ಬೆಂಗಳೂರು,ಜು.27: ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ನಗರದ ಅರಮನೆ ಮೈದಾನದ ಪ್ರಿನ್ಸಸ್ ಶೀರಿನ್ ಸಭಾಂಗಣದಲ್ಲಿ ಇದೇ ಜುಲೈ 29, 30, 31 ನೇ ಮೂರು ದಿನಗಳ ಕಾಲ ನೂರಕ್ಕೂ ಅಧಿಕ ಸಿದ್ಧ ಉಡುಪು ಕಂಪೆನಿಗಳ 30ನೇ “ಸಿಗಾ ಫೇರ್” ಬಿ ಟು ಬಿ ಪ್ರದರ್ಶನ ಮೇಳ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಜವಳಿ ಸಚಿವ ಶಿವಾನಂದ ಪಾಟೀಲ್ ಮೇಳ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.
ಜವಳಿ ಉದ್ಯಮದ ಶ್ರೇಯೋಭಿವೃದ್ಧಿಗಾಗಿ ಈ ಮೇಳ ಆಯೋಜಿಸಲಾಗಿದೆ. ವ್ಯಾಪಾರ ವಹಿವಾಟು ನಡೆಸಲು ಇದು ಸೂಕ್ತ ವೇದಿಕೆಯಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಗಾರ್ಮೆಂಟ್ಸ್ ಉದ್ಯಮದ ಜೊತೆಗೆ ನಮ್ಮ ಅಸೋಸಿಯೇಷನ್ ಕೈಜೋಡಿಸಿದೆ. ದಕ್ಷಿಣ, ಉತ್ತರ ಭಾರತ ಗಾರ್ಮೆಂಟ್ಸ್ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ಇದು ಉತ್ತಮ ವೇದಿಕೆಯಾಗಿದೆ. “ಸಿಗಾಫೇರ್” ಪ್ರದರ್ಶನ ಮೇಳ ಉದ್ಯಮದಲ್ಲಿ ಲಾಭಗಳಿಸಲು ಸಹಕಾರಿಯಾಗಿದೆ ಎಂದರು.ಈ ಮೇಳದಲ್ಲಿ ಸರಿ ಸುಮಾರು 200ಕೋಟಿ ರೂಪಾಯಿ ವಹಿವಾಟು ನಡೆಯಲಿದೆ. ಮಹಿಳಾ ಉದ್ಯಮಿಗಳಿಗೆ ಗಾರ್ಮೆಂಟ್ಸ್ ಉದ್ಯಮಕ್ಕೆ ತೊಡಗಲು ಅನುಕೂಲ ವಾತವರಣ ನಿರ್ಮಿಸಲಾಗಿದೆ. ಬೆಂಗಳೂರು, ಬಳ್ಳಾರಿ ನಗರದಲ್ಲಿ ಗಾರ್ಮೆಂಟ್ಸ್ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ. ಇಡಿ ವಿಶ್ವಕ್ಕೆ ಬ್ರಾಂಡೆಡ್ ಬಟ್ಟೆಗಳು ನಮ್ಮಲ್ಲಿ ತಯಾರಿಕೆಯಾಗುತ್ತಿದೆ. ಕಾರ್ಮಿಕ ಕಾನೂನು ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉದ್ಯಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಾರ್ಮೆಂಟ್ಸ್ ಉದ್ಯಮಕ್ಕೆ ಸಹಕಾರ ನೀಡಬೇಕು ಎಂದರು.
ಪುರುಷರು, ಮಹಿಳೆಯರು ಮತ್ತು ಮಕ್ಕಳು – ಮದುವೆಯ ಉಡುಪುಗಳು, ಸಾಂಪ್ರದಾಯಿಕ ಉಡುಪುಗಳು, ಕ್ಯಾಶುಯಲ್ ವೇರ್ ಗಳು, ಡೆನಿಮ್ಗಳು, ಪಾಶ್ಚಾತ್ಯ ಉಡುಪುಗಳು, ಲೌಂಜ್ ಉಡುಪುಗಳು, ಚಳಿಗಾಲದ ಉಡುಪುಗಳು ಮತ್ತು ಪರಿಕರಗಳು ಲಭ್ಯವಿದೆ. ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನರೇಶ್ ಲಕನ್ ಪಾಲ್, ಕಾರ್ಯದರ್ಶಿ ರಾಜೇಶ್ ಚಾವತ್, ಖಜಾಂಚಿ ತೇಜಸ್ ಮೆಹ್ತಾ, ಗೋವಿಂದ ಮುಂದ್ರ, ನಿರ್ದೇಶಕ ರಾಜ್ ಟೇಕಡಿವಾಲ್ ಭಾಗವಹಿಸಿದ್ದರು.