Live Stream

[ytplayer id=’22727′]

| Latest Version 8.0.1 |

Bengaluru Urban

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ಪಾತ್ರಧಾರಿಗಳು, ಸೂತ್ರಧಾರಿಗಳ ಬಂಧಿಸಿ- ಸಿ.ಕೆ.ರಾಮಮೂರ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ಪಾತ್ರಧಾರಿಗಳು, ಸೂತ್ರಧಾರಿಗಳ  ಬಂಧಿಸಿ- ಸಿ.ಕೆ.ರಾಮಮೂರ್ತಿ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವ ಪಾತ್ರಧಾರಿಗಳು, ಸೂತ್ರಧಾರಿಗಳನ್ನು ಕೂಡಲೇ ಬಂಧಿಸಿ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರು ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಶಾಸಕರು, ಅನೇಕ ಭಕ್ತಾದಿಗಳು, ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ. ಆನೇಕಲ್‍ನಿಂದ 400 ವಾಹನಗಳಲ್ಲಿ ತೆರಳುತ್ತಿದ್ದಾರೆ. ಸತೀಶ್ ರೆಡ್ಡಿಯವರು ಇವತ್ತು ತೆರಳಿದ್ದಾರೆ. ಸೋಮವಾರ ಬೆಳಿಗ್ಗೆ 6 ಗಂಟೆಗೆ ಜಯನಗರ, ಬಿಟಿಎಂ ಲೇ ಔಟ್ ನಿಂದ 200 ವಾಹನಗಳು ತೆರಳಲಿವೆ. 400 ಕಾರುಗಳಲ್ಲಿ 2 ಸಾವಿರ ಜನರು ಧರ್ಮಸ್ಥಳಕ್ಕೆ ತೆರಳುತ್ತೇವೆ ಎಂದು ಪ್ರಕಟಿಸಿದರು. ಆರೆಸ್ಸೆಸ್ ಮುಖಂಡರು, ಸಂಸದ ತೇಜಸ್ವಿ ಸೂರ್ಯ, ವಿಶ್ವ ಹಿಂದೂ ಪರಿಷತ್ ಮುಖಂಡರು ಈ ಯಾತ್ರೆಗೆ ಚಾಲನೆ ನೀಡುತ್ತಾರೆ ಎಂದರು.
ಮಧ್ಯಾಹ್ನ ಧರ್ಮಸ್ಥಳ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಲಿದ್ದೇವೆ. ಅರ್ಧ ಕಿಮೀ ಪಾದಯಾತ್ರೆ ನಡೆಸುತ್ತೇವೆ ಎಂದು ತಿಳಿಸಿದರು. ಹಿಂದೂಗಳ ವಿರುದ್ಧ ಧರ್ಮನಿಂದನೆ ನಡೆಯುತ್ತಿದೆ ಎಂದು ಅವರು ಆಕ್ಷೇಪಿಸಿದರು. ಈ ಅಪಪ್ರಚಾರದ ವಿರುದ್ಧ ನಮ್ಮ ಸಂಸದರು, ಶಾಸಕರು ಹೋರಾಟ ಮಾಡಲಿದ್ದೇವೆ ಎಂದು ವಿವರ ನೀಡಿದರು.
ಮುಖ್ಯಮಂತ್ರಿಗಳೂ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿದು ಪೂಜೆ ಮಾಡಿದವರು. ಸನಾತನ ಧರ್ಮ, ಹಿಂದೂ ಧರ್ಮಕ್ಕೆ ಬೆಲೆ ಕೊಡಬೇಕೆಂದರೆ ನೀವು ತೆರೆಯ ಮರೆಯಲ್ಲಿ ಯಾರ್ಯಾರು ಇದ್ದಾರೋ, ವಿದೇಶಿ ಹಣದ ಅಥವಾ ಒಂದು ಸಮುದಾಯದಿಂದ ಬರುತ್ತಿರುವ ಹಣದ ಕುರಿತು ತನಿಖೆ ಮಾಡಿಸಿ; ಬ್ಯಾಂಕ್ ಖಾತೆ ಚೆಕ್ ಮಾಡಿಸಬೇಕು ಎಂದು ತಿಳಿಸಿದರು.
