ಬೆಂಗಳೂರು:
ನಗರದ ಜನಸಂಚಾರಯುಕ್ತ ಪ್ರದೇಶವಾಗಿರುವ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಶಂಕಾಸ್ಪದ ಬ್ಯಾಗ್‌ನಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಘಟನೆ ನಗರದಾದ್ಯಂತ ಆತಂಕ ಮೂಡಿಸಿದೆ. ಶೌಚಾಲಯದ ಬಳಿಯ ಈ ಬ್ಯಾಗ್‌ನಲ್ಲಿದ್ದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ ಪತ್ತೆಯಾಗಿದ್ದು, ತಕ್ಷಣವೇ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ತಪಾಸಣಾ ದಳಗಳು ಆಗಮಿಸಿವೆ.
ಬಾಂಬ್ ನಿಷ್ಕ್ರಿಯ ದಳ ದೌಡಾಯನೆ:
ಘಟನೆಯ ಮಾಹಿತಿ ಲಭುತ್ತಿದ್ದಂತೆ ಕಲಾಸಿಪಾಳ್ಯ ಠಾಣೆಯ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಸ್ಥಳಕ್ಕೆ ದೌಡಾಯಿಸಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಎಡವಟ್ಟಿಲ್ಲದೇ ಸ್ಫೋಟಕ ವಸ್ತುಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ.
ಆತಂಕದ ವಾತಾವರಣ:
ಪ್ರಮುಖ ಸಾರಿಗೆ ಕೇಂದ್ರವೊಂದರಲ್ಲಿ ಈ ರೀತಿಯ ಸ್ಫೋಟಕ ಪತ್ತೆಯಾಗಿದೆ ಎಂಬುದು ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಿದ್ದು, ಈ ಹಿನ್ನೆಲೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಶಂಕಿತರನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