Live Stream

[ytplayer id=’22727′]

| Latest Version 8.0.1 |

Cultural

ಉದಯೋನ್ಮುಖ ನೃತ್ಯಕಲಾವಿದೆ ಗುಣಶ್ರೀಯ ‘ನೃತ್ಯ ಸುಗುಣ’

ಉದಯೋನ್ಮುಖ ನೃತ್ಯಕಲಾವಿದೆ ಗುಣಶ್ರೀಯ ‘ನೃತ್ಯ ಸುಗುಣ’

ಪ್ರಸಿದ್ಧ `ಸಾಧನ ಸಂಗಮ ಡಾನ್ಸ್ ಸೆಂಟರ್‘ ನ ನೃತ್ಯಗುರುದ್ವಯರಾದ ವಿ. ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ ಸಾಧನಶ್ರೀ ಅವರ ಕಾಳಜಿಪೂರ್ಣ ಭರತನಾಟ್ಯ ಮಾರ್ಗದರ್ಶನದಲ್ಲಿ ರೂಪುಗೊಂಡ ನೃತ್ಯಪ್ರತಿಭೆ ಕು. ಪಿ. ಗುಣಶ್ರೀ ಬಹುಮುಖ ಪ್ರತಿಭೆ. ಸಂಗೀತ -ನಾಟ್ಯಗಳಲ್ಲಿ ಭರವಸೆಯ ಅಡಿಗಳನ್ನಿಡುತ್ತಿರುವ ಗುಣಶ್ರೀ ಬೆಂಗಳೂರಿನ ಎಸ್. ಪುಟ್ಟಸ್ವಾಮಿ ಮತ್ತು ಟಿ. ಸವಿತಾ ದಂಪತಿಗಳ ಪುತ್ರಿಯಾಗಿದ್ದು ಕಳೆದ ಹನ್ನೆರಡು ವರ್ಷಗಳಿಂದ ಸತತ ಅಭ್ಯಾಸ- ಪರಿಶ್ರಮಗಳಿಂದ ನೃತ್ಯ ಕಲಿಯುತ್ತಿದ್ದಾಳೆ.

ಇವಳು ಗಂಧರ್ವ ಮಹಾಮಂಡಲದ 5 ಹಂತದ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ತೇರ್ಗಡೆಯಾಗಿರುವುದಲ್ಲದೆ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದು ಜಯಶೀಲಳಾಗಿದ್ದಾಳೆ. ಬಿಕಾಂ ಫೈನಲ್ ತರಗತಿಯಲ್ಲಿ ಓದುತ್ತಿರುವ ಗುಣಶ್ರೀ, ಕವಿತಾ ರಚನೆ, ಚಿತ್ರಕಲೆ, ಯೋಗ ಮತ್ತು ಕ್ರೀಡೆಯಲ್ಲೂ ಮುಂದಿದ್ದು, 20 ಸಂಶೋಧನಾ ಪ್ರಬಂಧಗಳನ್ನು ಬರೆದು ಮಂಡಿಸಿರುವ ವೈಶಿಷ್ಟ್ಯ ಪಡೆದಿದ್ದಾಳೆ. ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸಾಧನ ಸಂಗಮ’ ದ ‘ನೃತ್ಯ ನಿಪುಣ’ ತಂಡದ ಭಾಗವಾಗಿರುವ ಗುಣಶ್ರೀ, ಇದೀಗ ‘’ನೃತ್ಯಸುಗುಣ ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ತನ್ನ ರಂಗಪ್ರವೇಶಕ್ಕೆ ಸಿದ್ಧಗೊಂಡಿದ್ದಾಳೆ. ವಿಜಯನಗರದ ‘ಕಾಸಿಯಾ’ ಸಭಾಂಗಣದಲ್ಲಿ ಇದೇ ತಿಂಗಳ 31 ಭಾನುವಾರ ಬೆಳಗ್ಗೆ 10 ಗಂಟೆಗೆ ತನ್ನ ನರ್ತನ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾಳೆ. ಅತ್ಯುತ್ಸಾಹದಿಂದ ರಂಗಪ್ರವೇಶಕ್ಕೆ ಅಣಿಯಾಗಿರುವ ಗುಣಶ್ರೀಯ ಈ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೆ ಸುಸ್ವಾಗತ.

ವೀ ಕೇ ನ್ಯೂಸ್
";