ಬೆಂಗಳೂರು : ತಮೋಹ ಆರ್ಟ್ಸ್ ಫೌಂಡೇಶನ್ ಸಂಸ್ಥೆಯು ಒಂಭತ್ತನೇ ವಾರ್ಷಿಕೋತ್ಸವವು ರವೀಂದ್ರ ಕಲಾಕ್ಷೇತ್ರದಲ್ಲಿ ಆ.24ರಂದು ಅದ್ದೂರಿಯಾಗಿ ನೆರವೇರಿಸಿತು.
ನಾಲ್ಕು ವರ್ಷದಿಂದ ಐವತ್ತು ವರ್ಷದ ಒಳಗಿನ ಎಪ್ಪತ್ತಕ್ಕೂ ಹೆಚ್ಚು ಕಲಾವಿದರು “ದಶರೂಪ ವೈಭವಂ” ಎಂಬ ಭವ್ಯ ಭರತನಾಟ್ಯ ರೂಪಕವನ್ನು ಪ್ರದರ್ಶಿಸಿ, ರಸಿಕರನ್ನು ಮುದಗೊಳಿಸಿದರು.
ಕಾರ್ಯಕ್ರಮಕ್ಕೆ ಡಾ. ದರ್ಶಿನಿ ಮಂಜುನಾಥ್ (ನೃತ್ಯ ದಿಶಾ ಟ್ರಸ್ಟ್) ಹಾಗೂ ಶ್ರೀಮತಿ ಶಶಿಕಲಾ ವೆಂಕಟೇಶ್ (ನಾಟ್ಯಸುಧಾ ಅಕಾಡೆಮಿ) ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ನಿರ್ದೇಶಕಿ ವಿದುಷಿ ಗಾಯತ್ರಿ ಮಯ್ಯ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸ ಹಾಗೂ ಮೆಚ್ಚುಗೆ ಗಳಿಸಿದರು.