Live Stream

[ytplayer id=’22727′]

| Latest Version 8.0.1 |

Business News

ಇ-ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಬಿಎಂಟಿಸಿಗೆ ಅತ್ಯಾಧುನಿಕ ಸ್ಟಾರ್‌ ಬಸ್ ಇವಿಗಳ ವಿತರಣೆ

ಇ-ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಬಿಎಂಟಿಸಿಗೆ ಅತ್ಯಾಧುನಿಕ ಸ್ಟಾರ್‌ ಬಸ್ ಇವಿಗಳ ವಿತರಣೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (TATA MOTORS) ಕಂಪನಿಯು ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ -bmtc)ಗೆ ಹೆಚ್ಚುವರಿಯಾಗಿ 148 ಅತ್ಯಾಧುನಿಕ ಟಾಟಾ ಸ್ಟಾರ್‌ ಬಸ್ (TATA ELECTRIC STAR BUS) ಎಲೆಕ್ಟ್ರಿಕ್ ಬಸ್‌ ಗಳ ವಿತರಣೆಯನ್ನು ಆರಂಭಿಸಿರುವುದಾಗಿ ಘೋಷಿಸಿದೆ.

ಈಗಾಗಲೇ ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಬೆಂಗಳೂರಿನ ಸುಸ್ಥಿರ ನಗರ ಸಂಚಾರ ವ್ಯವಸ್ಥೆಯನ್ನು ಬಲ ಪಡಿಸುವ ಉದ್ದೇಶದಿಂದ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಗಳು ಕಾರ್ಯಾರಂಭ ಮಾಡಲಿವೆ. ಈ ಎಲೆಕ್ಟ್ರಿಕ್ ಬಸ್‌ ಗಳ ಸಮೂಹವನ್ನು ಟಾಟಾ ಮೋಟಾರ್ಸ್‌ ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು 12 ವರ್ಷಗಳ ಒಪ್ಪಂದದಡಿಯಲ್ಲಿ ನಿರ್ವಹಣೆ ಮಾಡಲಿದೆ.

ಹೊಸ ಎಲೆಕ್ಟ್ರಿಕ್ ಬಸ್‌ ಗಳನ್ನು ಕರ್ನಾಟಕ ಸರ್ಕಾರದ ಗೌರವಾನ್ವಿತ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್. ಐಎಎಸ್ ಮತ್ತು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಕುರಿತು ಮಾತನಾಡಿದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್ಐಎಎಸ್ ಅವರು, “ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ಮೋಟಾರ್ಸ್‌ ನ ಎಲೆಕ್ಟ್ರಿಕ್ ಬಸ್‌ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿವೆ. ಸಾರ್ವಜನಿಕರಿಗೆ ಅನುಕೂಲಕರ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸಿವೆ. ಈ ಯಶಸ್ಸಿನ ಕಾರಣದಿಂದ ಟಾಟಾ ಮೋಟಾರ್ಸ್‌ ನಿಂದ ಹೆಚ್ಚುವರಿ 148 ಎಲೆಕ್ಟ್ರಿಕ್ ಬಸ್‌ ಗಳನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ. ಬೆಂಗಳೂರಿನಾದ್ಯಂತ ಇರುವ ನಮ್ಮ ನಾಗರಿಕರಿಗೆ ಸುರಕ್ಷಿತ, ಸುಸ್ಥಿರ ಮತ್ತು ಸಮರ್ಥ ಪ್ರಯಾಣ ಸೌಲಭ್ಯವನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಈ ಬಸ್‌ಗಳು ಮತ್ತಷ್ಟು ಹೆಚ್ಚಿಸಲಿವೆ” ಎಂದು ಹೇಳಿದರು.

