Live Stream

[ytplayer id=’22727′]

| Latest Version 8.0.1 |

Employment

ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ಶಿಕ್ಷಣ

ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ಶಿಕ್ಷಣ
ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಶನ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಶನ್, ಮೈಕ್ರೋಸಾಫ್ಟ್ ಆಫೀಸ್, ಟ್ಯಾಲಿ, ಡಿಟಿಪಿ (ಕೋರೆಲ್ ಡ್ರಾ, ಪೋಟೀಶಾಪ್) ಸ್ಪೋಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ, ಬ್ಯಾಂಕಿಂಗ್ ಉತ್ಪನ್ನಗಳ ಪರಿಚಯ  ಸೇರಿದಂತೆ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು ನೀಡಲಿದೆ. ಕಂಪ್ಯೂಟರ್ ತರಬೇತಿಯು 2025 ಜುಲೈ 1 ರಂದು ಪ್ರಾರಂಭವಾಗಲಿದೆ.

ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಪಿಯುಸಿ, ಡಿಗ್ರಿ, ಡಿಪೆÇ್ಲಮಾ ಹೊಂದಿದವವರಿಗೆ ಆದ್ಯತೆ ನೀಡಲಾಗುವುದು ಮತ್ತು ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ / ವರ್ಗದವರಿಗೆ ಗರಿಷ್ಟ ವಯಸ್ಸು 35 ನಿಗದಿಪಡಿಸಲಾಗಿದೆ.

ತರಬೇತಿಗೆ ಸೇರ ಬಯಸುವವರು ನೇರ ಸಂದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲ್ಲಿದ್ದು, ಅರ್ಜಿ ಫಾರಂಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ. ತರಬೇತಿ ಅವಧಿಯು ಮೂರು ತಿಂಗಳಾಗಿದ್ದು, ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ತರಬೇತಿ ಅವಧಿಯಲ್ಲಿ ಮಧ್ಯಾಹ್ನದ ಉಪಹಾರ ನೀಡಲಾಗವುದು.

ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, 3 ನೇ ಮಹಡಿ, 15 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-560055 ಹಾಗೂ ದೂರವಾಣಿ ಸಂಖ್ಯೆ: 080-23440036 / 23463580 / 94485 38107 ಅಥವಾ ಇ-ಮೇಲ್ [email protected][email protected] ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವೀ ಕೇ ನ್ಯೂಸ್
";