ಬೆಂಗಳೂರು.ಆ.31: ನಗರದ ನಾಗವಾರದಲ್ಲಿರುವ ಜನಪ್ರಿಯ ನವೋದಯ ಗೆಳೆಯರ ಬಳಗ (ರಿ) ವತಿಯಿಂದ ಆಯೋಜಿಸಲಾದ ಗಣೇಶೋತ್ಸವನ ಲಡ್ಡು ಪ್ರಸಾದ ಈ ಬಾರಿ ಬರೋಬ್ಬರಿ 8 ಲಕ್ಷ ರೂ.ಗೆ ಹರಾಜಾಗಿದೆ. ಈ ಲಡ್ಡು ಪ್ರಸಾದವನ್ನು ಮಾಯಣ್ಣ ಅವರ ಮೊಮ್ಮಗ ಎನ್.ಸಿ. ಪದ್ಮನಾಭ ಎನ್ನುವವರು ಖರೀದಿಸಿದ್ದಾರೆ.

ಭಾನುವಾರ ಗಣೇಶ ವಿಸರ್ಜನೆ ವೇಳೆ ನಡೆದ ಹರಾಜಿನಲ್ಲಿ ನಗರದ ಎನ್.ಸಿ. ಪದ್ಮನಾಭ ಅವರು ಖರೀದಿಸಿದರು. ಹಲವಾರು ಮಂದಿ ಈ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಲಡ್ಡು ಖರೀದಿಸಿದವರನ್ನು ಗಣೇಶ ಮಂಡಳಿಯ ಪದಾಧಿಕಾರಿಗಳು ಸನ್ಮಾನಿಸಿದರು.
ವಿಸರ್ಜನೆ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರಾದ ಐಶ್ವರ್ಯ ಸಿಂಧೂಗಿ, ಬುಲೆಟ್ ರಕ್ಷಕ್, ತನಿಶಾ ಕುಪ್ಪಂಡ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ನಾಗವಾರದಲ್ಲಿ ಕಳೆದ ಹಲವು ವರ್ಷಗಳಿಂದ ಈ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಭಾರಿ ವಿಶೇಷವಾಗಿ ಗಣೇಶನದ ಲಡ್ಡು 8 ಲಕ್ಷಕ್ಕೆ ಮಾರಾಟವಾಗಿದೆ ಜೊತೆಗೆ ಸಿನಿಮಾ ತಾರೆಯರು ವಿಸರ್ಜನೆಯಲ್ಲಿ ಪಾಲ್ಗೊಂಡಿದುದು ಹೆಚ್ಚು ವಿಶೇಷವಾಗಿತ್ತು