Live Stream

[ytplayer id=’22727′]

| Latest Version 8.0.1 |

State News

ಪೀಣ್ಯದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹೋಟೆಲ್‌ಗೆ ಡಿಕ್ಕಿ – ಐವರು ಗಾಯ, ಮಗು ಗಂಭೀರ

ಪೀಣ್ಯದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹೋಟೆಲ್‌ಗೆ ಡಿಕ್ಕಿ – ಐವರು ಗಾಯ, ಮಗು ಗಂಭೀರ
ಬೆಂಗಳೂರು: ಪೀಣ್ಯ 2ನೇ ಹಂತದಲ್ಲಿ ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಒಂದು ನಿಯಂತ್ರಣ ತಪ್ಪಿ ಹೋಟೆಲ್‌ಗೆ ಡಿಕ್ಕಿಯಾದ ಪರಿಣಾಮ ಐವರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡಿರುವ ಮಕ್ಕಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಬಸ್ ಚಾಲಕ ಮತ್ತು ಕಂಡಕ್ಟರ್ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಕಂಡಕ್ಟರ್ ರಮೇಶ್ ಬಸ್ ಚಲಾಯಿಸಿದ್ದ. ಇದರಿಂದಾಗಿ ಬಸ್ ಫುಟ್‍ಪಾತ್ ಏರಿ ಹೋಟೆಲ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ತಕ್ಷಣ ಹೋಟೆಲ್‌ನ ಸಿಲಿಂಡರ್‌ನಿಂದ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾಯಿತು. ಆದರೆ ಸ್ಥಳೀಯರು ಸಮಯದಲ್ಲಿ ಪ್ರತಿಕ್ರಿಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು
ವೀ ಕೇ ನ್ಯೂಸ್
";