Live Stream

[ytplayer id=’22727′]

| Latest Version 8.0.1 |

Feature Article

ಹಿಂದೂಗಳಿಗೆಲ್ಲ ದೀಪಾವಳಿ ಹಬ್ಬ ಅತ್ಯಂತ ಮಹತ್ವದ ಸ್ಥಾನವಿದೆ

ಹಿಂದೂಗಳಿಗೆಲ್ಲ ದೀಪಾವಳಿ ಹಬ್ಬ ಅತ್ಯಂತ ಮಹತ್ವದ ಸ್ಥಾನವಿದೆ
ದೀಪಾವಳಿ (Deepavali) ಹಿಂದೂಗಳಿಗೆಲ್ಲ ಸಡಗರ ಸಂಭ್ರಮದ ಹಬ್ಬ ವರ್ಷವಿಡೀ ಆಚರಿಸುವ ಹಬ್ಬಗಳಲ್ಲೆಲ್ಲಾ  ದೀಪಾವಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ.  ಬೆಳಕಿನ ಹಬ್ಬ (Festival) ದೀಪಾವಳಿ ಮತ್ತೆ ಬಂದಿದೆ.  ಭಾರತದಾದ್ಯಂತ  ಆಚರಿಸುವ ಹಬ್ಬವೆಂದರೆ ದೀಪಾವಳಿ “ತಮಸೋಮ ಜ್ಯೋತಿಗಮಯ” (Tamasoma Jyothirgamaya) ಕತ್ತಲಿನಿಂದ ಬೆಳಕಿನ ಕಡೆಗೆ ದೀಪಾವಳಿ ಎಂದರೆ ಯಾರಿಗೂ ಖುಷಿಯಿಲ್ಲ ಹೇಳಿ.
ದೀಪಗಳ ಹಬ್ಬದ ವೈಶಿಷ್ಟವೇ ಅಂಥಾದ್ದು.  ದೀಪ+ ವಳಿ= ದೀಪಾವಳಿ. ಎಲ್ಲಿ ಕತ್ತಲಿದೆಯೋ ಅಲ್ಲಿ ಬೆಳಕಿರಬೇಕು.  ಕತ್ತಲೆಂದರೆ ಅಜ್ಞಾನ ಕತ್ತಲೆಂದರೆ ಅಂಧಕಾರ.  ಕತ್ತಲೆಂದರೆ ಸೋಲು.  ಬೆಳಕು ಎಂದರೆ ಯಶಸ್ಸು.  ಕತ್ತಲೆಂದರೆ ಕಷ್ಟಗಳ ಸಂಕೋಲೆ ಬೆಳಕೆಂದರೆ ಬಿಡುಗಡೆ.  ಅಂದರೆ ನಮ್ಮ ಅಜ್ಞಾನವನ್ನು ಬೆಳಕಿನ ಮೂಲಕ ತೊಡೆದು ಹಾಕೋ ಹಬ್ಬವೇ ದೀಪಾವಳಿ.  ಈ ದೀಪಾವಳಿ ಅಮಾವಾಸ್ಯೆಗೂ ಇಲ್ಲಿ ಮಹತ್ವವಿದೆ.
ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆಯೂ ನಡೆಯುತ್ತದೆ.  ಲಕ್ಷ್ಮಿಯು ಕತ್ತಲನ್ನು ಕಳೆದು ಬೆಳಕು ತರುವ ಮಹಾ ತೆಜಸ್ವಿನಿ.  ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವುದೇ ಬದುಕು.  ಹೀಗಾಗಿ ದೀಪಾವಳಿಯಲ್ಲಿ ನಡೆಯುವ ಜ್ಯೋತಿ ಸ್ವರೂಪಿಣಿ ಲಕ್ಷ್ಮಿಯು ಪೂಜೆ ಭಯ ಭಕ್ತಿಯಿಂದ ಪೂಜೆ ಮಾಡುತ್ತಾರೆ.
