ಬೆಂಗಳೂರು: ಇಂಧನ ಇಲಾಖೆಯಿಂದ ಸ್ವಾರ್ಟ್ ವಿದ್ಯುತ್ ಮೀಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಜೆ.ಚಾರ್ಜ್ ಗೆ ದೊಡ್ಡ ಆಘಾತ ಎದುರಾಗಿದ್ದು, ಬಿಜೆಪಿ ಶಾಸಕರು ಜಾರ್ಚ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ,
ಸ್ವಾರ್ಟ್ ವಿದ್ಯುತ್ ಮೀಟರ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಈ ಹಿಂದೆ ಡಿವೈಎಸ್‍ಪಿಗೆ ಹಾಗೂ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳಲಾದ ಹಿನ್ನಲೆ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ,
ಬಿಜೆಪಿಯ ಶಾಸಕರಾದ ಸಿ.ಎನ್. ಅಶ್ವತ್ಧನಾರಾಯಣ್, ಎಸ್ ಆರ್ ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಸೇರಿದಂತೆ ಇನ್ನಿತರರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ,
ರಾಜ್ಯದಲ್ಲಿ ಸ್ಮಾಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಕಾನೂನು ಬಾಹಿರವಾಗಿದೆ ಮತ್ತು ಈ ಟೆಂಡರ್ ನೀಡಿಕೆಯಿಂದ ಅಂದಾಜು 16 ಸಾವಿರ ಕೋಟಿ ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ, ಬೆಸ್ಕಾಂ ಅಧ್ಯಕ್ಷ ಹಾಗೂ ಸಚಿವ ಕೆ.ಜಿ.ಜಾರ್ಜ್ ಮತ್ತಿರರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ,
Veekay News > State News > ಸಚಿವ ಕೆ.ಜೆ. ಜಾರ್ಜ್ ಗೆ ದೊಡ್ಡ ಸಂಕಷ್ಟ
ಸಚಿವ ಕೆ.ಜೆ. ಜಾರ್ಜ್ ಗೆ ದೊಡ್ಡ ಸಂಕಷ್ಟ
ವೀ ಕೇ ನ್ಯೂಸ್17/07/2025
posted on




















