ಬೆಂಗಳೂರು : ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನೂ ಹೇರದೇ ಅವರಿಗೆ ಉತ್ತಮಸಂಸ್ಕಾರ ಯುತವಾದ ಶಿಕ್ಷಣ ನೀಡಿ ಎಂದು ಪೋಷಕರಿಗೆ ಕ್ಯಾತ ಶಿಕ್ಷಣ ತಜ್ಞೆ ಡಾ, ಗೀತಾ ರಾಮಾನುಜಾಮ್ ಕರೆ ನೀಡಿದರು.
ಅವರು ನಾಟ್ಯ ಸನ್ನಿಧಿ ಭರತನಾಟ್ಯ ಕಲಾಶಾಲೆಯ ನೃತ್ಯಗುರು ಡಾ, ಮೋನಿಷಾ ನವೀನ್ ಅವರ ಸಾರಥ್ಯದಲ್ಲಿ ಕಲಾಗ್ರಾಮದ ಸಮುಚ್ಚಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟ್ಯ ಸಂಭ್ರಮ 2025ರಲ್ಲಿ ಪಾರ್ವತಿ ಕಲ್ಯಾಣ ನೃತ್ಯ ರೂಪಕಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಮಕ್ಕಳು ಗಳಿಸುವ ಅಂಕಗಳನ್ನು ನೋಡದೆ ಅವರಲ್ಲಿ ಹುದುಗಿರುವ ಕಲಾಪ್ರತಿಭೆ, ಸಂಸ್ಕಾರ ವನ್ನು ಗುರ್ತಿಸಿ ಅವರನ್ನು ಪ್ರೋತ್ಸಾಹಿಸಿ ಎಂದರು,
ಇನ್ನೊಬ್ಬರ ಮುಂದೆ ಎಂದಿಗೂ ನಿಮ್ಮ ಮಕ್ಕಳನ್ನು ತೆಗೆಳುವುದು ಹೀಯಾಳಿಸುವುದನ್ನು ಮಾಡಬೇಡಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷ್ ರಾವ್ ಮಾತನಾಡಿ 15ನೇ ಶತಮಾನದಲ್ಲಿ ನಿರ್ಮಾಣವಾದ ಲೇಪಾಕ್ಷಿ ದೇವಾಲಯದಲ್ಲಿ ಅಸಂಪೂರ್ಣ ಕಲ್ಯಾಣ ಮಂಟಪದಲ್ಲಿ ವಶೀಷ್ಟ ಮಹರ್ಷಿ ಶಿವಪಾರ್ವತೀಯರ ಕಲ್ಯಾಣ ಶಿಲ್ಪಗಳು, ಮೈನಾದೇವಿ, ಹಿಮವಂತರು ಪಾರ್ವತಿ ಕಲ್ಯಾಣದಲ್ಲಿ ಹೆಣ್ಣುಒಪ್ಪಿಸುವ ಶಿಲ್ಪಕಲಾಕೃತಿಗಳಿರುವ ಕುರಿತು ಪ್ರೇಕ್ಷಕರಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲಾಪ್ರೋತ್ಸಾಹಕ ಹಿರಿಯ ಪತ್ರಕರ್ತ ಎನ್.ಎಸ್. ಸುಧೀಂದ್ರ ರಾವ್ ವಹಿಸಿ ಮಾತನಾಡಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕೆಲ ಸಣ್ಣ ಪುಟ್ಟ ಲೋಪ ದೋಷ ವಿದ್ದರು ಅದು ಪ್ರೇಕ್ಷಕರ ಗಮನಕ್ಕೆ ಬಾರದೆ ಇರುವಂತೆ ಅದ್ಭುತವಾಗಿ ಅಭಿನಯಿಸಿ ಸಭಿಕರ ಮೆಚ್ಚುಗೆ ಗಳಿಸಿದರು. ಕಲಿಕೆಗೆ ಮಿತಿಎಂಬುದು ಇಲ್ಲ ಅದು ಸಾಗರದಂತೆ ಮೊಗೇದಷ್ಟು ಮತ್ತಷ್ಟು ಎಂಬತ್ತೆ ಇರುತ್ತೆ ಎಂದರು.
