ಬೆಂಗಳೂರು 05.10.2025: ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ (Gehlot) ಅವರು ಭಾನುವಾರ ಗುರು ಅಮರ್ ಸಂಯಮ್ ಅಮೃತ್ ಮಹಾ ಮಹೋತ್ಸವ Guru (Amar Sanyam Amrit Maha Mahotsav ) ಮತ್ತು ವಿಶ್ವ ಶಾಂತಿ ಜಪ ಮಹೋತ್ಸವ (Vishwa Shanti Japa Mahotsav) ದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ, ಭಾರತೀಯ ಸಂಸ್ಕೃತಿಯು ದೇಹ, ಮನಸ್ಸು, ಆತ್ಮ ಮತ್ತು ಪರಿಸರದ ಶುದ್ಧೀಕರಣಕ್ಕಾಗಿ ಮತ್ತು ಪ್ರಪಂಚದ ಕಲ್ಯಾಣಕ್ಕಾಗಿ ಮಂತ್ರಗಳನ್ನು ಪಠಿಸುವ ಸಂಪ್ರದಾಯವನ್ನು ಹೊಂದಿದೆ. ನಮ್ಮ ಋಷಿಮುನಿಗಳು ಮತ್ತು ಸಂತರು ರಚಿಸಿದ ಈ ಮಂತ್ರಗಳು ಶುಭ ಶಬ್ದಗಳಿಂದ ತುಂಬಿವೆ. ಇಂದು ಮಹಾನ್ ತಪಸ್ವಿ, ಸಂತ ವ್ಯಕ್ತಿ ಮತ್ತು ವಿದ್ವಾಂಸರಾದ ಪೂಜ್ಯ ಶ್ರೀ ಅಮರ್ ಮುನಿ ಜಿ ಮಹಾರಾಜ್ ಅವರ ಜೀವನದ ಪ್ರಯಾಣವು ಒಂದು ಸ್ಪೂರ್ತಿದಾಯಕ ಗ್ರಂಥವಾಗಿದ್ದು, ಸ್ವಯಂ ನಿಯಂತ್ರಣ, ಸೇವೆ, ಆಧ್ಯಾತ್ಮಿಕ ಅಭ್ಯಾಸ ಮತ್ತು ಸಮರ್ಪಣೆಯ ಕುರಿತು ಹಲವಾರು ಅಧ್ಯಾಯಗಳಿಂದ ತುಂಬಿದೆ ಎಂದರು.
“ಸಮಾಜ, ಸಂಸ್ಕೃತಿ ಮತ್ತು ಸಂಯಮದ ವಿಶಿಷ್ಟ ಅಭ್ಯಾಸವಾಗಿದ್ದ ಇಂತಹ ದಿವ್ಯ ಸಂತ ಶ್ರುತಾಚಾರ್ಯ ಪೂಜ್ಯ ಶ್ರೀ ಅಮರ್ ಮುನಿ ಜಿ ಮಹಾರಾಜ್ ಅವರ ಸಂಯಮದ ಜೀವನದ ಅಮೃತದಂತಹ ನೆನಪುಗಳನ್ನು ನಾವೆಲ್ಲರೂ ಭಕ್ತಿಯಿಂದ ನೆನಪಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ಪೂಜ್ಯ ಗುರುದೇವರು ಜೈನ ಧರ್ಮದ ಮಹಾನ್ ಸಂತರು ಮಾತ್ರವಲ್ಲದೆ ಭಾರತೀಯ ಸಂತ ಸಂಪ್ರದಾಯದ ಮುಕುಟ ರತ್ನವೂ ಆಗಿದ್ದರು. ಅವರ ಜೀವನವು ಸಂಯಮ, ಸೇವೆ ಮತ್ತು ಜ್ಞಾನೋದಯದ ಮಾರ್ಗವನ್ನು ಸಾರಿತು. ಪೂಜ್ಯಶ್ರೀ ಅಮರ್ ಮುನಿ ಜಿ ಅವರು ಯುವಕರಿಗೆ ಆಧ್ಯಾತ್ಮಿಕ ಮಾರ್ಗವನ್ನು ಪ್ರಾರಂಭಿಸಿ ಸ್ಫೂರ್ತಿ ನೀಡಿದ ರೀತಿ ಮುಂಬರುವ ಪೀಳಿಗೆಗೆ ಬೆಳಕಿನ ದೀಪವಾಗಿದೆ” ಎಂದು ಶ್ಲಾಘಿಸಿದರು.
“ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ, ನೈತಿಕತೆ, ಆಧ್ಯಾತ್ಮಿಕ ಮತ್ತು ನೈತಿಕ ಜಾಗೃತಿಯನ್ನು ಉತ್ತೇಜಿಸುತ್ತವೆ ಎಂದು ನನಗೆ ವಿಶ್ವಾಸವಿದೆ. ನಾವೆಲ್ಲರೂ ಪೂಜ್ಯ ಗುರುದೇವರು ತೋರಿಸಿದ ಸಂಯಮ, ಸೇವೆ ಮತ್ತು ಧ್ಯಾನದ ಮಾರ್ಗವನ್ನು ಅನುಸರಿಸಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಮಾಧ್ಯಮವಾಗೋಣ. ಈ ಭವ್ಯವಾದ, ಅಮೃತಮಯ ಗುರು ಅಮರ ಸಂಯಮ್ ಅಮೃತ ಮಹಾ ಮಹೋತ್ಸವದಲ್ಲಿ ನಿಮ್ಮೆಲ್ಲರ ನಡುವೆ ಬಂದು, ಎಲ್ಲಾ ಸಂತರು ಮತ್ತು ಸನ್ಯಾಸಿನಿಯರ ದರ್ಶನ ಮತ್ತು ಆಶೀರ್ವಾದ ಪಡೆಯುವ ಸೌಭಾಗ್ಯ ನನಗೆ ಸಿಕ್ಕಿದೆ. ಇದಕ್ಕಾಗಿ ನಾನು ಶ್ರೀ ಗುಜರಾತಿ ವರ್ಧಮಾನ್ ಸ್ಥಾನಕವಾಸಿ ಜೈನ ಸಂಘಕ್ಕೆ ಧನ್ಯವಾದ ಮತ್ತು ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಎಂದು ತಿಳಿಸಿದರು.
ದಕ್ಷಿಣ ಸೂರ್ಯ ಆಚಾರ್ಯ ಡಾ. ವರುಣ್ ಮುನಿ ಮಹಾರಾಜ್ ಸಾಹೇಬ್, ಪರಮಪೂಜ್ಯ ಆಚಾರ್ಯ ಶ್ರೀ ಪಂಕಜ ಮುನಿ ಮಹಾರಾಜ್ ಸಾಹೇಬ್, ಪರಮಪೂಜ್ಯ ಆಚಾರ್ಯ ಶ್ರೀ ವಸಂತ ವಿಜಯಾನಂದ ಗಿರಿ ಮಹಾರಾಜ್ ಸಾಹಿಬ್ ಮತ್ತು ಪರಮಪೂಜ್ಯ ಪಂಕಿತ್ ಮುನಿ ಮಹಾರಾಜ್ ಸಾಹಿಬ್, ಅವರ ಪವಿತ್ರ ಧ್ಯಾನ್ ಮುನಿ ಮಹಾರಾಜ್ ಸಾಹಿಬ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.





















