ಮೂಸೂರು: ಎರಡನೇ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಭಕ್ತಸಾಗರ ಹರಿದು ಬಂದಿದ್ದು ಬೆಳ್ಳಂಬೆಳಗ್ಗೆಯೇ ಲಕ್ಷಾಂತರ ಮಂದಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು, ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳು ಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡಿಯನ್ನು ಕಣ್ತುಂಬಿಕೊಂಡಿದ್ದಾರೆ,
ಚಾಮುಂಡಿ ಬೆಟ್ಟಕ್ಕೆ ಗುರುವಾರ ಮಧ್ಯಾಹ್ನದಿಂದಲೇ ಮೂರು ದಿನಗಳ ಕಾಲ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಆಷಾಢ ಶುಕ್ರಮವಾರದಂದು ಎಲ್ಲಾ ಭಕ್ತಾಧಿಗಳಿಗೆ ಉಚಿತ ಸಾರಿಗೆ ಬಸ್ ವ್ಯವಸ್ಧೆ ಕಲ್ಪಿಸಲಾಗಿತ್ತು, ಕಳೆದ ವಾರ ಮೆಟ್ಟಿಲುಗಳು ಮೂಲಕವೇ 60 ರಿಂದ 70 ಸಾವಿರ ಜನರು ಒಮ್ಮೆಲೆ ಬಂದ ಕಾರಣ ಸಾಕಷ್ಟು ಗೊಂದಲಗಳಾಗಿತ್ತು, ಈ ಹಿನ್ನೆಲೆಯಲ್ಲಿ ಮೆಟ್ಟಿಲು ಮೂಲಕ ಬೆಟ್ಟ ಹತ್ತಿ ಬಂದರೆ ನೇರ ದರ್ಶನ ವ್ಯವಸ್ಧೆ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ,
Veekay News > State News > ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡದೇವತೆ ಚಾಮುಂಡಿ
ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡದೇವತೆ ಚಾಮುಂಡಿ
ವೀ ಕೇ ನ್ಯೂಸ್04/07/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply