ಹೊಸಕೋಟೆ ಲಯನ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಎಚ್.ಎಸ್. ಅನೀಲ್ ಕುಮಾರ್ ರವರು ಅಧಿಕಾರ ವಹಿಸಿಕೊಂಡರು.
ಲಯನ್ ಮಲ್ಟಿಪಲ್ ಜಿ.ಎಂ.ಟಿ .ಕೋ ಆರ್ಡಿನೇಟರ್ ಆದ ಬಿ.ಎಸ್. ರಾಜಶೇಖರಯ್ಯ ರವರು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡುತ್ತಾ, ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೆ ದೇಶ, ವಿದೇಶಗಳಲ್ಲೂ ಲಯನ್ ಸಂಸ್ಥೆ ಅನೇಕ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ, ಅದರಂತೆ ಹೊಸಕೋಟೆ ಲಯನ್ ಸಂಸ್ಥೆ ಸಹ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ನೂತನವಾಗಿ ಅಧ್ಯಕ್ಷರಾಗಿರುವ ಅನಿಲ್ ಕುಮಾರ್ ಅವರು ಹೊಸಕೋಟೆಯಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲಿ ಎಂದು ಕರೆ ನೀಡಿದರು,
ತಾಲೂಕಿನಲ್ಲಿ ಸಾಕಷ್ಟು ರೋಗಿಗಳು ಡಯಾಲಿಸಿಸ್ ಗಾಗಿ ಬೆಂಗಳೂರು ನಗರಕ್ಕೆ ತೆರಳುತ್ತಿದ್ದು ಸಮಯ ಹಾಗೂ ಹಣ ವ್ಯವವಾಗುತ್ತಿದೆ, ಆದ್ದರಿಂದ ಹೊಸಕೋಟೆ ನಗರದಲ್ಲೇ ಲಯನ್ಸ್ ವತಿಯಿಂದ ಉಚಿತ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿ ಎಂದು ಅವರು ಕರೆ ನೀಡಿದರು.
52ನೇ ಅಧ್ಯಕ್ಷರಾಗಿ ಆಯ್ಕೆಯಾದ ಅನಿಲ್ ಕುಮಾರ್ ಅವರು ಮಾತನಾಡಿ ಹಿಂದೆ ಲಯನ್ಸ್ ಕ್ಲಬ್ ನಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿ ಕೆಲಸ ಮಾಡಿದ್ದೇನೆ, ಈಗ ನಾನು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ನನ್ನ ಅವಧಿಯಲ್ಲಿ ಮಾಡಬೇಕಾದ ಸೇವಾ ಚಟುವಟಿಕೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಸುಮಾರು 50ಕ್ಕೂ ಹೆಚ್ಚಿನ ಸೇವಾ ಚಟುವಟಿಕೆಗಳನ್ನು ನನ್ನ ಅವಧಿಯಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿ ಇದಕ್ಕೆ ಲಯನ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಬೇಕೆಂದು ಕೋರಿದರು.
ಹೊಸಕೋಟೆ ಲಯನ್ ಸಂಸ್ಥೆಯ ಹಿರಿಯ ಸದಸ್ಯರು ಹಾಗೂ ಜಿಲ್ಲಾ ಪಿ.ಆರ್. ಓ. ಲಯನ್ ಜಿ.ಎಸ್. ಮಂಜುನಾಥ್ ಮಾತನಾಡುತ್ತಾ ಹೊಸಕೋಟೆ ಸಂಸ್ಥೆಗೆ ಜಿಲ್ಲೆಯಲ್ಲಿ ತನ್ನದೇ ಆದ ಇತಿಹಾಸವಿದೆ, ಈ ಸಂಸ್ಥೆಯಿಂದ ಜಿಲ್ಲಾ ಗವರ್ನರ್ ಹಾಗೂ ಅಂತರಾಷ್ಟ್ರೀಯ ನಿರ್ದೇಶಕರನ್ನು ಕಳುಹಿಸಿದ ಕೀರ್ತಿ ಸಂಸ್ಥೆಗೆ ಇದ್ದು, ಹಿಂದೆ ಅನೇಕ ಮಹನೀಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ ನೂತನ ಅಧ್ಯಕ್ಷರು ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಉಪ ಗವರ್ನರ್ ವಿಜಯಕುಮಾರ್ ಪ್ರಾಂತ್ಯ ಅಧ್ಯಕ್ಷರಾದ ಡಬ್ಲ್ಯೂ ಡಿ ವಿಜಯಕುಮಾರ್ ವಲಯ ಅಧ್ಯಕ್ಷರಾದ ಪ್ರಭಾಕರ್ ಟ್ರಸ್ಟ್ ನ ಅಧ್ಯಕ್ಷರಾದ ಸಿ ಶ್ರೀನಿವಾಸಯ್ಯ ಮುಂತಾದವರು ನೂತನ ಅಧ್ಯಕ್ಷರ ಶುಭಾಶಯ ಕೋರಿದರು ಸಮಾರಂಭದ ಅಧ್ಯಕ್ಷತೆಯನ್ನು ಎಂ ಬೀರಪ್ಪ ವಹಿಸಿದ್ದು ಈ ಸಂದರ್ಭದಲ್ಲಿ ಶ್ರೀ ಗಾಯಿತ್ರಿ ವಿದ್ಯಾಮಂದಿರಕ್ಕೆ 25 ಸಾವಿರ ರೂಗಳ ಪಠ್ಯಪುಸ್ತಕಗಳನ್ನು ಹಾಗೂ ಜಿಲ್ಲಾ ರಿಲೇವಿಂಗ್ ಅಂಗರ್ ಕಾರ್ಯಕ್ರಮಕ್ಕೆ ಒಂದು ದಿನದ ಊಟದ ವೆಚ್ಚದ ಹಣವನ್ನು ನೀಡಲಾಯಿತು.
2025 / 26 ನೇ ಸಾಲಿನ ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಎಚ್.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷರು : ವಿ.ಎನ್. ಮಂಜುನಾಥ್, ಕೆ ಮಂಜುನಾಥ್, ಕಾರ್ಯದರ್ಶಿ : ದಿನಕರ್ ಬಿ.ಎಸ್. ಖಜಾಂಚಿ : ಎಸ್.ಮಹೇಶ್, ಎಲ್.ಸಿ. ಐ. ಎಫ್. ಚೇರ್ಮನ್, ಎಂ.ಬೀರಪ್ಪ, ಕ್ಲಬ್ ಮಾರ್ಕೆಟಿಂಗ್ ಚೇರ್ ಪರ್ಸನ್ ಜಿ.ಎಸ್. ಮಂಜುನಾಥ್, ಆಡಳಿತ ಅಧಿಕಾರಿ
ಸಿ.ಶ್ರೀನಿವಾಸಯ್ಯ, ಮೆಂಬರ್ಶಿಪ್ ಚೇರ್ ಪರ್ಸನ್ ಎಚ್. ಸಿ.ಷಣ್ಮುಗಂ, ಸರ್ವಿಸ್ ಚೇರ್ ಪರ್ಸನ್ ಸತೀಶ್.j ನಿರ್ದೇಶಕರಾಗಿ ವೆಂಕಟ್ ಸ್ವಾಮಿ, ಅಶ್ವಥ್ ನಾರಾಯಣ, ವೆಂಕಟೇಶಪ್ಪ .ಆರ್, ಮುರಳಿಧರ್ ಎಚ್ .ಎಸ್. ಮಂಜುನಾಥ್. ಜಿ, ರಾಕೇಶ್ ಯು.