ಗುುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆ ನೀಡಿದ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. “ನನ್ನ ವಿರುದ್ಧ ಸಾಕ್ಷ್ಯವಿದೆಯೆ? ನನಗಿಂತ ಮೊದಲು ರಾಹುಲ್ ಜೈಲಿಗೆ ಹೋಗುವುದಿಲ್ಲ ಎಂಬುದು ಹೇಗೆ ಖಚಿತ?” ಎಂದು ಪ್ರತಿಕ್ರಿಯಿಸಿರುವ ಅವರು, “ಸಾಕ್ಷ್ಯ ಸಿಕ್ಕರೆ, ಗಾಂಧಿಯವರನ್ನೇ ಜೈಲಿಗಟ್ಟುತ್ತೇನೆ” ಎಂಬ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಗೋಲ್‌ಪಾರ ಜಿಲ್ಲೆಯ ಪೈಕಾನ್ ಮೀಸಲು ಅರಣ್ಯದಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ರಾಹುಲ್ ಗಾಂಧಿಯ ಭಾಷಣವೇ ಕಾರಣ ಎಂದು ಅಸ್ಸಾಂ ಸಿಎಂ ಆರೋಪಿಸಿದರು. “ಅವರು ಅತಿಕ್ರಮಣಕಾರರಿಗೆ ಪ್ರೋತ್ಸಾಹ ನೀಡಿದರು. ಪೊಲೀಸರು ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ದಾಳಿಗೆ ಒಳಗಾದರು. ಆತ್ಮರಕ್ಷಣೆಗೆ ಗುಂಡು ಹಾರಿಸಲಾಯಿತು, ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದರು” ಎಂದು ಶರ್ಮಾ ಹೇಳಿದರು.
ಅರಣ್ಯ ಭೂಮಿಯನ್ನು ಪುನರ್ವಸತಿಗಾಗಿ ಅತಿಕ್ರಮಣಕಾರರಿಗೆ ನೀಡಬೇಕೆಂಬ ರಾಹುಲ್ ಗಾಂಧಿಯ ಹೇಳಿಕೆಯನ್ನು ಕಾನೂನುಬಾಹಿರ ಎಂದು ಬಣ್ಣಿಸಿದ ಶರ್ಮಾ, “ಈ ರೀತಿಯ ಹೇಳಿಕೆಗಳು ರಾಷ್ಟ್ರೀಯ ನಾಯಕರಿಗೆ ಶೋಭೆಯಲ್ಲ. ಇವು ಜನರನ್ನೂ, ಕಾನೂನನ್ನೂ ಅಪಮಾನಿಸುತ್ತವೆ” ಎಂದರು.
ದೇಶದ ವಿವಿಧೆಡೆ ರಾಹುಲ್ ಗಾಂಧಿಯ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ಜಾಮೀನಿನಲ್ಲಿ ಹೊರಗಿದ್ದಾರೆಯಾದರೂ, ಅವರು ಪವಿತ್ರ ವ್ಯಕ್ತಿಯಲ್ಲ” ಎಂದು ಕಿಡಿಕಾರಿದ ಶರ್ಮಾ, “ಜಾರಿ ನಿರ್ದೇಶನಾಲಯವು (ED) ಈಗಾಗಲೇ ರಾಬರ್ಟ್ ವಾದ್ರಾ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಗಾಂಧಿ ಕುಟುಂಬದ ಪಾಲಿಗೆ ಜೈಲುಗಳು ಸಿದ್ಧವಾಗಿವೆ” ಎಂದರು.
ಪೋಲೀಸರು ಈ ಹಿಂಸಾಚಾರ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಭಾಷಣಗಳನ್ನು ಪರಿಶೀಲಿಸಲಾಗುತ್ತಿದೆ. ಅವು ಮತ್ತು ನಡೆದ ಹಿಂಸಾಚಾರದ ನಡುವಿನ ಸಂಬಂಧವನ್ನು ಆಧಾರಗಳ ಆಧಾರದಲ್ಲಿ ನಿರ್ಧರಿಸಲಾಗುವುದು.
Veekay News > National News > ರಾಹುಲ್ ಗಾಂಧಿಗೆ ಹಿಮಂತ ಶರ್ಮಾ ತಿರುಗೇಟು: “ಸಾಕ್ಷ್ಯ ಸಿಕ್ಕರೆ ಜೈಲಿಗೆ ಗಾಂಧಿಯವರನ್ನೇ ಕಳುಹಿಸುತ್ತೇನೆ”
ರಾಹುಲ್ ಗಾಂಧಿಗೆ ಹಿಮಂತ ಶರ್ಮಾ ತಿರುಗೇಟು: “ಸಾಕ್ಷ್ಯ ಸಿಕ್ಕರೆ ಜೈಲಿಗೆ ಗಾಂಧಿಯವರನ್ನೇ ಕಳುಹಿಸುತ್ತೇನೆ”
ವೀ ಕೇ ನ್ಯೂಸ್18/07/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply