Live Stream

[ytplayer id=’22727′]

| Latest Version 8.0.1 |

Bengaluru Urban

*ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಹಿತ ಕಾಪಡಬೇಕು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಮನವಿ*

*ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಹಿತ ಕಾಪಡಬೇಕು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಮನವಿ*

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸಂದರ್ಭದಲ್ಲಿ ಅಧಿಕಾರಿ, ನೌಕರರ ಭವಿಷ್ಯದ ಹಿತದೃಷ್ಟಿಯಿಂದ ಮುಂಬಡ್ತಿ ಹಾಗೂ ಸೇವಾ ಸೌಕರ್ಯಗಳಿಗೆ ತೊಡಕಾಗದಂತೆ ವೃಂದ ಮತ್ತು ನೇಮಕಾತಿ ನಿಯಮಾನ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ.

ಈ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಮಗೆ ಶುಕ್ರವಾರ ಪತ್ರ ಬರೆದು ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌, “ಹೊಸ ವೃಂದ ಮತ್ತು ನೇಮ ಕಾತಿ ನಿಯಮಾವಳಿಗಳು ರಚನೆಯಾಗುವವರೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಪಾಲಿಕೆಯ ನಿಯಮಗಳನ್ನೇ ಮುಂದುರಿಸಲು ಆದೇಶ ಹೊರಡಿಸಬೇಕು,” ಎಂದು ಕೋರಿದ್ದಾರೆ.

‘ಜಿಬಿಎ ವತಿಯಿಂದ ವೃಂದ ಮತ್ತು ನೇಮ ಕಾತಿ ನಿಯಮಾವಳಿ ರಚಿಸುವಾಗ ಸದ್ಯ ಅಧಿಕಾರಿ, ನೌಕರರಿಗೆ ಒದಗಿಸಿರುವ ಸೌಲಭ್ಯಗಳಿಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ವಹಿಸಬೇಕು. ಅದೇ ರೀತಿ ಭವಿಷ್ಯದಲ್ಲಿ ವಿಸ್ತರಿಸಬಹುದಾದ ಜಿಬಿಎ ವ್ಯಾಪ್ತಿಗೆ ಅನುಗುಣವಾಗಿ ಅಧಿಕಾರಿ, ಸಿಬ್ಬಂದಿ ಹುದ್ದೆಗಳನ್ನು ಸೃಜಿಸಬೇಕು. ಪ್ರಸ್ತುತ ಜಾರಿಯಲ್ಲಿರುವಂತೆ ಒಟ್ಟು ಮಂಜೂರಾಗಿರುವ ಹಾಗೂ ಹೆಚ್ಚುವರಿಯಾಗಿ
ಮಂಜೂರಾಗಿರುವ ಉಪ ಆಯುಕ್ತರ ಹುದ್ದೆಯ ಶೇ 60ರಷ್ಟನ್ನು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಶೇ 40ರಷ್ಟು ಹುದ್ದೆಗಳನ್ನು ಕೆ.ಎಸ್, ಕೆಎಂಎಎಸ್ ವೃಂದದಿಂದ ಎರವಲು ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಮುಂದುವರಿಸಬೇಕು. ಸಹಾಯಕ ಆಯುಕ್ತರ ಹುದ್ದೆಗಳನ್ನು ಸಂಪೂರ್ಣವಾಗಿ ಬಿಎ ಮುಂಬಡ್ತಿ ಹುದ್ದೆಗಳನ್ನಾಗಿ ಪರಿಗಣಿಸಿ, ಕನೆ ಪಾಲಿಕೆ ಅಧಿಕಾರಿಗಳಿಗೆ ಮೀಸಲಿಡಬೇಕು,” ಎಂದು ಆಗ್ರಹಿಸಿದ್ದಾರೆ.

“ಅವಶ್ಯಕತೆ ಇಲ್ಲದ ಹುದ್ದೆಗಳಿಗೆ ಕೆಎಎಸ್ ಮತ್ತು ಕೆಎಂಎಎಸ್ ಅಧಿಕಾರಿಗಳನ್ನು ಎರವಲು ಸೇವೆಯಲ್ಲಿ ನಿಯೋಜಿಸುವುದನ್ನು ರದ್ದುಪಡಿಸಬೇಕು. ಕಂದಾಯ ವಿಭಾಗದ ಜಂಟಿ ಆಯುಕ್ತರ ಹುದ್ದೆಯನ್ನು ಮುಂಬಡ್ತಿ ಹುದ್ದೆಯನ್ನಾಗಿ ಮೀಸಲಿಡಬೇಕು. ಜಿಬಿಎ ಅಡಿ ಹೆಚ್ಚುಮ ಆಯುಕ್ತ ಹುದ್ದೆ ಸೃಜಿಸಿ, ಜಂಟಿ ಆಯುಕ್ತರಿಗೇ ಮುಂಬಡ್ತಿಗೆ ಅವಕಾಶ ಕಲ್ಪಿಸಬೇಕು,” ಎಂದು ಒತ್ತಾಯಿಸಿದ್ದಾರೆ.

“ಜಿಬಿಎ ಆಡಳಿತ ವಿಚಾರಗಳಿಗೆ ಸಂಬಂಧಿ ಸಿದಂತೆ ಆಡಳಿತ ವಿಭಾಗದ ಉಪ ಆಯುಕ್ತರು, ವಿಶೇಷ ಆಯುಕ್ತರು ಹಾಗೂ ಮುಖ್ಯ ಆಯುಕ್ತರ ಮೂಲಕ ಸಲ್ಲಿಸುವ ಪ್ರಸ್ತಾವನೆಗಳಿಗಷ್ಟೇ ಮಾನ್ಯತೆ ನೀಡಬೇಕು,” ಎಂದು ಮನವಿ ಮಾಡಿಕೊಂಡಿದ್ದಾರೆ.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";