ಟಾಟಾ ಮೋಟಾರ್ಸ್‌  ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಲಿಮಿಟೆಡ್ ಮತ್ತು ವಾಣಿಜ್ಯ ಪ್ರಯಾಣಿಕ ವಾಹನ ವ್ಯವಹಾರದ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಶ್ರೀ ಆನಂದ್ ಎಸ್ಅವರು, “ನಾವು ಬಿಎಂಟಿಸಿಗೆ ನಮ್ಮ ಪರಿಸರ ಸ್ನೇಹಿ ಮತ್ತು ಸಮರ್ಥ ಸ್ಟಾರ್‌ ಬಸ್ ಎಲೆಕ್ಟ್ರಿಕ್ ಬಸ್‌ ಗಳ ಮತ್ತೊಂದು ಗುಂಪಿನ ವಿತರಣೆಯನ್ನು ಆರಂಭಿರುವುದು ಒಂದು ಮಹತ್ವದ ಕ್ಷಣವಾಗಿದೆ. ನಮ್ಮ ಎಲೆಕ್ಟ್ರಿಕ್ ಬಸ್ ಗಳು ಎರಡು ವರ್ಷಗಳಿಂದ ಒಟ್ಟು ಆರು ಕೋಟಿ ಕಿಲೋಮೀಟರ್‌ಗಳಿಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಿವೆ. ನಮ್ಮ ಉತ್ಪನ್ನಗಳು ಮತ್ತು ಸಾಮರ್ಥ್ಯದ ಮೇಲೆ ಬಿಎಂಟಿಸಿ ತೋರಿಸಿರುವ ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಸುಸ್ಥಿರ ಸಾರ್ವಜನಿಕ ಸಾರಿಗೆ ಕಡೆಗೆ ಅವರು ಹೊಂದಿರುವ ಬದ್ಧತೆಗೆ ನೆರಲಾಗಲು ಅತ್ಯುತ್ತಮ ತಂತ್ರಜ್ಞಾನ, ಸೇವೆ ಮತ್ತು ಕಾರ್ಯನಿರ್ವಹಣೆಯಿಂದ ಕೂಡಿದ ವಿನೂತನ ಇ- ಸಾರಿಗೆ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಟಾಟಾ ಎಲೆಕೆಟ್ರಿಕ್ ಸ್ಟಾರ್‌ ಬಸ್ ಗಳನ್ನು ನಗರದೊಳಗಿನ ಸಾರಿಗೆ ವ್ಯವಸ್ಥೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇವುಗಳು ಉತ್ತಮ ದರ್ಜೆಯ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಈ ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್‌ ಗಳು ಹೊಸ-ಪೀಳಿಗೆಯ ಎಲೆಕ್ಟ್ರಿಕ್ ಪವರ್‌ಟ್ರೇನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಯನ್ನು ಹೊಂದಿವೆ. ಕಡಿಮೆ ಎತ್ತರದ ಮೆಟ್ಟಿಲು ಹೊಂದಿರುವ ಲೋ ಫ್ಲೋರ್ ವಿನ್ಯಾಸವನ್ನು ಹೊಂದಿರುವ ಈ ಬಸ್ ಗಳಲ್ಲಿ 35 ಪ್ರಯಾಣಿಕರು ಕೂರುವಷ್ಟು ಸೀಟ್ ಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ಶೂನ್ಯ ಟೈಲ್‌ಪೈಪ್ ಎಮಿಷನ್‌ ಹೊಂದಿರುವ ಈ ಸ್ಟಾರ್‌ ಬಸ್ ಇವಿಗಳು ಬೆಂಗಳೂರಿನಲ್ಲಿ ಶುದ್ಧವಾದ ಗಾಳಿ ದೊರಕಿಸುವ ವಿಚಾರದಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಟಾಟಾ ಮೋಟಾರ್ಸ್ ಮತ್ತು ಬಿಎಂಟಿಸಿ ಸಾರ್ವಜನಿಕ ಸಾರಿಗೆಯು ಭವಿಷ್ಯಕ್ಕೆ ಸಿದ್ಧವಾಗಿರುವುದರ ಜೊತೆಗೆ ನಾಗರಿಕರಿಗೆ ಹೆಚ್ಚು ಅನುಕೂರವಾಗಿರುವಂತೆ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";