ಪಾರ್ವತಿ ಕಲ್ಯಾಣ ನೃತ್ಯ ರೂಪಕವಂತು ಅಮೋಘ ರಂಗಸಚ್ಚಿಕೆ, ವಸ್ತ್ರವಿನ್ಯಾಸ, ಪಾತ್ರಕ್ಕೆ ತಕ್ಕ ಪ್ರಸಾದನ ದೊಂದಿಗೆ ಕೂಡಿ ಕಳೆಕಟ್ಟಿತು, ದಕ್ಷ ಯಜ್ಞದಲ್ಲಿ ಶಿವನನ್ನು ಅವಮಾನಿಸುವುದು, ಸಚಿದೇವಿ ಅಗ್ನಿ ಪ್ರವೇಶ, ಮರು ಜನ್ಮದಲ್ಲಿ ಪಾರ್ವತಿ ಬಾಲ್ಯ, ಶಿವನಿಗಾಗಿ ತಪಸ್ಸು ಆಚರಿಸುವುದು, ಮದುವೆಯ ಸಂಪ್ರದಾಯ ದಂತೆ ಗೌರಿ ಪೂಜೆ, ಕಾಶಿಯಾತ್ರೆ, ಅಂತರಪಟ, ಧಾರೆಯರೆಯುವುದು, ಮಾಂಗಲ್ಯಧಾರಣೆ, ಸಪ್ತಪದಿ, ಉಂಗುರ ತೆಗೆಯುವುದು, ಅತಿಥಿಯರಿಗೆ ಭೂರಿ ಭೋಜನ, ಉಡುಗೊರೆ, ಹೆಣ್ಣು ಒಪ್ಪಿಸುವುದು ಸೇರಿದಂತೆ ವಿವಾಹ ವಿಧಿ ವಿಧಾನಗಳನ್ನು ಸುಂದರವಾಗಿ ನೃತ್ಯ ರೂಪಕದಲ್ಲಿ ಮೂಡಿಬಂತು.
ಕಾರ್ಯಕ್ರಮ ಆರಂಭದಲ್ಲಿ ವಾದ್ಯ ಗುರು ಯಶೋಧಕೃಷ್ಣ ನೇತೃತ್ವದಲ್ಲಿ ಮಕ್ಕಳ ಕೀ ಬೋರ್ಡ್ ವಾದನ ಮನಸೆಳೆಯಿತು,ನಟ್ಟುವಾoಗದಲ್ಲಿ ಮೋನಿಷಾ ನವೀನ್, ಹಾಡುಗರಿಕೆಯಲ್ಲಿ ಭಾರತಿ ವೇಣುಗೋಪಾಲ್, ಕೊಳಲಲ್ಲಿ ಡಾ, ಸ್ಕಂದಕುಮಾರ್, ಮೃದಂಗದಲ್ಲಿ ವೇಣುಗೋಪಾಲ್, ರಿತಮ್ ಪ್ಯಾಡ್ ನಲ್ಲಿ ವೆಂಕಟೇಶ ಸಾಗರ ಕಲಾವಿದರಿಗೆ ಸಹಕಾರ ನೀಡಿದರು.
ಎಲ್ಲಾ ಗಣ್ಯರಿಗೆ ಹಾಗು ಕಲಾವಿದರಿಗೆ, ಪ್ರಶಸ್ತಿ ಪತ್ರ, ಪಾರಿತೋಷಕ ನೀಡಿ ಸನ್ಮಾನಿಸಲಾಯಿತು,
ಕಾರ್ಯಕ್ರಮದಲ್ಲಿ ವಚನ ಜ್ಯೋತಿ ಬಳಗದ ಪಿನಾಕಪಾಣಿ, ಸಹಕಾರ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಎನ್ ಶಂಕರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ಉಷಾ ಬಸಪ್ಪ, ನೃತ್ಯ ಗುರು ದರ್ಶಿನಿ ಮಂಜುನಾಥ್, ದೂರದರ್ಶನದ ಉಪನಿರ್ದೇಶಕ ಕೆ. ಸತೀಶ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮಂಗಳಬಾಲಚಂದ್ರ ಮಾಡಿದರೆ ಪ್ರಾರ್ಥನೆಯನ್ನು ಶಾಲಿನಿ ಸುಧೀಂದ್ರ ಮಾಡಿದರು ವಂದನಾರ್ಪಣೆ ಯನ್ನು ಹೇಮಾವತಿಹನುಮಂತಯ್ಯ ಮಾಡಿದರು.
Veekay News > State News > *ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನೂ ಹೇರ ಬೇಡಿ -ಡಾ, ಗೀತಾ ರಾಮಾನುಜಾಮ್.*
*ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನೂ ಹೇರ ಬೇಡಿ -ಡಾ, ಗೀತಾ ರಾಮಾನುಜಾಮ್.*
ವೀ ಕೇ ನ್ಯೂಸ್31/08/2025
posted on
