ಬೆಂಗಳೂರು : ಸಂಗೀತ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ಶ್ರೀ ಸಾಯಿನಾರಾಯಣ ಕಲ್ಮಡ್ಕ (Kalladka) ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ (Kengeri) ಕೆಂಗೇರಿ ಶ್ರೀ ಗುರುರಾಜ ಭವನ (Sri Gururaja Bhavana) ದಲ್ಲಿ ಇತ್ತೀಚೆಗೆ ನಡೆಯಿತು. ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ ಶ್ರೀಕಾಂತ್ (Smt. Shalini Srikanth) ಅವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಸಂಜೀವ್ ಕುಮಾರ್ (Vid. Sanjeev Kumar) ಅವರಿಂದ ಹಾಗೂ ದೇಶದ ನಾನಾ ಸಂಚಾಲಕರುಗಳಿಂದ ವರದಿವಾಚನ ನಡೆಯಿತು.
ಹಿರಿಯ ವೀಣಾ ಕಲಾವಿದೆ ವಿದುಷಿ ಶ್ರೀಮತಿ ಉಷಾ ರಾಮಮೂರ್ತಿ ಅವರನ್ನು ಅಖಿಲ ಭಾರತೀಯ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಗೀತ ನೃತ್ಯ ಕಲಾವಿದರ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದೆಂದು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಒಕ್ಕೂಟದಿಂದ ನಡೆಯುವ ಆನ್ಲೈನ್ ಸಂಗೀತ ನೃತ್ಯ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಮೂಲಕ ಅಯೋಧ್ಯೆ ಕಾಶೀ ದೇವಾಲಯಗಳಲ್ಲಿ ನಡೆಯುತ್ತಿರುವ ಸಾಪ್ತಾಹಿಕ ಸರಣಿ ಕಾರ್ಯಕ್ರಮಗಳನ್ನು ನೀಡಿದ ಕಲಾವಿದರನ್ನು ಅಭಿನಂದಿಸಲಾಯಿತು.
ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳಲ್ಲಿ ಕಲಾವಿದರುಗಳಿಗೆ ಆಗುತ್ತಿರುವ ವಿವಿಧ ಸಮಸ್ಯೆಗಳನ್ನು ಒಕ್ಕೂಟದ ಮೂಲಕ ಎದುರಿಸುವ ಕುರಿತು ಕೂಲಂಕುಷವಾಗಿ ಚರ್ಚಿಸಲಾಯಿತು.
ಸಂಘದ ಮೂಲಕ ವಿಶ್ವಸಂಗೀತ ನೃತ್ಯ ಸಮ್ಮೇಳನವನ್ನು ನಡೆಸುವುದರ ಮೂಲಕ ಜಗತ್ತಿಗೆ ಭಾರತೀಯ ಕಲೆಗಳ ವಿರಾಟ್ ಪ್ರದರ್ಶನವನ್ನು ಹಾಗೂ ಒಗ್ಗಟ್ಟನ್ನು ಪ್ರದರ್ಶಿಸುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಮೈಸೂರು ವಿಭಾಗದ ನೂತನ ಅಧ್ಯಕ್ಷರಾದ ಡಾ. ಚಿತ್ರ ಬಿಳಿಗಿರಿ ಅವರನ್ನು ಅಭಿನಂದಿಸಲಾಯಿತು. ಹಾಗೂ ನೂತನ ಪದಾಧಿಕಾರಿಗಳ ಪರಿಚಯ ನೀಡಲಾಯಿತು. ಸಂಘದ ಅಧ್ಯಕ್ಷ ಸಾಯಿನಾರಾಯಣ ಕಲ್ಮಡ್ಕ ಮಾತನಾಡಿ ಕಲೆ ಕಲಾವಿದರ ಹಕ್ಕು ಇವುಗಳ ಉಳಿವಿಗಾಗಿ ಬೆಳವಣಿಗೆಗಾಗಿ ಸರ್ವರ ಸಹಕಾರವನ್ನೂ ಯಾಚಿಸಿದರು.
ಹಾಗೂ ಬೆಟ್ಟ ವೆಂಕಟೇಶ್ ಅವರ ವಂದಾನರ್ಪಣೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.





















