Live Stream

[ytplayer id=’22727′]

| Latest Version 8.0.1 |

National News

ಬಿಹಾರಿ ನೆಲದಲ್ಲಿ ಪ್ರಲ್ಹಾದ ಜೋಶಿ ಭರ್ಜರಿ ರ್ಯಾಲಿ; ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿ

ಬಿಹಾರಿ ನೆಲದಲ್ಲಿ ಪ್ರಲ್ಹಾದ ಜೋಶಿ ಭರ್ಜರಿ ರ್ಯಾಲಿ; ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ (Bihar Elections) ರಂಗೇರುತ್ತಿದ್ದು, ಬಿಜೆಪಿಯ (BJP Leaders) ಧೀಮಂತ ನಾಯಕರು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಇಂದು ಸೀತಾಮರ್ಹಿಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೇರಿ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್‌ ರ್ಯಾಲಿ (Big Rally) ನಡೆಸಿದ್ದಾರೆ.

ಬಿಹಾರ ಸಿಎಂ ನಿತೀಶ್‌ ಕುಮಾರ್‌, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ, ಉತ್ತಾರಖಂಡ ಮತ್ತು ಗೋವಾ ಮುಖ್ಯಮಂತ್ರಿಗಳೊಡಗೂಡಿ ಬಿಹಾರದ ವಿವಿಧ ಕ್ಷೇತ್ರಗಳಲ್ಲಿ ಬಹಿರಂಗ ಸಭೆ ನಡೆಸಿ ಎನ್‌ಡಿಎ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಲ್ಲದೆ, ಸ್ಥಳೀಯ ಮುಖಂಡರುಗಳ ಜತೆ ಮಹತ್ವದ ಸಭೆ ಸಹ ನಡೆಸಿದ್ದಾರೆ.

ಬಿಹಾರ ಕದನ ಜೋಶ್‌: ಬಿಹಾರದಲ್ಲಿ ರಾಜಕೀಯ ಕದನ ಜೋರಾಗಿ ನಡೆಯುತ್ತಿದೆ. ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಬಿಜೆಪಿ ಪ್ರಚಾರ ಸಭೆ, ನಾಮಪತ್ರ ಸಲ್ಲಿಕೆ, ಸಾರ್ವಜನಿಕ ಸಭೆ ಜೋಶ್‌ ಪಡೆದಿತ್ತು. ಜೋಶಿ ಅವರು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೇರಿ ಮಹತ್ವದ ಸಭೆಗಳನ್ನು ನಡೆಸಿ ಚುನಾವಣಾ ಗೆಲುವಿಗೆ ರಣತಂತ್ರ ಹೆಣೆದಿದ್ದು, ಎನ್‌ಡಿಎ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸಿಗೆ ಕಾರಣವಾಗಿದೆ.

ಸೀತಾಮರ್ಹಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ರ್ಯಾಲಿ ನಡೆಸಿದ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರಲ್ಲದೆ, ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳಿಗೆ ಸಾಥ್‌ ನೀಡಿದರು. ಬಿಹಾರದ ನೆಲದಲ್ಲಿ ನಿಂತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಘರ್ಜಿಸಿದರು.

ಬಿಹಾರ ಚುನಾವಣೆ ಎದುರಿಸಲು ಬಿಜೆಪಿ ಸೈನ್ಯ ಸನ್ನದ್ಧವಾಗಿದೆ. ಎನ್‌ಡಿಎ ಐತಿಹಾಸಿಕ ಜನಾದೇಶ ಪಡೆದು ಮತ್ತೆ ಸರ್ಕಾರ ರಚಿಸಲಿದೆ. NDA ಆಡಳಿತಾವಧಿಯಲ್ಲಿ ಬಿಹಾರ ಅಭಿವೃದ್ಧಿಯ ಹಾದಿಯಲ್ಲಿದೆ. ಜನರು ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದು, ಮತ್ತೆ ಗೆಲುವಿನ ಘೋಷ ಪ್ರತಿಧ್ವನಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 20 ವರ್ಷಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯವನ್ನು ಜಂಗಲ್ ರಾಜ್‌ನಿಂದ ಮುಕ್ತಗೊಳಿಸಿದ್ದಾರೆ. ಹಾಗಾಗಿ ಈ ವಿಧಾನಸಭೆ ಚುನಾವಣೆಯಲ್ಲಿ ಸಹ ಎನ್‌ಡಿಎ ಐತಿಹಾಸಿಕ ಜನಾದೇಶದೊಂದಿಗೆ ಮತ್ತೆ ಸರ್ಕಾರ ರಚಿಸಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ವೀ ಕೇ ನ್ಯೂಸ್
";