ಫೀಡಂ ಪಾರ್ಕ್ ಅವರಣದಲ್ಲಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷ್ಮಿಣ, ಪೂರ್ವ, ಪಶ್ಚಿಮ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮತಗಳ್ಳರೇ ಅಧಿಕಾರ ಬಿಡಿ ಚುನಾವಣಾ ಅಕ್ರಮಗಳಿಗೆ ಕಾರಣರಾಗಿರುವ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನೀತಿಗಳ ವಿರುದ್ದ ಕ್ಯಾಂಡಲ್ ಲೈಟ್ ಪ್ರತಿಭಟನೆ.
ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರು, ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಸದಸ್ಯರಾದ ಸಲೀಮ್ ಅಹಮದ್, ಅಖಿಲ ಭಾರತ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಮುಖಂಡ ಮನ್ಸೂರ್ ಅಲಿಖಾನ್ ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ ಮತ್ತು ಎಂ.ಇ.ಐ.ಸಂಸ್ಥೆ ಅಧ್ಯಕ್ಷರಾದ ಎಸ್.ಮನೋಹರ್
ಜಿಲ್ಲಾಧ್ಯಕ್ಷರುಗಳಾದ ಅಬ್ದುಲ್ ವಾಜಿದ್, ಹನುಮತರಾಯಪ್ಪ, ಗೌತಮ್, ನಂದಕುಮಾರ್, ಮಂಜುನಾಥ್ ರವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿ.ಕೆ.ಹರಿಪ್ರಸಾದ್ ರವರು ಮಾತನಾಡಿ ಮಹದೇವಪುರ 1ಲಕ್ಷ ಮತಗಳ್ಳತನವಾಗಿದೆ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ರಾಹುಲ್ ಗಾಂಧಿ ಇದರ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಈ ಪ್ರಕರಣವನ್ನು ವಿಶ್ವದ ಗಮನ ಸೆಳದಿದೆ ಎಂದು ಹೇಳಿದರು.
ಜಿ.ಸಿ.ಚಂದ್ರಶೇಖರ್ ರವರು ಮಾತನಾಡಿ ಮತಗಳ್ಳತನ ವಿರುದ್ದ ರಾಹುಲ್ ಗಾಂಧಿ ಹೋರಾಟ ವಿಶ್ವವೆ ತಲ್ಲಣಗೊಂಡಿದೆ. ಡಾ||ಬಿ.ಆರ್.ಅಂಬೇಡ್ಕರ್ ರವರು ಬರೆದಿರುವ ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಚುನಾವಣೆ ಆಯೋಗ ಶಾಮೀಲಾಗಿ ಮತಗಳ್ಳತನ ಮಾಡಿದ್ದಾರೆ. ಮತಗಳ್ಳತನ ದೇಶ,ರಾಜ್ಯ, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು. ಕೇಂದ್ರ ಬಿಜೆಪಿ ಸರ್ಕಾರ ಅನೈತಿಕ ಕೇಂದ್ರ ಸರ್ಕಾರವಾಗಿದೆ ಎಂದು ಹೇಳಿದರು.
ಸಲೀಮ್ ಅಹಮದ್ ರವರು ಮಾತನಾಡಿ ಮತಗಳ್ಳತನ ವಿರುದ್ದ ರಾಹುಲ್ ಗಾಂಧಿ ರವರು ಚುನಾವಣೆ ಆಯೋಗ ಮತ್ತು ಕೇಂದ್ರ ಸರ್ಕಾರ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ. ಜನರ ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸೌಮ್ಯ ರೆಡ್ಡಿರವರು ಮಾತನಾಡಿ ನಮ್ಮ ಪ್ರಜಾಪ್ರಭುತ್ವ ನಾವು ಹೋರಾಟ ಮಾಡುವ ಹಕ್ಕು, ರಾಹುಲ್ ಗಾಂಧಿ ಒಂದು ದೇಶ, ಒಂದು ಮತ ಎಂದು ಹೋರಾಟ ಮಾಡುತ್ತಿದ್ದಾರೆ. ಚುನಾವಣೆ ಆಯೋಗ, ಕೇಂದ್ರ ಸರ್ಕಾರ ಮತಗಳನ್ನು ಕಳ್ಳತನ ಮಾಡುತ್ತಿದ್ದಾರೆ. ನಮಗೆ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬಿ.ವಿ.ಶ್ರೀನಿವಾಸ್ ರವರು ಮಾತನಾಡಿ ಬಿಜೆಪಿ ಕೇಂದ್ರ ಸರ್ಕಾರ ಮತಗಳ್ಳತನ ಮಾಡಿ ಮೂರು ಅಧಿಕಾರಕ್ಕೆ ಬಂದಿದ್ದಾರೆ. ಇದರ ವಿರುದ್ದ ರಾಹುಲ್ ಗಾಂಧಿರವರು ಸಾಕ್ಷ್ಮಿ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ನಿರುದ್ಯೋಗ, ಭ್ರಷ್ಟಚಾರ ಕುರಿತು ಕೇಳಿದರು, ಬೇರೆಯವರ ಮೇಲೆ ಸುಳ್ಳು ಅರೋಪ ಮಾಡುತ್ತಾರೆ. ಕೇಂದ್ರ ಸರ್ಕಾರ, ಚುನಾವಣೆ ಆಯೋಗದ ವಿರುದ್ದ ದೇಶ್ಯಾದ್ಯಂತ ಯುವಕರನ್ನು ಸಂಘಟಿಸಲಾಗುವುದು ಎಂದು ಹೇಳಿದರು.