Live Stream

[ytplayer id=’22727′]

| Latest Version 8.0.1 |

Bengaluru RuralState News

ಭರತ್ ರಂಗನಾಥ ಗೆ ಕ್ಯಾಲಿಫೋರ್ನಿಯ ಪಬ್ಲಿಕ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್

ಭರತ್ ರಂಗನಾಥ ಗೆ ಕ್ಯಾಲಿಫೋರ್ನಿಯ ಪಬ್ಲಿಕ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್

BENGALURU : ಅಂತರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಯುರೋಪಿಯನ್ ಶೃಂಗಸಭೆ ಮತ್ತು ಅಲ್ಟಿಮೇಟ್ ಬ್ರಾಂಡ್ ಐಕಾನ್ (Alphimate Brand Icon) ಪ್ರಶಸ್ತಿಗಳ ಪ್ರಸ್ತುತಿ 2025 ರ ತಮಿಳುನಾಡಿನ ಪೆರಂಬಲೂರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ನಲ್ಲಿನ ಮಾಹಿತಿ ತಂತ್ರಜ್ಞಾನದ ಖ್ಯಾತ ಸಂಶೋದಕ ಭರತ್ ರಂಗನಾಥ (Bharath Ranganath) ಅವರಿಗೆ ಕ್ಯಾಲಿಫೋರ್ನಿಯ ಪಬ್ಲಿಕ್ ವಿಶ್ವವಿದ್ಯಾಲಯದಿಂದ ಇನ್ಪರ್ಮೇಷನ್ ಅಂಡ್ ಟೆಕ್ನಾಲಜೀ ವಿಷಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ ರಿನವೆಬಲ್ ಎನರ್ಜಿ ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ) ಮಾಜಿ‌ ನ್ಯಾಯಾದೀಶರಾದ ಡಾ. ಎಂ. ಆರ್. ರಂಗನಾಥ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಬ್ರೈನೇ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಡಾ. ರೇಗುನಾಥ ಪರಕ್ಕಲ್, ಶ್ರೀಲಂಕಾ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಷ್ಯವೃತ್ತಿ ಮತ್ತು ಕೈಗಾರಿಕಾ ತರಬೇತಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಡಾ. ಕ್ರಿಶಾಂತ ಪತಿರಾಜ, ಮಧ್ಯಪ್ರದೇಶದ ಭಾಬಾ ವಿಶ್ವವಿದ್ಯಾಲಯ ಡೀನ್ ಪ್ರೊ. ಡಾ. ಸೈಲೇಶ್ ಕುಮಾರ್ ಘಾಟುರಿ, ಅಮೆರಿಕ ಸಂಯುಕ್ತ ಸಂಸ್ಥಾನದ ಯೋಗ ವಿಭಾಗ, ಯೋಗ ಸಂಸ್ಕೃತ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ನಿರ್ದೇಶಕ ಪ್ರೊ. ಡಾ. ಸುರೇಶ್ ಕೆ ನರಪಾವಿ, ತೆಲಂಗಾಣ ರಾಜ್ಯದ ಆಸ್ಪ್ರಾಟೆಕ್ ಕನ್ಸಲ್ಟೆಂಟ್ ಸಿಇಒ ಡಾ. ಹಸೀಬುಲ್ಲಾ ಮೊಹಮ್ಮದ್‌ ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";