ಹಬ್ಬದ ದಿನ ಬೆಳಗ್ಗೆ ಎದ್ದು ಮನೆಯಂಗಳದಲ್ಲಿ ಸಗಣಿ ಸಾರಿಸಿ,  ದೀಪಗಳ ಚಿತ್ರಗಳ ರಂಗೋಲಿ ಬಿಡಿಸಿ,  ಬಣ್ಣ ಮತ್ತು ಹೂವುಗಳಿಂದ ರಂಗೋಲಿಗೆ ಅಲಂಕಾರ ಮಾಡುತ್ತಾರೆ.  ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಮಾವಿನ  ತಳಿರು ತೋರಣಗಳು ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ.  ಹೊಸ ಬಟ್ಟೆ ತೊಟ್ಟು ಬಂಧು- ಮಿತ್ರರು ಮತ್ತು ಸ್ನೇಹಿತರಿಗೆ ದೀಪಾವಳಿಯ ಶುಭಾಷಯ ಹೇಳಿ, ಸ್ನೇಹಿತರೊಂದಿಗೆ ಪಟಾಕಿ ಧಾಂ, ಧೂಂ ಅಂತ ಹೊಡೆಯುತ್ತಾರೆ. ಮನೆಯಲ್ಲಿ ಪೂಜೆ ಪುನಸ್ಕಾರ ಮುಗಿಸಿ ಊಟ ಮಾಡುವ ಹೊತ್ತಿಗೆ ಮಧ್ಯಾಹ್ನ ಆಗುತ್ತದೆ.
ಪಟಾಕಿಯು ಧಾಂ, ಧೂಂ ಶಬ್ದ ಕಿವಿ ಕೇಳಿಸುವ ಪಟಾಕಿ ಹೊಡೆಯುವುದನ್ನು ನೋಡಿ ಚಿಕ್ಕ ಮಕ್ಕಳು ಎಂಜಾಯ್ ಮಾಡುತ್ತಾರೆ.  ಮನೆಯ ಮುಂದೆ ದೀಪ ಹಚ್ಚುತ್ತೇವೆ.  ಮನೆ ಮುಂದೆ ಬೆಳಕಿನ ದೀಪದ ಸೀರಿಯಲ್ ದೀಪದ ಸೆಟ್ ಬಿಡುತ್ತೇವೆ. ಬೆಳಕಿನ ದೀಪಗಳು ಮನೆ ಮುಂದೆ ಬಂದಿವೆ. ಕಷ್ಟದ ಕತ್ತಲನ್ನು ದೀಪದ ಜ್ಯೋತಿಯಿಂದ ದೂರವಾಗಿಸಿಕೊಂಡು ಹೊಸ ಬಾಳಿಗೆ ಹೊಸದೊಂದು ಮುನ್ನುಡಿ ಬರೆಯುವ ಪ್ರಯತ್ನವೇ ಈ ದೀಪಾವಳಿ.  ದೀಪ ಹಚ್ಚಿ ಮನೆ ಒಳ ಹೊರಗೆ ದೀಪ ಬೆಳಗಿಸಿ ಈ ದೀಪದ ಬೆಳಕು ಮುಂದಿನ ದೀಪಾವಳಿಯವರೆಗೂ ನಮ್ಮ ಬದುಕಿನ ದಾರಿ ತೋರಿಸಲಿ. ಜೀವನದಲ್ಲಿ ಏಳು ಬೀಳುಗಳು ಸಹಜ.
ಕಷ್ಟ ಸುಖಗಳು ಒಂದೇ ನಾಣ್ಯದ ಮುಖ ಬದಲಾಗುವವರೆಗೂ ಕಾಯುವವರಿಗೆ ಮಾತ್ರ ಸುಖದ ದರ್ಶನವಾಗುವುದು ಆ ತಾಳ್ಮೆ ನೆಮ್ಮದಿ ನಮ್ಮಲ್ಲಿರಬೇಕು. ಬನ್ನಿ ಎಲ್ಲರೂ ದೀಪ ಹಚ್ಚೋಣ.  ದೀಪಾವಳಿ ತಂದಿರುವ ಈ ದಿವ್ಯ ಜ್ಯೋತಿಯ ದೀಪದಲ್ಲಿ ನಮ್ಮ ಮನೆ ಅಂಗಳದಲ್ಲಿ ದೀಪಗಳನ್ನು ಹಚ್ಚಿ.  ಆ ದೀಪದ ಬೆಳಕಿನಲ್ಲಿ ನಾವು ಬದುಕಿನ ಭರವಸೆಗಳನ್ನು ಬೆಳೆಸಿಕೊಳ್ಳೋಣ. ದೀಪದ ಬೆಳಕಿನ ಹಬ್ಬ ಈ ದೀಪಾವಳಿ ಹಬ್ಬ.  ಸಡಗರ ಸಂಭ್ರಮದಿಂದ ಆಚರಿಸೋಣ.
 – ವಿ.ಎಂ.ಎಸ್.ಗೋಪಿ ✍
ಸಾಹಿತಿಗಳು,  ಬೆಂಗಳೂರು.
ವೀ ಕೇ ನ್ಯೂಸ್
";