ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸಾಹಿತ್ಯ ಸಂಸ್ಕೃತಿ ವೇದಿಕೆ, ಅಗರ ಹಾಗೂ ಪ್ರಜಾಕಿರಣ ಸೇವ ಚಾರಿಟೆಬಲ್ ಟ್ರಸ್ಟ್ ಆಶ್ರಮದ ವತಿಯಿಂದ ದಿನಾಂಕ: ೧೫.೦೬.೨೦೨೫ ರಿಂದ ೦೪.೦೭.೨೦೨೫ ರವರೆಗೆ ೨೦ ದಿನಗಳ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ವಸತಿ ತರಬೇತಿ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಿನಾಂಕ:04.07.2025 ರಂದು ಆರ್. ಸದಾಶಿವಯ್ಯ ಮಂಟಪ, ಅಗರದಲ್ಲಿ ಆಯೋಜಿಸಲಾಗಿತು.
ಸಮಾರೋಪ ನುಡಿಯನ್ನು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದಸ್ವಾಮಿ ನುಡಿದರು. ಶ್ರೀಯುತರು ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಜಾಗೃತಿಗೆ ವ್ಯಾಸಂಗಕ್ಕೆ, ನೆನಪಿನ ಶಕ್ತಿಗೆ, ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಹೀಗಾಗಿಯೇ ಸರ್ಕಾರಗಳು ಅಕಾಡೆಮಿಗಳ ಮೂಲಕ ಇಂತಹ ಚಟುವಟಿಕೆ ನಡೆಸುತ್ತಾ ಬಂದಿವೆ. ಅಶ್ರಮದಲ್ಲಿ ಬಂಜಾರ ಒಳಗೊಂಡಂತೆ ಎಲ್ಲಾ ಮಕ್ಕಳು ಸದುಪಯೋಗ ಪಡೆದಿದ್ದಾರೆ. ಬಂಜಾರ ಆರ್ಥಿಕ ಸ್ಥಿತಿ ಇಂದಿಗೂ ಹೀನಾಯವಾಗಿದೆ. ಬಂಜಾರರು ಅನೇಕ ಪ್ರಥಮಗಳನ್ನು ಈ ದೇಶಕ್ಕೆ ಕೊಟ್ಟಿದ್ದಾರೆ, ಅವು ಇಂತಿದೆ.
- ಮೊದಲ ವ್ಯಾಪರಿಗಳು
- ಮೊದಲ ಕೃಷಿಕರು
- ಮೊದಲ ಲಿಕ್ಕರ್ ತಯಾರಕರು
- ವಿಶ್ವಕ್ಕೆ ಮೊದಲು ವರ್ಣಮಯ ರಂಚನೆಯನ್ನು ಕೊಟ್ಟವರು ಆಶಂ ಕಲಾವಿದರು
- ಮೊದಲ ಗೆರಿಲ್ಲಾ ಯುದ್ದಾ ಕಲಿಸಿದ ಅರಣ್ಯವಾಸಿಗಲು
- ಮೊದಲ ಗೋಪಾಲಕರು/ ಗೊ ಶಾಲೆ ಕೊಟ್ಟವರು
- ಮೊದಲು ಕಸೂತಿ Fashion technology ಕೊಟ್ಟವರು
- ಶ್ರೀ ಕೃಷ್ಣನಿಗೆ ನಮ್ಮ ಮೂಲ ಪುರುಷ ದಾದ ಮೊಲ ಹಾಗೂ ರಾಧಿದಾದಿಯರು ಕೊಳಲನ್ನು ಕೊಟ್ಟವರು
- ಮೊದಲ ಆರ್ಥಿಕತೆ ತಿಳಿದವರು
- ಮೊದಲ ರಸ್ತೆ ನಿರ್ಮಾಪಕರು
- ಮೊದಲ ಪಶು-ಪ್ರಾಣಿಗಳ ರಕ್ಷಕರು
- ಮೊದಲ ಬೇಟೆಗಾರರು
- ಮೊದಲು ಪ್ರಸಾದನ, ಕಸೂತಿ ಕೌಶಲ್ಯ ಕಲಿಸಿದ ಸುಂದರಿಯರು
