Bengaluru : ನೃತ್ಯಕುಟೀರ (Nruthya Kuteera) ಸಂಸ್ಥೆಯ ನಿರ್ದೇಶಕಿಯಾದ ಗುರು ಶ್ರೀಮತಿ ವಿದುಷಿ ದೀಪಾಭಟ್ (Vidwan Smt. Deepa Bhat) ಅವರ ಶಿಷ್ಯರಾದ ಡಾ. ಹರಿಪ್ರಿಯಾ ಸುಮನ ಗೋಸಕನ್ (Dr. Haripriya Sumana Gokasan) ಹಾಗು ಶ್ರೀಮತಿ ರಶ್ಮಿ ಹರೀಶ್ (Smt. Rashmi Harish) ಅವರ ದ್ವಂದ್ವ ರಂಗಪ್ರವೇಶ (Rangapravesha) ಸಮಾರಂಭ , ಅಕ್ಟೋಬರ್ 18 ರಂದು ಸಂಜೆ 5.30ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಗುರು ವಿದುಷಿ ಶ್ರೀಮತಿ ನಿರ್ಮಲಾ ಜಗದೀಶ್ & ಗುರು ವಿದುಷಿ ಶ್ರೀಮತಿ ಪರಿಮಳ ಹನ್ಸೋಗೇ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮಕ್ಕೆ ಸಂಗೀತ ಸಹಕಾರವನ್ನು ನೀಡುತ್ತಿರುವವರು — ವಿದುಷಿ ಪರಿಮಳ ಹನ್ಸೋಗೇ (ನಟ್ಟುವಾಂಗಂ), ವಿದ್ವಾನ್ ರೋಹಿತ್ ಭಟ್ (ಹಾಡುಗಾರಿಕೆ), ವಿದ್ವಾನ್ ನಾಗರಾಜ್ ಜಿ.ಎಸ್. (ಮೃದಂಗಂ), ವಿದ್ವಾನ್ ಎಚ್.ಎಸ್. ವೇಣುಗೋಪಾಲ್ (ಕೊಳಲು) ಮತ್ತು ವಿದ್ವಾನ್ ಕೃಷ್ಣ ಕಶ್ಯಪ್ (ವೈಲಿನ್).
ಡಾ. ಹರಿಪ್ರಿಯಾ ಮತ್ತು ಶ್ರೀಮತಿ ರಶ್ಮಿ ಅವರು ನೃತ್ಯಯಾತ್ರೆಯ ಮಹತ್ವದ ಹಂತವನ್ನು ಮುಟ್ಟುತ್ತಿರುವ ಈ ಸಂದರ್ಭದಲ್ಲಿ ನೃತ್ಯಕುಟೀರ ಕುಟುಂಬವು ಎಲ್ಲರಿಗೂ ಆಹ್ವಾನ ನೀಡಿದ್ದು, ಅವರ ಕಲಾಪ್ರಯಾಣಕ್ಕೆ ಆಶೀರ್ವಾದ ಕೋರುತ್ತಿದೆ.
ನೃತ್ಯ ಕುಟೀರ ದ ನಿರ್ದೇಶಕಿ
ದೀಪಾ ಭಟ್





















