Live Stream

[ytplayer id=’22727′]

| Latest Version 8.0.1 |

Bengaluru RuralCulturalHaveri

” ಶ್ರೀ ರಾಯರ ಭಕ್ತರಿಗೆ ಶುಭ ಸುದ್ದಿ “

” ಶ್ರೀ  ರಾಯರ ಭಕ್ತರಿಗೆ ಶುಭ ಸುದ್ದಿ “

!! ಶ್ರೀಮನ್ಮೂಲರಾಮೋ ವಿಜಯತೇ !!
!! ಶ್ರೀ ಗುರುರಾಜೋ ವಿಜಯತೇ !!

” ಶ್ರೀ ರಾಯರ ಭಕ್ತರಿಗೆ ಶುಭ ಸುದ್ದಿ ”

ಪ್ರಹ್ಲಾದನೇ ವ್ಯಾಸಮುನಿ ರಾಘವೇಂದ್ರರು ! ಅಹುದೆಂದು ಭಜಿಸರೊ ವಿಜಯವಿಠ್ಠಲ ಒಲಿವ !!

ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು –

ಬೆಂಗಳೂರು ನಗರದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಭಕ್ತ ಶಿಷ್ಯರ ಅನುಕೂಲಕ್ಕಾಗಿ –

” ಮಂತ್ರಾಲಯ ಮಾಹಿತಿ ಕೇಂದ್ರ ” ವನ್ನು.. ” ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ – 5ನೇ ಬಡಾವಣೆ, ಜಯನಗರ, ಬೆಂಗಳೂರು ನಲ್ಲಿ ಪ್ರಾರಂಭ ಮಾಡಿದ್ದು, ಶ್ರೀ ರಾಯರ ಭಕ್ತರು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ನಡೆಯುವ ಸೇವಾ ವಿವರ, ಅನ್ನದಾನ, ವಿದ್ಯಾದಾನ, ಅಭಿವೃದ್ಧಿ ಕಾರ್ಯಗಳಿಗೆ ತನು, ಮನ, ಧನಗಳಿಂದ ಉದಾರವಾಗಿ ಸೇವೆ ಸಲ್ಲಿಸುವ ದಾನಿಗಳು ಈ ಕಾರ್ಯಾಲಯವನ್ನು ಸಂಪರ್ಕಿಸಲು ಈ ಮನವಿ ಮಾಡಿ ಕೊಳ್ಳುತ್ತಿದ್ದೇನೆ.

ವಾಯುವಂಶಾಬ್ಧಿಸಂಭೂತಂ
ಲೋಕಕಲ್ಯಾಣತತ್ಪರಮ್!
ಮೂಲರಾಮಪದಾಸಕ್ತಂ
ಸುಬುಧೇಂದ್ರಗುರುಂ ಭಜೇ!!

ಶ್ರೀ ಶ್ರೀಪಾದಂಗಳವರ ಆಜ್ಞಾನುಸಾರವಾಗಿ.,

ಸಾರ್ವಜನಿಕ ಸಂಪರ್ಕಾಧಿಕಾರಿಗಳು ( P.R.O.)
ಮಂತ್ರಾಲಯ ಮಾಹಿತಿ ಕೇಂದ್ರ
ಶಾಖೆ : ಬೆಂಗಳೂರು.

ವೀ ಕೇ ನ್ಯೂಸ್
";