ದಕ್ಷಿಣ ಭಾರತ, ಕರ್ನಾಟಕ, ಆಂದ್ರ ಮುಂತಾದ ಕಡೆ ಬಂಜಾರರು ಹಸಿವಿಗಾಗಿ ಮಕ್ಕಳನ್ನು ಮಾರಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ತನಿಖೆ ಸಹ ಆಗಿದೆ. ಮಾನವ ಮಾರಾಟ ದಂಧೆಯಾಗಿದೆ. ಈ ಹಿನ್ನಲೆಯಲ್ಲಿ ಅರಿವು ಜಾಗೃತಿಗಾಗಿ ಬಂಜಾರ ಅಕಾಡೆಮಿ ಆಯೋಜಿಸಿದ 20 ದಿನಗಳ ಶಿಬಿರದಲ್ಲಿ ಬಂಜಾರ ಮಕ್ಕಳ ಮಾರಾಟ, ಬದುಕು, ಬವಣೆ ಕುರಿತು ಸತ್ಯ ಹರಿಶ್ಚಂದ್ರ ಶುನಶೇಫರ ಕಥೆ ಸಮ್ಮಿಲನಗೊಳಿಸಿ ಚಲನ ಜಿ. ನಾಯಕ್ ಶಿಬಿರದಲ್ಲಿ ರಚಿಸಿದ “ಬಂಜಾರ ಬದುಕು ಬವಣೆ” ಪ್ರದರ್ಶಿಸಲಾಯಿತು. ಇಲ್ಲಿ ಒಟ್ಟು ಎರಡು ನಾಟಕ, ಹಲವಾರು ಕಾವ್ಯ, ಲೇಖನಗಳು ಬರೆಯಲಾಗಿದೆ ಎಂದರು.
ಹೆಸರಾಂತ ಕವಿ ಹಾಗೂ ಸಾಂಸ್ಕೃತಿಕ ಚಿಂತಕರಾದ ಡಾ. ವಡ್ಡಗೆರೆ ನಾಗರಾಜಯ್ಯ, ಮಹಾರಾಣಿ ಕಾಲೇಜು ಪ್ರಾಧ್ಯಾಪಕರಾದ ಡಾ. ಕೃಷ್ಣ ನಾಯಕ್, ಸಾಹಿತ್ಯ ಸಂಸ್ಕೃತಿ ವೇದಿಕೆ,ಅಗರ ಅಧ್ಯಕ್ಷರಾದ ಶ್ರೀ ಆರ್.ಸದಾಶಿವಯ್ಯ ಜರಗನಹಳ್ಳಿ, ಪ್ರಜಾ ಕಿರಣ ಸೇವಾ ಚಾರಿಟೇಬಲ್ ಟ್ರಸ್ಟ್ನ ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಕ್ಷರಾದ ಶ್ರೀ ಡಾ.ರಾಹುಲ್ ಗಾಳಿ, ಶ್ರೀಮತಿ ಛಾಯಾಭಾರ್ಗವಿ. ಶ್ರೀ ಎಸ್.ಎಚ್, ಮಾಲತೇಶ ಬಡಿಗೇರ ಮುಂತಾದವರು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ “ಬಂಜಾರ ಬದುಕು ಮತ್ತು ಬವಣೆ” ಕುರಿತು ನಾಟಕ ಪ್ರದರ್ಶನ ಹಾಗೂ ಶಿಬಿರದ ಶಿಬಿರಾರ್ಥಿಗಳು ಶಿಬಿರದಲ್ಲಿ ಕವಿತೆಗಳ ವಾಚನ ಮಾಡಲಾಯಿತು.
ಹೆಸರಾಂತ ಕವಿ ಹಾಗೂ ಸಾಂಸ್ಕೃತಿಕ ಚಿಂತಕರಾದ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಮಾತನಾಡಿ, ಯಶಸ್ವಿಯಾದ ಈ ಶಿಬಿರದ ನಾಟಕ ಪ್ರದರ್ಶನ ನೋಡಿದಾಗ ನನಗೆ ತಿಳಿಯಿತು. 20 ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳು ಅಂಗನವಾಡಿಯಿಂದ ಪ್ರರಂಭವಾಗಿ 9ನೇ ತರಗತಿ ವರೆಗೂ ಓದುತ್ತಿರುವ ಸಣ್ಣ ಮಕ್ಕಳು ದೊಡ್ಡ ದೊಡ್ಡ ಸಂಭಾಷಣೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಅಷ್ಟೊಂದು ಚೆನ್ನಾಗಿ ತುರಿತ ಕಲಾವಿದರಂತೆ ಹಿರಿಯ ಕಲಾವಿದರು ಪ್ರದರ್ಶನ ಮಾಡುವಂತೆ ಶ್ರದ್ದೆಯಿಂದ ಅವರು ರಂಗಮಂಚದ ಮೇಲೆ ಪ್ರದರ್ಶನ ಮಾಡಿದರು ಎಂದು ಮಕ್ಕಳಿಗೆ ಅಭಿನಂದನೆ ತಿಳಿಸಿದರು. ಹಾಗೆ ಬಂಜಾರ ಸಂಸ್ಕೃತಿ, ಪರಂಪರೆ, ಸೇವಾಲಾಲ್ ಬಗ್ಗೆ ಕವಿತೆಗಳನ್ನು ಶಿಬಿರಾರ್ಥಿಗಳು ವಾಚನ ಮಾಡಿದರು.
