Live Stream

[ytplayer id=’22727′]

| Latest Version 8.0.1 |

State News

ಧರ್ಮಸ್ಥಳ: ವ್ಯವಸ್ಥಿತ ಷಡ್ಯಂತ್ರಕ್ಕೆ ಕಠಿಣ ಕ್ರಮ ಕೈಗೊಳ್ಳಿ ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ

ಧರ್ಮಸ್ಥಳ: ವ್ಯವಸ್ಥಿತ ಷಡ್ಯಂತ್ರಕ್ಕೆ ಕಠಿಣ ಕ್ರಮ ಕೈಗೊಳ್ಳಿ ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು
ಬೆಂಗಳೂರು : ಕೊಟ್ಯಾಂತರ ಹಿಂದೂಗಳ ಭಕ್ತಿಭಾವದ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ದುರುದ್ದೇಶಿತ ಪ್ರಚಾರ ಹಿಂದೂ ಸಮಾಜದಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿದೆ. ಅನಾಮಿಕನ ಹೇಳಿಕೆಯನ್ನು ಆಧರಿಸಿ ತನಿಖೆ ನಡೆದರೂ ಯಾವುದೇ ಸತ್ಯ ಹೊರಬಾರದೆ ಇರುವ ಸಂದರ್ಭದಲ್ಲಿ, ಕೆಲವು ಯೂಟ್ಯೂಬ್ ಚಾನೆಲ್‌ಗಳು ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳು ಸುಳ್ಳು ವರದಿಗಳನ್ನು ಪ್ರಸಾರ ಮಾಡಿರುವುದು ತೀವ್ರ ಖಂಡನೀಯ. ಇದು ಕೇವಲ ತಾತ್ಕಾಲಿಕ ಘಟನೆ ಅಲ್ಲ, ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಭಾಗವೆಂಬುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
*ಬೇಡಿಕೆಗಳು*
1. ಧರ್ಮಸ್ಥಳದ ಅಪಮಾನ ಮಾಡಿದವರ ಮೇಲೆ ಎಸ್‌ಐಟಿ ಮೂಲಕ ಸಂಪೂರ್ಣ ತನಿಖೆ ನಡೆಸಬೇಕು.
2. ಸುಳ್ಳು, ಅಪಪ್ರಚಾರ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
3. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಎಡಪಂಥೀಯ ಒತ್ತಡ ಮತ್ತು ಅಪಪ್ರಚಾರದಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ಮಾಡಬೇಕು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ, ಯುವ ಬ್ರಿಗೇಡ್‌ನ ಶ್ರೀ. ಚಂದ್ರಶೇಖರ್, ಶ್ರೀರಾಮ ಸೇನೆಯ ಶ್ರೀ.ಸುಂದರೇಶ್ ನರ್ಗಲ್, ಸೇವಾ ಕನ್ನಡಿಗ ಟ್ರಸ್ಟ್‌ನ ಶ್ರೀ.ಲಕ್ಷ್ಮಣ್ ಗೌಡ, ಹಿಂದೂ ಮುಖಂಡರಾದ ಶ್ರೀ.ಎಂ.ಎಲ್. ಶಿವಕುಮಾರ, ಶ್ರೀ. ಶರತ್ ಕುಮಾರ್ ಸೇರಿದಂತೆ ಹಲವಾರು ಹಿಂದೂ ಮುಖಂಡರು, ವಕೀಲರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿ “ಮುಖ್ಯಮಂತ್ರಿಗಳಿಗೆ ತಲುಪಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಶ್ರೀ. ಮೋಹನ್ ಗೌಡ ಸಮನ್ವಯಕರು
ಹಿಂದೂ ರಾಷ್ಟ್ರ ಸಮನ್ವಯ ಸಮಿತಿ
ಸಂಪರ್ಕ: 7204082609
ವೀ ಕೇ ನ್ಯೂಸ್
";