Live Stream

[ytplayer id=’22727′]

| Latest Version 8.0.1 |

Bengaluru Urban

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಪ್ರಯುಕ್ತ ಡಾ|| ರಾಯಚೂರು ಶೇಷಗಿರಿದಾಸ್ ವೃಂದದಿಂದ “ಹರಿದಾಸ ವಾಣಿ”

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಪ್ರಯುಕ್ತ ಡಾ|| ರಾಯಚೂರು ಶೇಷಗಿರಿದಾಸ್ ವೃಂದದಿಂದ “ಹರಿದಾಸ ವಾಣಿ”
ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಜರುಗುತ್ತಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಆರನೇ ದಿನದಂದು ಹೆಸರಾಂತ ಗಾಯಕರಾದ ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ ಹರಿದಾಸ ವಾಣಿ ಜರುಗಿತು ಎಂದು ಶ್ರೀ ಮಠದ ಪುರೋಹಿತರಾದ ನಂದ ಕಿಶೋರಾಚಾರ್ಯರು ತಿಳಿಸಿದರು.
ಈ ಕಾರ್ಯಕ್ರಮದ ಕೊನೆಯ ಹಂತದಲ್ಲಿ  ಶ್ರೀ ರಾಯಚೂರು ಶೇಷಗಿರಿದಾಸರು ಮಾತನಾಡುತ್ತಾ ನನ್ನ ಸೋದರ ಸಮಾನರಾದ ಶ್ರೀ ವಾದೀಂದ್ರಾಚಾರ್ಯರು ಹಾಗೂ ನಂದಕಿಶೋರ್ ಆಚಾರ್ಯರು ನನ್ನ ಮೇಲೆ ಅಭಿಮಾನದಿಂದ ನನಗೆ ಕಾರ್ಯಕ್ರಮ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದರು.
ಈ ವಿಶೇಷ ಕಾರ್ಯಕ್ರಮದಲ್ಲಿ ದಾಸಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆಲಿಸಿ,  ರಾಯರ ದರ್ಶನ ಪಡೆದು, ಪ್ರಸಾದ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ಮತ್ತು ಸ್ವಸ್ತಿವಾಚನ ಕಾರ್ಯಕ್ರಮವು ನೆರವೇರಿತು.
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";