರಿದಂತೆ ನಾನಾ ಸವಾಲುಗಳನ್ನು ಹೊಂದಿರುತ್ತಾರೆ. ಆದರೆ ಡಿಜಿಟಲ್‌ ಕೌಶಲ್ಯದ ಅರಿವಿನಿಂದ ಅವರು ಮುಂದೆ ಬರುವ ಸಾಧ್ಯತೆ ಮತ್ತು ಅದಕ್ಕೆ ನಾವು ಕಾರ್ಯನಿರತವಾಗಿದ್ದೇವೆ ಎಂದರು.
ಉಬುಂಟುನ ನೆಟ್‌ವರ್ಕ್ ಒಂದು ಪ್ರಮುಖ ವೇದಿಕೆಯಾಗಿದ್ದು, ಮಹಿಳಾ ಉದ್ಯಮಿಗಳಿಗೆ ನಾಯಕತ್ವ ಮನೋಭಾವದ ಜೊತೆಗೆ ಬೆಂಬಲವನ್ನು ಕೂಡ ನೀಡುತ್ತಿದೆ. ಎಐ ನಂತಹ ಆಧುನಿಕ ಆವಿಷ್ಕಾರಗಳ ಬಳಕೆಯಿಂದಾಗಿ ಮಹಿಳಾ ಉದ್ಯಮಿಗಳ ಬೆಳವಣಿಗಾಗಿ ಸುರಕ್ಷಿತವಾದ ವೇದಿಕೆಯನ್ನು ಒದಗಿಸುವ ಕಾರ್ಯವನ್ನು ಮುಂದುವರೆಸಲಿದ್ದೇವೆ ಮಿಕಿಕೊ ತನಕಾ ಹೇಳಿದರು.
LEXSHIP ಸಿಇಒ ಮತ್ತು  ಸಂಸ್ಥಾಪಕರಾದ ಪದ್ಮನಾಭನ್ ಬಾಬು ಮಾತನಾಡಿ, ಯುಎನ್‌ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಮತ್ತು ರಫ್ತು ಕ್ಷೇತ್ರದಲ್ಲಿ ಮಹಿಳೆಯರನ್ನು ಒಳಗೊಂಡಿರುವ ಕುರಿತು ಹೇಳಿದರು. ಭಾರತದ ಜನಸಂಖ್ಯೆಯಲ್ಲಿ 49%ರಷ್ಟು ಮಹಿಳೆಯರಿದ್ದರೂ ಕೇವಲ ೮%ರಷ್ಟು ಮಹಿಳೆಯರು ರಫ್ತು ವ್ಯವಹಾರಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿ ಈ ರೀತಿಯ ಉದ್ಯಮದಲ್ಲಿ 40%ರಷ್ಟು ಮಹಿಳೆಯರು ಒಳಗೊಂಡಿರುತ್ತಾರೆ. ಆರ್ಥಿಕವಾಗಿ ನಾವು ಇನ್ನಷ್ಟು ಸದೃಢರಾಗಲು ಮಹಿಳೆಯರು ಹೆಚ್ಚು ಮುಂದೆ ಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಉಬುಂಟುವಿನ ಕಾರ್ಯಕ್ಕೆ ಮೆಚ್ಚುಗೆ ಇದೆ. ಮಹಿಳೆಯರಲ್ಲಿ ಡಿಜಿಟಲ್‌ ಕೌಶಲ್ಯ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ DGFT ನವದೆಹಲಿಯ ಜಂಟಿ ನಿರ್ದೇಶಕರಾದ ಎಂಡಿ. ಮೊಯಿನ್ ಅಫಾಕ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರಿನ  ಜಂಟಿ ನಿರ್ದೇಶಕರಾದ ಸುನೀಲ್ ಕುಮಾರ್‌, ಯುಎನ್‌ ಇಎಸ್‌ಸಿಎಪಿ ಉಪ ಮುಖ್ಯಸ್ಥರು ಮತ್ತು ಹಿರಿಯ ಅರ್ಥಶಾಸ್ತ್ರ ವ್ಯವಹಾರ ಅಧಿಕಾರಿಗಳಾದ ಡಾ. ರಾಜನ್ ಸುದೇಶ್ ರತ್ನ, ಉಬುಂಟು ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಮಹಿಳಾ ಉದ್ಯಮಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";