ಡಾ.ಎ.ಆರ್.ಗೋವಿಂದಸ್ವಾಮಿ ಮತ್ತು ನಾನು ಕಳೆದ 30 ವರ್ಷಗಳಿಗಿಂತಲೂ ಹಿಂದಿನಿಂದ ಗೆಳೆಯರು, ಜೋತೆಯಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿದವರು ಸಾಹಿತ್ಯ ಇತರೆ ವಿಷಯಗಳನ್ನು ಸಂಘಟಿಸಿದವರು, ಸಮಾಜಿಕ ಚಳುವಳಿಗಳನ್ನು ಅಲೆಮಾರಿಗಳ ಸಬಲಿಕರಣಕ್ಕಾಗಿ ಸಂಘಟನೆಗಳತ್ತ ಜೋತೆಗೂಡಿ ನಡೆಯುತ್ತ ಬಂದಿದ್ದೇವೆ. ಆ ಕಾಲದಿಂದಲೂ ಕೂಡ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಹೀಗಾಗಿ, ಅವರನ್ನು ಕರ್ನಾಟಕ ಸರ್ಕಾರ ಗುರುತಿಸಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಅವರು ಇನ್ನಷ್ಟು ವಿಸ್ತರಿಸಿಕೊಳ್ಳಲು ಹಾಗೂ ಅವರ ಸೃಜನಶೀಲತೆಯನ್ನು ಸಮಾಜಕ್ಕೆ ಧಾರೆಯರೆಯುವುದಕ್ಕೆ ಇದು ಒಂದು ಒಳ್ಳೆಯ ಸದಾವಕಾಶ ಎಂದು ಹೇಳಿದರು.
ಸಾಹಿತ್ಯ ಸಂಸ್ಕೃತಿ ವೇದಿಕೆ,ಅಗರ ಅಧ್ಯಕ್ಷರಾದ ಶ್ರೀ ಆರ್.ಸದಾಶಿವಯ್ಯ ಜರಗನಹಳ್ಳಿ ಮಾತನಾಡಿ, ಬಂಜಾರ ಅಕಾಡೆಮಿ ನಮ್ಮ ಸಂಸ್ಥೆಯ ಸಹಯೋಗದಲ್ಲಿ ಒಂದು ಉತ್ತಮವಾದ ವಸತಿ ಕಾರ್ಯಾಗಾರ ಕೊಟ್ಟು ಪ್ರಚಾಕಿರನ ಸೇವಾಶ್ರಮದ ಮಕ್ಕಳಿಗೂ ಶಿಭಿರಕ್ಕೆ ಸೇರಿಸಿಕೊಂಡು ಉತ್ತಮವಾದ ಮಕ್ಕಳ ಮಾರಾಟದ ಬಗ್ಗೆ ನಾಟಕ ಚಲನ .ಜಿ ನಾಯಕ ರಚಿಸಿ ಛಾಯಾಭಾರ್ಗವಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು ಎಂದರು.
ಸಭೆಯ ಪ್ರೇಕ್ಷಕರ ಈ ನಾಟಕ ಪ್ರಯೋಗ ಕಂಡು ಕಣ್ಣುಗಳಲ್ಲಿ ನೀರು ತುಂಬಿ ಕೊಂಡದ್ದು ವಿಶೇಷವಾಗಿತ್ತು.
ಬಂಜಾರ ಅಕಾಡೆಮಿ ಸದಸ್ಯರಾದ ಡಾ. ಉತ್ತಮ್, ಶ್ರೀ ಗಿರೀಶ್ ನಾಯಕ್ ಉಪಸ್ಥಿತರಿದ್ದರು.