ಜಯನಗರದ 4ನೇ ಬ್ಲಾಕ್‌ನಲ್ಲಿ “ ಗ್ಲೋ ಬೈ ಕೀರ್ತಿಲಾಲ್ಸ್” ಹೊಸ ಆಭರಣಗಳ ಶೋ ರೂಂ ನಲ್ಲಿ ವಿಶೇಷ ಮಾರಾಟ ಮೇಳ
ಸಣ್ಣ ಮಕ್ಕಳು, ಹಿರಿಯ ನಾಗರಿಕರವರೆಗೆ ಬೆರಗುಗೊಳಿಸುವ ವಿನ್ಯಾಸಗಳು, ಕೈಗೆಟುಕುವ ದರದಲ್ಲಿ ಆಭರಣಗಳ ಮಾರಾಟ: ವಜ್ರದ ಮೇಲೆ ಶೇ 20 ರಷ್ಟು ರಿಯಾಯಿತಿ
ಬೆಂಗಳೂರು,ಆ.14: ಕೀರ್ತಿಲಾಲ್ಸ್ ಪ್ರಾಯೋಜಿತ ಆಧುನಿಕ ವಜ್ರ ಮತ್ತು ಚಿನ್ನದ ಆಭರಣ ಬ್ರಾಂಡ್ “ಗ್ಲೋ ಬೈ ಕೀರ್ತಿಲಾಲ್ಸ್” ಆಭರಣ ಮಳಿಗೆ ಜಯನಗರದ 4 ನೇ ಬ್ಲಾಕ್ನ 11 ನೇ ಮುಖ್ಯರಸ್ತೆಯ ದಾಸ್ ಕ್ಯಾಪಿಟಲ್ ಬಳಿ ಅನಾವರಣಗೊಂಡಿದೆ. ನಗರದ ಅತ್ಯಂತ ಟ್ರೆಂಡಿ ಪ್ರದೇಶದಲ್ಲಿ ದೈನಂದಿನ ಹೊಳಪನ್ನು ಈ ನೂತನ ಮಳಿಗೆ ಹೆಚ್ಚಿಸಿದೆ. ಜೊತೆಗೆ ವಿಶೇಷ ಮಾರಾಟ ಮೇಳವನ್ನು ಸಹ ಪ್ರಾರಂಭಿಸಲಾಗಿದೆ.
ಕೀರ್ತಿಲಾಲ್ಸ್ ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಸೂರಜ್ ಶಾಂತಕುಮಾರ್ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿ, ನಾವು ಹಗುರು, ಗುಣಮಟ್ಟದ ಆಭರಣಗಳ ಮಾರಾಟ ಮಾಡುತ್ತಿದ್ದು, ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಕೈಗೆಟುಕುವ ಬೆಲೆಯಲ್ಲಿ ಚಿನ್ನ, ವಜ್ರಾಭರಣಗಳು ಲಭ್ಯವಿದೆ. ವಜ್ರದ ಆಭರಣಗಳನ್ನು ಸಂಸ್ಥೆಯಲ್ಲಿಯೇ ತಯಾರು ಮಾಡಿ ಮಾರಾಟ ಮಾಡುತ್ತಿದ್ದು, ಇವುಗಳ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹೊಸ ಕಲರ್ ಸ್ಟೋನ್ಸ್ ಮಿಕ್ಸಿಂಗ್, ಪೆಂಡೆಂಟ್, ನಕ್ಲೆಸ್, ಕಿವಿಯೋಲೆ ವೈವಿಧ್ಯಮಯ ಆಭರಣ ಮಳಿಗೆ ಅನಾವರಣಗೊಂಡಿದೆ ಎಂದರು.
ಹಗುರವಾದ ನೈಸರ್ಗಿಕ ವಜ್ರ ಮತ್ತು ಚಿನ್ನದ ಆಭರಣಗಳಿಗೆ ಸಂಸ್ಥೆ ಹೆಸರಾಗಿದ್ದು, ಇವು ಅನನ್ಯ ಸೊಬಗನ್ನು ಸಂಯೋಜಿಸುತ್ತವೆ. ವಿಶೇಷವಾದ ಜೀವನಶೈಲಿಗೆ ಹೊಂದಿಕೆಯಾಗುವಂತೆ ಗ್ಲೋ ಪೀಸ್‌ಗಳನ್ನು ರಚಿಸಲಾಗಿದೆ. ದಿಟ್ಟ ಮತ್ತು ಆಧುನಿಕ ಶೈಲಿಯನ್ನು ಅಪ್ಪಿಕೊಂಡಿರುವ ಬೆಂಗಳೂರು, ಗ್ಲೋಗೆ ಸೂಕ್ತ ನೆಲೆಯಾಗಿದೆ. ಹೆಸರುವಾಸಿಯಾಗಿರುವ ಕರಕುಶಲತೆ ಮತ್ತು ಗುಣಮಟ್ಟದಲ್ಲಿ ರಾಜೀಯಾಗದೇ ಐಷಾರಾಮಿ ಆಭರಣಗಳನ್ನು ನೆಚ್ಚಿನ ಗ್ರಾಹಕರಿಗೆ ದೊರಕಿಸಿಕೊಡುವುದು ನಮ್ಮ ಗುರಿಯಾಗಿದೆ ಎಂದರು. ಕನಿಷ್ಠ 7,000 ರೂ ನಿಂದ ಪ್ರಾರಂಭವಾಗುವ ಗ್ಲೋ, ಪ್ರತಿ ಸಂದರ್ಭಕ್ಕೂ ಹೊಂದಿಕೆಯಾಗುವಂತಹ ನೈಸರ್ಗಿಕ ವಜ್ರ ಮತ್ತು ಚಿನ್ನದ ಆಭರಣಗಳನ್ನು ನೀಡುತ್ತದೆ. “ಮೈ ಮಂತ್ಲಿ ಗ್ಲೋ ಚಿಟ್” ಯೋಜನೆಯು ಹೂಡಿಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಈ ಯೋಜನೆಯ ಫಲಾನುಭವಿಗಳು 10 ಕ್ಕೂ ಹೆಚ್ಚು ಕಂತುಗಳನ್ನು ಪಾವತಿಸಿದರೆ, 1ನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದರು.