ಮೈಸೂರು: ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಭರ್ಜರಿ ಸಾಧನಾ ಸಮಾವೇಶ (Sadhana Samavesha) ನಡೆಯಲಿದೆ. ಈ ಸಮಾರಂಭವನ್ನು “ಶಕ್ತಿ ಪ್ರದರ್ಶನ” ಎನ್ನುವ ರೀತಿಯಲ್ಲಿ ಬಿಜೆಪಿ ಟೀಕಿಸುತಿದ್ದರೂ, ಸಿಎಂ ಸಿದ್ದರಾಮಯ್ಯ ಇದನ್ನು ತಿರಸ್ಕರಿಸಿದ್ದಾರೆ.
600 ಅಡಿ ಉದ್ದದ ವಿಶಿಷ್ಟ ರ್ಯಾಂಪ್ ಸ್ಟೇಜ್ ಮೂಲಕ ಸಿಎಂ ಜನರ ಮಧ್ಯದಿಂದ ವೇದಿಕೆಗೆ ಎಂಟ್ರಿ ಕೊಡಲಿದ್ದು, ಜನರತ್ತ ಕೈ ಬೀಸಿ ತಮ್ಮ ಸ್ತಾನವನ್ನು ಪಡೆದುಕೊಳ್ಳಲಿದ್ದಾರೆ. ಸಭಾಂಗಣದ ಪ್ರತಿಯೊಂದು ಕುರ್ಚಿಯಲ್ಲಿ ಸಿಎಂ ಭಾವಚಿತ್ರ ಅಳವಡಿಸಲಾಗಿದ್ದು, ಇದು ಅಭಿಮಾನಿಗಳ ಮನಸ್ಸು ಗೆಲ್ಲುವ ಪ್ರಯತ್ನವೆನ್ನಬಹುದು.
ಈ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಮತ್ತು ಸುರ್ಜೇವಾಲಾ ಉಪಸ್ಥಿತರಿರುವುದಾಗಿ ಪ್ರಕಟಿಸಲಾಗಿದ್ದರೂ, ವೇದಿಕೆಯಲ್ಲಿ ಅಥವಾ ಕುರ್ಚಿಗಳ ಮೇಲೆ ಅವರ ಫೋಟೋ ಕಾಣಿಸದಿರುವುದು ಗಮನ ಸೆಳೆಯುತ್ತಿದೆ.
ಪ್ರಮುಖ ಅಂಕಿಅಂಶಗಳು:
-
ಸಮಾವೇಶ ಬೆಳಗ್ಗೆ 11 ಗಂಟೆಗೆ ಪ್ರಾರಂಭ
-
ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ
-
ಮೈಸೂರು ನಗರ ವ್ಯಾಪ್ತಿಯಲ್ಲಿ ₹2,658 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
-
ಸ್ಥಳೀಯ ಫಲಾನುಭವಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಭಾರಿ ಸಭೆ.
-
ಸಿಎಂ ಸಿದ್ದರಾಮಯ್ಯ ತಮ್ಮ ಸಾಧನೆಗಳನ್ನ ಜನತೆಗೆ ತಲುಪಿಸಲು ಈ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಏನೆಲ್ಲ ಘೋಷಣೆಗಳು ಹೊರಬೀಳುತ್ತವೆ ಎಂಬ ನಿರೀಕ್ಷೆ ಮೈಸೂರಿನಲ್ಲಿ ಹೆಚ್ಚಾಗಿದೆ.