*ಸೆಪ್ಟೆಂಬರ್ 28 ಕ್ಕೆ *ರಾಜ್ಯ ಮಟ್ಟದ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನ**
ಅಧ್ಯಕ್ಷರಾಗಿ ಕೃಷಿಕ, ಕವಿ, ಉಪನ್ಯಾಸಕ ಡಾ.ಎಂ.ಆರ್.ಉಪೇಂದ್ರಕುಮಾರ್
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ( ರಿ), ಸಿದ್ಧನಹಳ್ಳಿ. ಇದೇ ಸೆಪ್ಟೆಂಬರ್ ತಿಂಗಳ 28 ನೇ ತಾರೀಖು ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ 10 ನೇ ಯುವ ಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೃಷಿಕ, ಕವಿ ಹಾಗೂ ಕನ್ನಡ ಉಪನ್ಯಾಸಕರಾದ ಡಾ.ಎಂ.ಆರ್.ಉಪೇಂದ್ರಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಾಗೂ ಮಹಾತ್ಮ ಗಾಂಧೀಜಿ, ರೈತರು ಬಗೆಗಿನ ಆದರ್ಶಗಳನ್ನು ಯುವಜನರಿಗೆ ತಲುಪಿಸುವ ಕೆಲಸವನ್ನು ವಿಚಾರ ಸಂಕಿರಣ, ಸಂವಾದ, ನೃತ್ಯ , ಹಾಡುಗಾರಿಕೆ, ಕವಿಗೋಷ್ಠಿ, ನಿಜವಾದ ಸಾಧಕರಿಗೆ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು. ಭಾಗವಹಿಸಲಿಚ್ಚಿಸುವವರು , ಸೇವಾ ಮನೋಭಾವ ಉಳ್ಳವರು, ಕನ್ನಡ ಶ್ರೀಸಾಮಾನ್ಯ ಪ್ರತಿನಿಧಿಯಾಗಿ ಭಾಗವಹಿಸಬಹುದು… ನೋಂದಣಿಗಾಗಿ : ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ), ಅಧ್ಯಕ್ಷರು.ಮೊ. 9448880985, 7411180985
Veekay News > State News > ರಾಜ್ಯಮಟ್ಟದ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಕೃಷಿಕ, ಕವಿ, ಉಪನ್ಯಾಸಕ ಡಾ.ಉಪೇಂದ್ರಕುಮಾರ್
ರಾಜ್ಯಮಟ್ಟದ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಕೃಷಿಕ, ಕವಿ, ಉಪನ್ಯಾಸಕ ಡಾ.ಉಪೇಂದ್ರಕುಮಾರ್
ವೀ ಕೇ ನ್ಯೂಸ್01/09/2025
posted on