ಹಿಂದೂ ಧರ್ಮಕ್ಕೆ ಧಕ್ಕೆ ಆಗಿದೆ. ಶ್ರೀ ಮಂಜುನಾಥನ ಭಕ್ತರಿಗೆ ನ್ಯಾಯ ಕೊಡಿಸಲು ನೀವು ಈ ಸಿನಿಮಾ ನಿರ್ಮಾಪಕರು, ನಿರ್ದೇಶಕರ ಬಗ್ಗೆ ಎಸ್‍ಐಟಿಯಿಂದ ತನಿಖೆ ನಡೆಸಬೇಕು. ಯೂ ಟ್ಯೂಬರ್‍ಗಳಿಗೆ ಹೋದ ಹಣದ ಕುರಿತು ನಮಗೆ ಮಾಹಿತಿ ಕೊಡಿಸಿ ಎಂದು ಒತ್ತಾಯಿಸಿದರು.
ಮುಸುಕುಧಾರಿ ಅಲಿಯಾಸ್ ಚಿನ್ನಯ್ಯ, ಚಿನ್ನಪ್ಪ, ಸುಜಾತಾ ಭಟ್ ಹೇಳಿಕೆ ನೀಡುತ್ತಿದ್ದಾರೆ. ಕೋರ್ಟಿನಲ್ಲೂ ವಿಚಾರಣೆ ನಡೆಯುತ್ತಿದೆ. ಸಮೀರ್, ಗಿರೀಶ್ ಮಟ್ಟೆಣ್ಣವರ, ಮಹೇಶ್ ತಿಮರೋಡಿ ವಿರುದ್ಧ ಕೇಸು ದಾಖಲಾಗಿದೆ. ಬಂಧಿತರು, ತನಿಖೆಗೆ ಒಳಪಡುತ್ತಿರುವವರು ಕೇವಲ ಪಾತ್ರಧಾರಿಗಳು. ಸರಕಾರವು ಈ ಘಟನೆಯ ಹಿಂದಿನ ನಿರ್ಮಾಪಕರು, ನಿರ್ದೇಶಕರನ್ನು ಎಸ್‍ಐಟಿ ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು.
ಧರ್ಮಸ್ಥಳದ ಹುಂಡಿಯಲ್ಲಿ ಲೆಕ್ಕ ಸಿಗುತ್ತಿಲ್ಲ; ಲೆಕ್ಕ ಕೊಡಿ ಎಂದು ದ್ವಾರಕಾನಾಥ್ ಅವರು ಹೇಳಿದ್ದಾರೆ. ನಗರ ನಕ್ಸಲೈಟ್‍ಗಳೆಲ್ಲರೂ ಕ್ರಿಮಿನಲ್‍ಗಳೇ; ಮುಖ್ಯಮಂತ್ರಿಗಳ ಬಿ ಟೀಂ ಎಸ್‍ಐಟಿ ರಚನೆಗೆ ಒತ್ತಾಯಿಸಿ ತಂಡ ರಚನೆಗೆ ಕಾರಣವಾಗಿತ್ತು. ಬುರುಡೆ ಬುರುಡೆ ಮನುಷ್ಯ, ಮುಸುಕುಧಾರಿಯು 2 ಲಕ್ಷ ನೀಡಿ ನನ್ನನ್ನು ಕಳಿಸಿದ್ದಾರೆ ಎಂದು ಹೇಳಿರುವುದರತ್ತ ಗಮನ ಸೆಳೆದರು.
