ಮಧ್ಯ ಕಿವಿಯ ಸೋಂಕು, ಅಥವಾ ಕಿವಿಯ ಉರಿಯೂತ ಉಂಟು ಮಾಡುವ ಓಟೈಟಿಸ್ ಮೀಡಿಯಾ ತೊಂದರೆಯು, ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಮತ್ತು ಸಕ್ರಿಯ ಆರೋಗ್ಯ ಸಮಸ್ಯೆಯಾಗಿದೆ. ಈ ಸ್ಥಿತಿಯನ್ನು ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಆದರೆ ನಿರ್ಲಕ್ಷಿಸಿದರೆ, ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿ ಬೆಳೆಯಬಹುದು. ಇದು ರೋಗದ ಹೆಚ್ಚು ಹಾನಿಕಾರಕ ರೂಪವಾಗಿದೆ. ಎಚ್ಚರಿಕೆಯಿಂದ ನಿಭಾಯಿಸದಿದ್ದರೆ, ದೀರ್ಘಕಾಲದ ಓಟೈಟಿಸ್ ಮೀಡಿಯಾ ತೊಂದರೆಯು ಶ್ರವಣ ಸಮಸ್ಯೆ ಜೊತೆಗೆ, ದೀರ್ಘಕಾಲದ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು. ಈ ಸ್ಥಿತಿಯು ಮಧ್ಯ ಕಿವಿಯ ಉರಿಯೂತವನ್ನು ಸೂಚಿಸುತ್ತದೆ, ಇದು 3 ತಿಂಗಳುಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು, ಮತ್ತು ಸತತವಾಗಿ ಕಿವಿ ಸೋರುವ ಎಂದರೆ ಓಟೋರಿಯಾಗೆ ಕಾರಣವಾಗಬಹುದು ಅಲ್ಲದೇ ಮತ್ತು ಈ ಸೋರುವ ರಸ ಅನೇಕ ಬಣ್ಣಗಳಲ್ಲಿ (ಬಿಳಿ, ಹಳದಿ, ಹಸಿರು ಮತ್ತು ಕಂದು) ಇರಬಹುದು. ರಕ್ತಸಿಕ್ತ, ನೀರಿನ ಅಥವಾ ಕೀವು-ರೀತಿಯ ಗಟ್ಟಿಯಾದ ದ್ರವವಾಗಿರಬಹುದು. ಓಟೋರಿಯಾವು ಬ್ಯಾಕ್ಟೀರಿಯಾ, ವೈರಸ್ ಅಥವಾ ಶಿಲೀಂಧ್ರಗಳ ಸೋಂಕುಗಳು, ಕಿವಿಯ ತಮಟೆ (ಡ್ರಮ್) ಒಡೆಯುವುದು ಮತ್ತಿತರ ಪರಿಸ್ಥಿತಿಗಳಿಗೆ ದಾರಿ ಮಾಡಿಕೊಡಬಹುದು.
ತೀವ್ರವಾದ ಓಟೈಟಿಸ್ ಮೀಡಿಯಾ ತೊಂದರೆ ಮತ್ತು ದೀರ್ಘಕಾಲದ ಓಟೈಟಿಸ್ ಮೀಡಿಯಾ ತೊಂದರೆಗಳನ್ನು ಹೋಲಿಸಿದಾಗ, ಮೊದಲನೆಯದು ಅತ್ಯಂತ ನೋವಿನಿಂದ ಕೂಡಿರುತ್ತದಲ್ಲದೇ ತಾತ್ಕಾಲಿಕವಾಗಿರುತ್ತದೆ. ಕಡಿಮೆ ತೀವ್ರವಾದ ನೋವು ಇದ್ದರೂ, ಎರಡನೆಯದು ಕಿವಿಯ ರಚನೆಯಲ್ಲಿನ ಹಲವಾರು ಹಾನಿಗಳಿಗೆ ದಾರಿ ಮಾಡಿಕೊಡುತ್ತದೆ. ಇವುಗಳಲ್ಲಿ ಕಿವಿಯ ತಮಟೆ ಹರಿದ ಅನೇಕ ಪ್ರಕರಣಗಳೂ ಇವೆಯಲ್ಲದೇ ಕಾಲ ಕ್ರಮೇಣ ಶ್ರವಣ ದೋಷ ಹೆಚ್ಚಾಗುತ್ತದೆ.
