ನಂತರ ಡಾ. ಸುರೇಶ ಪಾಟೀಲ ದಂಪತಿಗಳಿಗೆ ಸನ್ಮಾನ ಸನ್ಮಾನಿಸಲಾಯಿತು. ತಮ್ಮ ಕೃತಿಯ ಬಗೆಗೆ ಹೇಳುತ್ತಾ ಡಾ. ಸುರೇಶ ಪಾಟೀಲರು ಸತತ ಎರಡು ವರ್ಷಗಳ ಪರಿಶ್ರಮದಿಂದ ಬರೆದಿರುವ ಕಾದಂಬರಿಯನ್ನು ಆರಂಭಿಸಿದಾಗ ಎದುರಾದ ಹಿಂಜರಿಕೆ ಮತ್ತು ಅಡೆ ತಡೆಗಳ ಬಗೆಗೆ ಹೇಳಿದರು. ಸ್ವಭಾವತಃ ಯಾವುದೇ ವಿವಾದ ಅಥವಾ ಅಪಾಯಗಳನ್ನು ಬಯಸದೇ ಇರುವ ವಿವಾದಿತವಾದ ವಿಷಯಗಳನ್ನು ಮುಟ್ಟದೇ ತಮ್ಮ ಚೌಕಟ್ಟಿನಲ್ಲಿಯೇ ಬರೆಯುವ ಸ್ವಭಾವವನ್ನು ಹೇಳಿಕೊಳ್ಳುತ್ತಾ, ಸನ್ನಿಧಿ ಇಲ್ಲಿಯವರೆಗೂ ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ಶ್ರೀಮಧ್ವಾಚಾರ್ಯರ ಬಗೆಗೆ ಬರೆದಿರುವ ಮೊದಲ ಕಾದಂಬರಿಯಾಗಿದ್ದು ಸಾಮಾನ್ಯವಾಗಿ ಎಲ್ಲರೂ ಮಧ್ವಾಚಾರ್ಯರನ್ನು ದ್ವೈತ ಸಿದ್ಧಾಂತವನ್ನು ಶಿಷ್ಟಾಚಾರದ ಪ್ರತೀಕ ವಾಗಿ ನೋಡುತ್ತೇವೆ, ನಿಜವಾದ ಮಧ್ವಾಚಾರ್ಯರರನ್ನು ತಿಳಿದುಕೊಳ್ಳುವ ಪ್ರಯತ್ನ ಆಗಿಯೇ ಇಲ್ಲ ಇಲ್ಲ. ಕೇವಲ ಮತೀಯ ಹಾಗೂ ಪೂರ್ವಾಗ್ರಹ ಪೂರ್ವಕವಾಗಿ ಸಂಕುಚಿತ ಮನೋಭಾವನೆಯ ತತ್ವವೇಂದೇ ಬಿಂಬಿಸುತ್ತಾ ಬಂದಿರುವದರಿಂದ ಹೆಚ್ಚು ಜನರು ಹಾಗೆಯೇ ತಿಳಿದುಕೊಂಡಿದ್ದಾರೆ ಎಂದು ಹೇಳಿದರು. ಕಾದಂಬರಿ ಬರೆಯಲು ಮೂಲ ಪ್ರೇರಣೆ ವರ್ಗಿಸ್ ಅಬ್ರಹಾಂ ಎಂಬ ಪಾಶ್ಚಾತ್ಯ ವಿದ್ವಾಂಸನ ಪುಸ್ತಕದಿಂದ ಮೂಲಕ ಓದಿದ ಮೇಲೆ ವಿಶ್ವಾತ್ಮಕತೆ ತತ್ವ ಮತ್ತು ಅದನ್ನು ಪ್ರತಿಪಾದಿಸಿದ ಮಧ್ವಾಚಾರ್ಯರ ಬಗೆಗೆ ಬರೆಯಲೇ ಬೇಕೆಂದು ನಿರ್ಧರಿಸಿ ಬರೆದ ಕಾದಂಬರಿ ಎಂದು ಹೇಳಿದರು.
ವಂದನಾರ್ಪಣೆಯನ್ನು ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಎನ್ ಎಸ್ ಸತೀಶರವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಎಸ್ ಎಲ್ ಮಂಜುನಾಥ್‌ರವರು ಸೊಗಸಾಗಿ ಮಾಡಿದರು. ಕಾರ್ಯಕ್ರಮದಲ್ಲಿ ಐಸಿರಿ ಪ್ರಕಾಶನದ ಡಾ.ರೂಪಾ ಮಂಜುನಾಥ್ ಹಾಗೂ ತಂಡದವರು ದೂರದರ್ಶನದ ಸುದ್ದಿ ಸಂಪಾದಕರಾಗಿದ್ದ ಡಾ. ಮೈ. ಸಿ ಪಾಟೀಲ ಹಾಗೂ ಖ್ಯಾತ ಲೇಖಕರು ಮತ್ತು ಪ್ರಸಿದ್ಧ ಜ್ಯೋತಿಷಿಗಳಾದ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು ಉಪಸ್ಥಿತರಿದ್ದರು.




















