BENGALURU : ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority)-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮುಖ್ಯ ಆಯುಕ್ತರಿಗೆ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಡಾ|| ನಿರ್ಮಲ ಬುಗ್ಗಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಹುದ್ದೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಛೇರಿಯಲ್ಲಿ ಮುಂದುವರಿಸಲು ಮನವಿ ಸಲ್ಲಿಸಿದರು.
ಡಾ|| ನಿರ್ಮಲ ಬುಗ್ಗಿ (DR.NIRMALA BUGGI) ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ರವರ ಹುದ್ದೆಯು 1976ರ ವೃಂದ ಮತ್ತು ನೇಮಕಾತಿ ನಿಯಮಾವಳಿ ಮತ್ತು 2020 ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಹುದ್ದೆಯನ್ನು ಮಂಜೂರಾತಿ ಆಗಿರುತ್ತದೆ. ಆದರೆ ಗ್ರೇಟರ್ ಬೆಂಗಳೂರು (GBA) ಆಡಳಿತ ಅಧಿನಿಯಮ 2024ರಲ್ಲಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಹುದ್ದೆಯನ್ನು ರದ್ದುಪಡಿಸಲಾಗಿರುತ್ತದೆ.
ಆದ್ದರಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ರಂತೆ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಹುದ್ದೆಯನ್ನು ಮಂಜೂರು ಮಾಡುವುದು ಅತ್ಯಂತ ಅವಶ್ಯಕತೆವಿರುತ್ತದೆ. ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ವ್ಯಾಪ್ತಿಯಲ್ಲಿ ಬೆಂಗಳೂರು ನಗರದಲ್ಲಿರುವ ಹೆರಿಗೆ ಆಸ್ಪತ್ರೆಗಳು, ರೆಫರಲ್ ಆಸ್ಪತ್ರೆಗಳು, ಹಾಗೂ ನಮ್ಮ ಕ್ಲಿನಿಕ್‌ಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುತ್ತದೆ.
ಅತ್ಯಂತ ಗಂಭೀರವಾಗಿ ಪರಿಗಣಿಸ ಬೇಕಾದ ಪ್ರಮುಖ ಅಂಶಗಳು :- ಡಾ|| ನಿರ್ಮಲ ಬುಗ್ಗಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ರವರ ಅಧಿನದಲ್ಲಿ ಮ್ಯಾನೇಜಡ್ ಹೆಲ್‌ಕೇರ್ ಕಛೇರಿಯು ಇದ್ದು, ಪಾಲಿಕೆ ಅಧಿಕಾರಿ ನೌಕರರು ಮತ್ತು ಅರ್ಹ ಕುಟುಂಬ ಸದಸ್ಯರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿ ಕಾಯಿಲೆ/ಮಾರಣಾಂತಿಕ ಕಾಯಿಲೆ ಬಂದಂತಹ ಸಂದರ್ಭದಲ್ಲಿ ಅಧಿಕಾರಿ ನೌಕರರು ಮ್ಯಾನೇಜಡ್ ಹೆಲ್ತ್ ಕೇರ್ ರವರ ಮಾರ್ಗದರ್ಶನದಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯಲಾಗುತ್ತಿರುತ್ತದೆ..
ಮುಂದುವರೆದಂತೆ ಪಾಲಿಕೆ ಅಧಿಕಾರಿ ನೌಕರರು 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಾಗಿರುತ್ತಾರೆ. ಆದರೆ ಕೆಲಸವನ್ನು ಪೂರ್ವ ಮಹಾನಗರ ಪಾಲಿಕೆ, ದಕ್ಷಿಣ ಮಹಾನಗರ ಪಾಲಿಕೆ, ಪಶ್ಚಿಮ ಮಹಾನಗರ ಪಾಲಿಕೆ, ಉತ್ತರ ಮಹಾನಗರ ಪಾಲಿಕೆ, ಕೇಂದ್ರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ತುರ್ತಾಗಿ ಆರೋಗ್ಯ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯ ಬೇಕಾಗಿರುತ್ತದೆ. ಪಾಲಿಕೆ ಅಧಿಕಾರಿ/ನೌಕರರು ಮತ್ತು ಅರ್ಹ ಕುಟುಂಬ ಸದಸ್ಯರು ಕಾಯಿಲೆ/ಮಾರಣಾಂತಿಕ ಕಾಯಿಲೆ ಬಂದಂತಹ ಸಂದರ್ಭದಲ್ಲಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) / ಮ್ಯಾನೇಜಡ್ ಹೆಲ್ತ್‌ಕೇರ್ ರವರ ಮಾರ್ಗದರ್ಶನ ಪಡೆದು ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಅವಶ್ಯಕತೆ ಇರುತ್ತದೆ.
ಆದ್ದರಿಂದ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ) ಹುದ್ದೆಗಿಂತ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಹುದ್ದೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅತ್ಯಂತ ಅವಶ್ಯಕತೆ ಇರುವುದರಿಂದ, ಹಾಗೂ ಡಾ|| ನಿರ್ಮಲ ಬುಗ್ಗಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ರವರು ಹಿರಿಯ/ಅನುಭವಿ ಅಧಿಕಾರಿಯಾಗಿದ್ದು ಸೇವಾ ಹಿರಿತನವನ್ನು ಹೊಂದಿರುವುದರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಛೇರಿಯಲ್ಲಿ ಬೆಂಗಳೂರಿನ ನಾಗರೀಕರು/ಪಾಲಿಕೆ ಅಧಿಕಾರಿ ನೌಕರರ ಆರೋಗ್ಯದ ಹಿತ ದೃಷ್ಟಿಯಿಂದ ಮುಂದುವರಿಸಿಕೊಂಡು ಹೋಗಲು ಈ ಮೂಲಕ ಕೋರಲಾಗಿದೆ. ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ಕೂಡಲೇ ತಿದ್ದುಪಡಿಮಾಡಿ ನಂತರ ಅಧಿಕಾರಿ/ನೌಕರರನ್ನು ನಿಯಮಾನುಸಾರ ವರ್ಗಾವಣೆ / ನಿಯೋಜಿಸಲು ಕ್ರಮವಹಿಸಲು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಾ, ಹಾಗೂ ಈಗಾಗಲೇ ಅಧಿಕಾರಿ ನೌಕರರು ಗೊಂದಲ/ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಕೂಡಲೇ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿ/ನೌಕರರ ಹಿತ ಕಾಯ್ದುಕೊಳ್ಳಲು ಈ ಮೂಲಕ ಕೋರಲಾಯಿತು.