Live Stream

[ytplayer id=’22727′]

| Latest Version 8.0.1 |

National News

ಟ್ರಂಪ್ ಮಾತಿಗೆ ಬಗ್ಗಿದ ಕೋಕಾ-ಕೋಲಾ!

ಟ್ರಂಪ್ ಮಾತಿಗೆ ಬಗ್ಗಿದ ಕೋಕಾ-ಕೋಲಾ!

ವಾಷಿಂಗ್ಟನ್: ಜಾಗತಿಕವಾಗಿ ತಂಪು ಪಾನೀಯಕ್ಕೆ ಹೆಸರುವಾಸಿಯಾಗಿರುವ ಕೋಕಾ-ಕೋಲಾ ಈಗ ತನ್ನ ಉತ್ಪನ್ನಗಳಿಗೆ ಕೃತಕ ಸಕ್ಕರೆಯ ಬದಲು ನೈಜ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ, ತಮ್ಮ ಸಲಹೆಯ ಮೇರೆಗೆ ಕೋಕಾ-ಕೋಲಾ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದ್ದು, ಇದು ಒಳ್ಳೆಯ ನಡೆ ಎಂದು ಟ್ರಂಪ್ ಕಂಪನಿಯನ್ನು ಶ್ಲಾಘಿಸಿದ್ದಾರೆ,
ಟ್ರುತ್ ಸೋಷಿಯಲ್‍ನಲ್ಲಿ ಬರೆದಿರುವ ಟ್ರಂಪ್ ನಾನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೋಕ್ ಪಾನೀಯದಲ್ಲಿ ನಿಜವಾದ ಕಬ್ಬಿನ ಸಕ್ಕರೆಯನ್ನು ಬಳಸುವ ಬಗ್ಗೆ ಕೋಕಾ-ಕೋಲಾ ಕಂಪನಿ ಜೊತೆ ಮಾತನಾಡುತ್ತಿದ್ದೇನೆ, ನನ್ನ ಸಲಹೆಯನ್ನು ಕಂಪನಿ ಕೂಡಾ ಒಪ್ಪಿಕೊಂಡಿದೆ, ಕೋಕಾ-ಕೋಲಾದ ನಿರ್ಧಾರಕ್ಕೆ ನಾನು ಅದರ ಅಧಿಕಾರದಲ್ಲಿರುವ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ಇದು ಕಂಪನಿಯ ಒಂದು ಉತ್ತಮ ಕ್ರಮವಾಗಿದೆ, ಮುಂದೆ ಈ ಪಾನೀಯ ಇನ್ನು ಉತ್ತಮವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ,
ಕತೂಹಲಕಾರಿಯಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಕೋಕಾ-ಕೋಲಾ ಮೇಲಿನ ಒಲವು ಬಹಳಷ್ಟು ವರ್ಷಗಳ ಹಿಂದಿನಿಂದಲೂ ಇದೆ, ಈ ವರ್ಷ ಜನವರಿ 15 ರಂದು ಟ್ರಂಪ್ ತಮ್ಮ ಅಧಿಕಾರ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಡಯಟ್ ಕೋಕ್ ನ ಸಂಶೋಧನೆ ಶ್ಲಾಘಿಸಿದ್ದರು, ಇಬ್ಬರು ಕೋಕ್ ಮೇಲಿನ ಒಲವನ್ನು ವ್ಯಕ್ತಪಡಿಸಿದ್ದರು,
ಇಷ್ಟು ಮಾತ್ರವಲ್ಲದೇ ಮಸ್ಕ್ ಕೋಕಾ-ಕೋಲಾ ಸಿಇಒ ಜೇಮ್ಸ್ ಕ್ವಿನ್ಸಿ ಅವರೊಂದಿಗೆ ಟ್ರಂಪ್ ಅವರು ಇರುವ ಫೋಟೋವನ್ನು ಹಂಚಿಕೊಂಡಿದ್ದರು, ಅವರು ಟ್ರಂಪ್ ಅವರಿಗೆ ಸ್ಮರಣಾರ್ಥವಾಗಿ ಡಯಟ್ ಕೋಕ್ ನ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದರು,

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";