ಬೆಂಗಳೂರು: ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳು ನೀಡುತ್ತಿದ್ದ ಬೈಕ್ ಟ್ಯಾಕ್ಸಿ ಸೇವೆ ಇದೇ ಜೂನ್ 16ರ ಸೋಮವಾರದಿಂದ ಸಂಪೂರ್ಣವಾಗಿ ನಿಷೇಧಗೊಳ್ಳಲಿದೆ. ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠವು ಈಗಾಗಲೇ ಏಕಸದಸ್ಯ ಪೀಠದಿಂದ ನೀಡಲಾದ ಬೈಕ್ ಟ್ಯಾಕ್ಸಿ ನಿಷೇಧದ ಆದೇಶವನ್ನು ಎತ್ತಿಹಿಡಿದಿದ್ದು, ಟ್ಯಾಕ್ಸಿ ಒಟ್ಟುಗೂಡಿಸುವ ಕಂಪನಿಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಹೈಕೋರ್ಟ್ನ ಏಕಸದಸ್ಯ ಪೀಠವು ಏಪ್ರಿಲ್ 2, 2025ರಂದು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸುವುದರ ಬಗ್ಗೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ತಡೆಯಾಜ್ಞೆ ಕೋರಿ ಓಲಾ, ಉಬರ್, ಮತ್ತು ರ‍್ಯಾಪಿಡೋ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ್ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ತಡೆಯಾಜ್ಞೆ ನೀಡಲು ನಿರಾಕರಿಸಿದ ಕೋರ್ಟ್, ಜೂನ್ 20ರೊಳಗೆ ಟ್ಯಾಕ್ಸಿ ಅಗ್ರಿಗೇಟರ್‌ಗಳಿಂದ ಉತ್ತರ ಸಲ್ಲಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜೂ. 24ಕ್ಕೆ ಮುಂದೂಡಿರುವುದಾಗಿ ತಿಳಿದುಬಂದಿದೆ.
ಬೈಕ್ ಟ್ಯಾಕ್ಸಿ ಸೇವೆಗೆ ಸಂಬ0ಧಿಸಿದ ಸ್ಪಷ್ಟ ಕಾನೂನು ಆಗಲೀ, ನೀತಿಯಾಗಲೀ ರೂಪಿಸದಿರುವುದೇ ಈ ನಿಷೇಧಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಸರ್ಕಾರ ಸೂಕ್ತ ನಿಯಮಾವಳಿ ಜಾರಿಗೊಳಿಸುವವರೆಗೆ ಬೈಕ್ ಟ್ಯಾಕ್ಸಿ ಸೇವೆಯ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ. ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಸುರಕ್ಷತೆ ಒದಗಿಸುವುದು ಸವಾಲಿನ ಕೆಲಸವಾಗಿದೆ ಎಂದು ಕೋರ್ಟ್ ಗಮನಿಸಿದ್ದು, ಮಹಾ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯು ಸಾರ್ವಜನಿಕರಿಂದ ಉತ್ತೇಜನಕಾರಿಯಾಗಿತ್ತು. ಕಡಿಮೆ ವೆಚ್ಚದಲ್ಲಿ, ಟ್ರಾಫಿಕ್‌ನಲ್ಲಿ ಕೆಲವೊಮ್ಮೆ ಅಲ್ಪ ಅವಧಿ ಸಮಯ ತೆಗೆದುಕೊಂಡು ಬೇಕಾದಸ್ಥಾನ ತಲುಪಲು ಈ ಸೇವೆಯು ಅವಶ್ಯವಾಗಿತ್ತು.
Veekay News > State News > ಬೈಕ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ: ಹೈಕೋರ್ಟ್
ಬೈಕ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ: ಹೈಕೋರ್ಟ್
ವೀ ಕೇ ನ್ಯೂಸ್14/06/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply



















