ಸುಂಕದಕಟ್ಟೆಯ ಹೆಗ್ಗನಹಳ್ಳಿಯಲ್ಲಿ “ಸ್ಮಾರ್ಟ್ ಕ್ವಿಕ್ ಸೂಪರ್ ಮಾರ್ಕೆಟ್” ಉದ್ಘಾಟಿಸಿ ಮಾತನಾಡಿದ ಅವರು, ಆಹಾರ, ವಿಹಾರ, ವಾಹನಗಳಿಂದ ಹಿಡಿದು ಪ್ರತಿಯೊಂದು ಇದೀಗ ಸ್ಮಾರ್ಟ್ ಆಗುತ್ತಿದೆ. ಆಂಧ್ರಪ್ರದೇಶದ ಉದ್ಯಮಿಗಳು ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಪೈಪೋಟಿ ನೀಡಲು ಕನ್ನಡಿಗರೊಬ್ಬರು ಸೂಪರ್ ಮಾರ್ಕೆಟ್ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ನಂಜಾವಧೂತ ಸ್ವಾಮೀಜಿ ಮಾತನಾಡಿ, ಯಾವುದೇ ವ್ಯಾಪಾರದಲ್ಲಿ ಗ್ರಾಹಕರ ಹಿತರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಗ್ರಾಹಕರೇ ದೇವರು. ನಮ್ಮ ಯುವ ಸಮೂಹ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳನ್ನು ಸ್ಥಾಪಿಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಿಂದ ಬಂದಿರುವ ದೀಪು ಗೌಡ ಅವರು ರಾಜಸ್ಥಾನ, ದೆಹಲಿಯಲ್ಲಿಯೂ ಯಶಸ್ವಿ ಉದ್ದಿಮೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಮಾರ್ಟ್ ಕ್ವಿಕ್ ಸೂಪರ್ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಅಧ್ಯಕ್ಷ ದೀಪುಗೌಡ ಮಾತನಾಡಿ, ನಮ್ಮ ಲಾಭಾಂಶದಲ್ಲಿ ಶೇ 80 ರಷ್ಟು ಪಾಲು ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮೂಲಕ ಹಿಂತಿರುಗಿಸುತ್ತೇವೆ. ಬೇರೆ ಇ ಕಾಮರ್ಸ್ ಕಂಪೆನಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚಿನ ರಿಯಾಯಿತಿ, ಗುಣಮಟ್ಟದ ವಸ್ತುಗಳನ್ನು ನೀಡುತ್ತೇವೆ. ಮೂರು ವರ್ಷಗಳಲ್ಲಿ ನೂರು ಸೂಪರ್ ಮಾರ್ಕೆಟ್ ಗಳನ್ನು ಸ್ಥಾಪಿಸಿ ಕನ್ನಡಿಗರು ಒಳಗೊಂಡಂತೆ ದೇಶದ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಉದ್ಯಮಿ ಕೆ.ಎಸ್. ವೆಂಕಟೇಶ್, ಸುದೀಪ್ ಗೌಡ, ಶಿವುಗೌಡ, ಉದಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.