ಓಟೈಟಿಸ್ ಮೀಡಿಯಾದ ಬೆಳವಣಿಗೆಗೆ ಕೊಡುಗೆ ನೀಡುವ ಅನೇಕ ಅಂಶಗಳಿವೆ. ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ತಪ್ಪಿಸುವುದು ಅಥವಾ ಅನುಚಿತ ಚಿಕಿತ್ಸಾ ಕ್ರಮ ಅನುಸರಿಸುವುದÀರಿಂದ ಮುಖ್ಯವಾಗಿ ಈ ಕಾಣಿಸಿಕೊಳ್ಳುತ್ತದೆ. ಕಿವಿಯಲ್ಲಿ ಸತತ ಸೋಂಕುಗಳು ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಕಿವಿಯ ಮೂಲಕ ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಶಿಲೀಂಧ್ರಗಳು ದೇಹಕ್ಕೆ ತಡೆರಹಿತವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಯೂಸ್ಟಾಚಿಯನ್ ಕೊಳವೆಯ ಕಾರ್ಯಲೋಪ ಕೂಡ ನಿರ್ಣಾಯಕ ಪಾತ್ರ ಹೊಂದಿರುತ್ತದೆ. ಮಧ್ಯದ ಕಿವಿ ಮತ್ತು ಗಂಟಲಿನ ಹಿಂಭಾಗದ ನಡುವೆ ಸಂಪರ್ಕ ಕಲ್ಪಿಸುವ ಯುಸ್ಟಾಚಿಯನ್ ಕೊಳವೆಗಳು ಸಾಮಾನ್ಯ ರೀತಿಯಲ್ಲಿ ಕೆಲಸಮಾಡದಿದ್ದಾಗ ಈ ರೋಗವು ಉಂಟಾಗುತ್ತದೆ. ಈ ಕೊಳವೆಯು ಒತ್ತಡವನ್ನು ಸಮತೋಲನಗೊಳಿಸಲು ಮತ್ತು ಮಧ್ಯದ ಕಿವಿಯಿಂದ ದ್ರವವನ್ನು ಹರಿಸಲು ನೆರವಾಗುತ್ತದೆ. ಅಲರ್ಜಿಗಳು, ದೀರ್ಘಕಾಲದ ಸೈನಸ್ ಸಮಸ್ಯೆಗಳು, ಅಥವಾ ಅಂಗರಚನೆಯಲ್ಲಿನ ಅಸಾಧಾರಣ ವೈಪರೀತ್ಯಗಳ ಕಾರಣದಿಂದಾಗಿ ಕೊಳವೆ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ಅಂದರೆ ದೇಹದ ಭಾಗಗಳ ನೈಜಗಾತ್ರ ಅಥವಾ ರಚನೆಯಿಂದ ವ್ಯತ್ಯಾಸಗಳು ಇದ್ದಲ್ಲಿ, ಹೆಚ್ಚಿನ ದ್ರವ ಸ್ರಾವ ಮತ್ತು ಶೇಖರಣೆಯ ಅವಕಾಶವಿರುತ್ತದೆ. ಇದು ಬ್ಯಾಕ್ಟೀರಿಯಾ ಬಹಳವಾಗಿ ಬೆಳೆಯಲು ಅಗತ್ಯ ಪರಿಸರವನ್ನು ಉಂಟುಮಾಡುತ್ತದೆ.