ಅನನ್ಯಾ ಭಟ್ ಎಂಬುದೇ ಸುಳ್ಳು. ಆಸ್ತಿ ಕೇಳಲು ಹೀಗೆ ಮಾಡಿದ್ದಾಗಿ ಸುಜಾತಾ ಭಟ್ ಹೇಳಿದ್ದಾರೆ. ದೆಹಲಿಯಲ್ಲಿ ಕುಳಿತು ಒಂದು ಯೋಜನೆ ರೂಪಿಸಿದ್ದಾರೆ. ಬುರುಡೆ ಕಥೆ ಹೇಳಿದ್ದಾರೆ. ಒಂದು ಗುಂಡಿ ಅಗೆತದಿಂದ ಆರಂಭವಾಗಿ 15 ಗುಂಡಿ ಅಗೆದು ನಿಂತಿದೆ. ಈಗ ಆತ ನಿಜ ಒಪ್ಪಿಕೊಂಡಿದ್ದಾನೆ ಎಂದರು.
ಚಾರಿತ್ರ್ಯವಧೆ ಮಾಡುವವರಿಗೆ, ಜೆಸಿಬಿ ಮೂಲಕ ಧರ್ಮಸ್ಥಳ ಒಡೆಯುತ್ತೇವೆ ಎನ್ನುವವರಿಗೆ ಬೆಂಬಲ ನೀಡುವುದು ತಪ್ಪು ಎಂದು ಆಕ್ಷೇಪಿಸಿದರು. ಪುಲಕೇಶಿನಗರದಲ್ಲಿ ಒಂದು ಸಮುದಾಯದ ವಿರುದ್ಧ ವಾಟ್ಸಪ್ ಸ್ಟೇಟಸ್ ವಿರೋಧಿಸಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದರು. ದಲಿತ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ನೂರಾರು ಯೂ ಟ್ಯೂಬರ್‍ಗಳು ಧರ್ಮಸ್ಥಳದ ಅವಹೇಳನ ಮಾಡುತ್ತಿದ್ದರೂ ಸರಕಾರ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ; ಸರಕಾರ ಅವರನ್ನು ಸದೆ ಬಡಿಯದೇ ಇದ್ದರೆ ನೀವು ಅಂದರೆ ಕಾಂಗ್ರೆಸ್ ಸರಕಾರವೂ ಈ ವಿಚಾರದಲ್ಲಿ ಆರೋಪಿ ಎಂದು ಟೀಕಿಸಿದರು.
ಬಿಜೆಪಿಯಿಂದ ಧರ್ಮಕ್ಕಾಗಿ ಧರ್ಮಯುದ್ಧ ನಡೆದಿದೆ. ನೀವು ದಕ್ಷಿಣ ಕನ್ನಡದಲ್ಲಿ ಹಿಂದೂ ಧರ್ಮದ ಕಾರ್ಯಕರ್ತರು, ಶಾಸಕರ ವಿರುದ್ಧ ಎಫ್‍ಐಆರ್ ಹಾಕಿಸಿದ್ದೀರಿ. ರಾತ್ರಿ ಮನೆಗೆ ನುಗ್ಗಿಸಿದ್ದೀರಿ. ಹಲವರಿಗೆ ಗಡೀಪಾರು ಮಾಡಿಸಲು ಹೊರಟಿದ್ದೀರಿ. ಇಲ್ಲಿ ಅಪಪ್ರಚಾರ ಮಾಡಿದವರಿಗೆ ಏನು ಶಿಕ್ಷೆ ಕೊಡುತ್ತೀರಿ ಎಂದು ಕೇಳಿದರು.
25 ದಿನಗಳಿಂದ ನಾಟಕ ನಡೆಸುತ್ತಿದ್ದಾರೆ. ಚಿನ್ನಯ್ಯ, ಸಮೀರ್, ಮಟ್ಟೆಣ್ಣವರ, ಮಹೇಶ್ ತಿಮರೋಡಿ ಕೇವಲ ಪಾತ್ರಧಾರರು. ಸೂತ್ರಧಾರರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಮಾಜಿ ಉಪ ಮಹಾಪೌರ ಹೆಚ್. ರವೀಂದ್ರ , ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";