ಮನುಷ್ಯರು ಒಂದು ಕ್ಷಣವೂ ಇರಲಾಗದ ನಿರ್ಜನ ಪ್ರದೇಶವಾದ ಅಂಟಾಕ್ರ್ಟಿಕಾದ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ಮೇಲ್ಮೈಯಿಂದ ಹೊರಹೊಮ್ಮುತ್ತಿರುವ ನಿಗೂಢ ರೇಡಿಯೋ ತರಂಗಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ,
ಮಂಜುಗಡ್ಡೆಯ ಆಳದಿಂದ ರೇಡಿಯೋ ಸಂಕೇತಗಳು ಹೊರಸೂಸುತ್ತಿವೆ, ಈ ತರಂಗಗಳು ಸಾವಿರಾರು ಕಿಲೋಮೀಟರ್ ಬಂಡೆಗಳ ಮೂಲಕ ಹಾದು ಹೋಗೇಕಾಗಿತ್ತು ಅದರೆ ಇವು ಬಂಡೆಗಳಲ್ಲಿ ಹೀರಲ್ಪಡುತ್ತಿವೆ, ಇದು ಭೌತಶಾಸ್ತ್ರದ ನಿಯಮದ ವಿರುದ್ಧವಾಗಿದೆ, ಭೂವಿಯನ್ನು ತಲುಪುವ ಸಂಕೇತಗಳನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ಈ ನಿಗೂಢ ರೇಡಿಯೋ ತರಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ,
ಸದ್ಯ ಈ ನಿಗೂಢ ರೇಡಿಯೋ ತರಂಗಗಳು ವಿಜ್ಞಾನದ ಎಲ್ಲಾ ಪ್ರಯೋಗಗಳಿಗೂ ವಿರುದ್ಧ ವಾಗಿರುವುದು ಸಂಶೋಧಕರಲ್ಲಿ ಕುತೂಹಲ ಹೆಚ್ಚಿಸಿದೆ, ಈ ಹಿನ್ನೆಲೆಯಲ್ಲಿ ಕೆಲ ಮಾದರಿಗಳನ್ನು ಸಂಗ್ರಹಿಸಿರುವ ಸಂಶೋಧಕರು ಈ ನಿಗೂಢತೆಯನ್ನು ಭೇದಿಸಲು ತಮ್ಮ ಪ್ರಯತ್ನಗಳನ್ನು ಆರಂಭಿಸಿದ್ದಾರೆ,
Veekay News > National News > ಅಂಟಾಕ್ರ್ಟಿಕಾ ಧ್ರುವ ಪ್ರದೇಶದಲ್ಲಿ ನಿಗೂಢ ರೇಡಿಯೋ ತರಂಗಗಳು ಪತ್ತೆ..!
ಅಂಟಾಕ್ರ್ಟಿಕಾ ಧ್ರುವ ಪ್ರದೇಶದಲ್ಲಿ ನಿಗೂಢ ರೇಡಿಯೋ ತರಂಗಗಳು ಪತ್ತೆ..!
ವೀ ಕೇ ನ್ಯೂಸ್16/06/2025
posted on