ಉಸಿರಾಟ ವ್ಯವಸ್ಥೆಯ ಮೇಲ್ಭಾಗದ ಸೋಂಕುಗಳು, ಪರಿಸರದ ಅಲರ್ಜಿಗಳು, ಅಲರ್ಜಿಯಿಂದ ಮೂಗು ಸೋರುವುದು, ನಿರಂತರವಾಗಿ ಹೊಗೆ ತುಂಬಿದ ವಾತಾವರಣದಲ್ಲಿರುವುದು, ಕಳಪೆ ಗುಣಮಟ್ಟದ ಗಾಳಿಗೆ ಮೈ ಒಡ್ಡಿಕೊಳ್ಳುವುದು ಮತ್ತು ರೋಗನಿರೋಧಕ ವ್ಯವಸ್ಥೆಯ ಸಮಸ್ಯೆಗಳು ಮುಂತಾದವು ಇತರ ಅಪಾಯಗಳಲ್ಲಿ ಸೇರಿವೆ. ಮಕ್ಕಳು, ಅದರಲ್ಲೂ ವಿಶೇಷವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಪೂರ್ಣ ಬೆಳವಣಿಗೆಯಾಗದ ಯುಸ್ಟಾಚಿಯನ್ ಕೊಳವೆಗಳು ಮತ್ತು ಪ್ರಬುದ್ಧವಾಗಿರದ ರೋಗ ನಿರೋಧಕ ವ್ಯವಸ್ಥೆಗಳ ಕಾರಣದಿಂದಾಗಿ ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಶ್ರವಣ ನಷ್ಟವು ಈ ರೋಗದ ಪ್ರಮುಖ ಪರಿಣಾಮವಾಗಿರುತ್ತದೆ. ಇದಕ್ಕೆ ಮುಖ್ಯವಾಗಿ ಮಧ್ಯ ಕಿವಿಯ ಮೂಳೆಗಳಿಗೆ ಉಂಟಾಗುವ ಹಾನಿ ಇದಕ್ಕೆ ಕಾರಣ. ಈ ದೌರ್ಬಲ್ಯವು ಮಾತು ಅಲ್ಲದೇ ಭಾಷೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಮಾಜಿಕ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.
ಉಂಟಾಗಿರುವ ಹಾನಿ ಮತ್ತು ದ್ರವದ ಪ್ರಮಾಣಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಓಟೋಸ್ಕೋಪಿಕ್ ಪರೀಕ್ಷೆಯ ಅಗತ್ಯವಿರುತ್ತದೆ. ದೀರ್ಘಕಾಲದ ಓಟೈಟಿಸ್ ಮೀಡಿಯಾ ತೊಂದರೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಅಥವಾ ನಿಭಾಯಿಸಲು ಇತರ ಅನೇಕ ಚಿಕಿತ್ಸಾ ವಿಧಾನಗಳು ಕೂಡ ಅಗತ್ಯವಿರುತ್ತವೆ. ನಿರಂತರ ಬ್ಯಾಕ್ಟೀರಿಯಾದ ಸೋಂಕಿನ ಸಂದರ್ಭದಲ್ಲಿ, ದೀರ್ಘಕಾಲದ ಪ್ರತಿಜೀವಕ(ಆ್ಯಂಟಿಬಯಾಟಿಕ್) ಚಿಕಿತ್ಸೆಯ ಅಗತ್ಯವಿರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಕಿವಿಯ ತಮಟೆ ಹರಿದಿರುವುದನ್ನು ಸರಿಪಡಿಸುವ ಟಿಂಪಾನೋಪ್ಲಾಸ್ಟಿ ಮತ್ತು ಕಿವಿಯೊಳಗಿನ ಮಾಸ್ಟಾಯ್ಡ್ ಮೂಳೆಯಲ್ಲಿನ ಹಾನಿಗೊಳಗಾದ ಅಂಗಾAಶಗಳನ್ನು ಸರಿಪಡಿಸುವ ಮಾಸ್ಟೊಯ್‌ಡೆಕ್ಟಮಿಯಂತಹ ಶಸ್ತ್ರಚಿಕಿತ್ಸಾ ಕ್ರಮಗಳ ಅಗತ್ಯವಿರುತ್ತದೆ. ಹೆಚ್ಚುವರಿಯಾಗಿ, ಧೂಮಪಾನದ ಅಭ್ಯಾಸ ಅಥವಾ ಹೊಗೆ ತುಂಬಿರುವ ಅಥವಾ ಯಾವುದೇ ರೀತಿಯ ನೈರ್ಮಲ್ಯರಹಿತ ವಾತಾವರಣದಿಂದ ದೂರವಿರುವುದಕ್ಕೆ ಪ್ರಯತ್ನಿಸಿರಿ.
ವಕ್ತಾರರು: ಡಾ. ಪಿ. ಹರಿಹರ ಮೂರ್ತಿ, ಎಂಬಿಬಿಎಸ್, ಎಂಎಸ್-ಇಎನ್‌ಟಿ/ಒಟೋರಿನೋಲರಿAಗೋಲಜಿ, ಅಪೊಲೊ ಸ್ಪೆಕ್ಟ್ರ ಹಾಸ್ಪಿಟಲ್, ಬೆಂಗಳೂರು.