ಈ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು, ಭಾರತ ಸರ್ಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ www.cybercrime.gov.in ಮತ್ತು ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ಅನ್ನು ಪ್ರಾರಂಭಿಸಿದೆ. ಇದರ ಮೇಲೆ ನಾಗರಿಕರು ಆನ್‍ಲೈನ್ ಹಣಕಾಸು ವಂಚನೆ ಮತ್ತು ಇತರ ಸೈಬರ್ ಅಪರಾಧಗಳನ್ನು ತಕ್ಷಣ ವರದಿ ಮಾಡಲು ಅನುವು ಮಾಡಿಕೊಡುತ್ತದೆ. ಈ ವೇದಿಕೆಗಳ ಪರಿಣಾಮಕಾರಿತ್ವವು ವ್ಯಾಪಕ ಸಾರ್ವಜನಿಕ ಜಾಗೃತಿಯನ್ನು ಅವಲಂಬಿಸಿರುತ್ತದೆ. ಇದನ್ನು ಸಾಧಿಸಲು ದೇಶದಾದ್ಯಂತ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಸೈಬರ್ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರವು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ನಿಮ್ಮ ಸಹಕಾರದೊಂದಿಗೆ ಉಪಕ್ರಮಗಳನ್ನು ಕೈಗೊಳ್ಳಬೇಕು.
ರಾಜ್ಯ ಮಟ್ಟದ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪರ್ಕ ಅಭಿಯಾನಗಳಲ್ಲಿ ಸೈಬರ್ ಜಾಗೃತಿ ಮೂಡಿಸುವುದು.
ಸೈಬರ್ ಜಾಗೃತಿಗಾಗಿ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ “ಸೈಬರ್ ದೋಸ್ತ್” ಅನ್ನು ಅನುಸರಿಸಲು/ಚಂದಾದಾರರಾಗಲು ನಾಗರಿಕರಿಗೆ ಸಲಹೆ ನೀಡುವುದು.
ಸಾರ್ವಜನಿಕ ಸ್ಥಳಗಳು, ಪೋಲೀಸ್ ಠಾಣೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಹಾಯವಾಣಿ 1930 ಮತ್ತು ಪೋರ್ಟಲ್ ಮಾಹಿತಿಯನ್ನು ಪ್ರದರ್ಶಿಸುವುದು. ರಾಜ್ಯ ಯೋಜನೆಗಳ ಜಾಹೀರಾತುಗಳು ಮತ್ತು ಯುಟಿಲಿಟಿ ಬಿಲ್‍ಗಳಲ್ಲಿ ಸಹಾಯವಾಣಿ ಮತ್ತು ಪೋರ್ಟಲ್ ಮಾಹಿತಿಯನ್ನು ಸೇರಿಸುವುದು.
ಶಾಲಾ ಕೋರ್ಸ್‍ಗಳಲ್ಲಿ ಮತ್ತು ಶಿಕ್ಷಕರ ತರಬೇತಿಯಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಸೇರಿಸುವುದು. ಈ ನಿಟ್ಟಿನಲ್ಲಿ, ಗೃಹ ಸಚಿವಾಲಯದ ಯಾವುದೇ ಸಹಕಾರಕ್ಕಾಗಿ “ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ”ವನ್ನು ಸಂಪರ್ಕಿಸಬಹುದು.
ಈ ಸಾಮೂಹಿಕ ಪ್ರಯತ್ನವು ಸೈಬರ್ ಅಪರಾಧಿಗಳನ್ನು ನಿರುತ್ಸಾಹಗೊಳಿಸುತ್ತದೆ ಮತ್ತು ಸೈಬರ್ ಅಪರಾಧಗಳಿಂದ ನಾಗರಿಕರಿಗೆ ಸುರಕ್ಷತೆ ನೀಡುತ್ತದೆ. ಭಾರತವನ್ನು ಡಿಜಿಟಲ್ ದೃಷ್ಟಿಯಿಂದ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ರಾಜ್ಯ ಏಜೆನ್ಸಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ಈ ಅಂಶಗಳ ಆಧಾರದ ಮೇಲೆ ಆಯಾ ಇಲಾಖೆಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.