ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹೊಸ ಸಿನಿಮಾ ಹರಿಹರ ವೀರಮಲ್ಲು ತೆರೆಕಂಡಿದ್ದು, ಆಂಧ್ರ ಮತ್ತು ತೆಲಂಗಾಣದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ, ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಂಪೂರ್ಣ ಸಕ್ರೀಯರಾದ ನಂತರ ಪವನ್ ಕಲ್ಯಾಣ್ ಅಭಿನಯದ ಯಾವ ಸಿನಿಮಾ ಕೂಡ ತೆರೆ ಕಂಡಿರಲಿಲ್ಲ, ಹೀಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದರು,
ಹೀಗಾಗಿ ಸಹಜವಾಗಿಯೇ ಹರಿಹರ ವೀರಮಲ್ಲು ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು ಈ ಕಾರಣಕ್ಕೆ ಅಭಿಮಾನಿಗಳು ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ, ಆದ್ರೆ ಈ ಬೆನ್ನಲ್ಲೇ ಹರಿಹರ ವೀರಮಲ್ಲು ಚಿತ್ರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಕರ್ನಾಟಕದಲ್ಲಿ ತೀವ್ರ ವಿರೋಧ ಎದುರಿಸಿದೆ,
ಹೌದು… ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ, ಕನ್ನಡಪರ ಹೋರಾಟಗಾರರು ಪವನ್ ನಟನೆಯ ಸಿನಿಮಾ ಪೋಸ್ಟರ್ ಗಳನ್ನು ಹರಿದು, ಫ್ಲೆಕ್ಸ್ ಗಳನ್ನು ತೆರವು ಮಾಡಿ ಸಿನಿಮಾ ತಂಡದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಕಾರಣ ಹರಿಹರ ವೀರಮಲ್ಲು ಸಿನಿಮಾ ತಂಡದ ಕನ್ನಡ ವಿರೋಧಿ ನೀತಿ,
ಯಾವುದೇ ಭಾಷೆಯ ಸಿನಿಮಾ ಕನ್ನಡದಲ್ಲಿ ಕರ್ನಾಟಕದಲ್ಲಿ ತೆರೆ ಕಾಣಬೇಕು ಎಂದಾದರೆ ಆ ಸಿನಿಮಾದ ಪೋಸ್ಟರ್ ಗಳು ಕನ್ನಡದಲ್ಲಿರಬೇಕು, ಈ ನಿಯಮವನ್ನು ಹರಿಹರ ವೀರಮಲ್ಲು ಚಿತ್ರ ತಂಡ ಧಿಕ್ಕರಿಸಿ ಕೇವಲ ತೆಲುಗಿನಲ್ಲಿ ಮಾತ್ರ ಪೋಸ್ಟರ್ ಗಳನ್ನು ಅಂಟಿಸಲಾಗಿದೆ, ಹೀಗಾಗಿ ಈ ದೋರಣೆಯ ವಿರುದ್ಧ ಕನ್ನಡಪರ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ,
ಹರಿಹರ ವೀರಮಲ್ಲು ಸಿನಿಮಾ ತೆರೆಕಂಡಿರುವ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕನ್ನಡಪರ ಹೋರಾಟಗಾರು ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಹರಿದು, ಕಟೌಟ್ ಗಳನ್ನು ತೆರವುಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ವೇಳೆ ಸ್ಧಳದಲ್ಲಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಇದನ್ನು ವಿರೋಧಿಸುವ ಪ್ರಯತ್ನ ಮಾಡಿದರಾದ್ರೂ, ಕನ್ನಡಿಗರ ಆಕ್ರೋಶ ಕಂಡು ಸುಮ್ಮನಾಗಿದ್ದಾರೆ,
Veekay News > State News > ಹರಿಹರ ವೀರಮಲ್ಲು ಸಿನಿಮಾ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ – ಕೇವಲ ತೆಲುಗು ಪೋಸ್ಟರ್‌ಗಳಿಗೆ ವಿರೋಧ
ಹರಿಹರ ವೀರಮಲ್ಲು ಸಿನಿಮಾ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ – ಕೇವಲ ತೆಲುಗು ಪೋಸ್ಟರ್‌ಗಳಿಗೆ ವಿರೋಧ
ವೀ ಕೇ ನ್ಯೂಸ್24/07/2025
posted on

Tags:bangalore