ಬೆಂಗಳೂರು.ಜು.27; ರಾಜ್ಯದಲ್ಲಿ 200 ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ 28 ನೇ ಬಾಂಧವ ಕೌನ್ಸಿಲರ್ ಕಪ್-2025 ವಾಲಿಬಾಲ್ ಟೂರ್ನಿಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಪ್ರಾರ್ಥನ, ಕಾರ್ಮೆಲ್ ಕಾನ್ವೆಂಟ್ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ತೋರಿದರು.
ಗೆದ್ದ ತಂಡಗಳಿಗೆ ವಾಲಿಬಾಲ್ ಬೆಟ್ಟೇಗೌಡ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಮತ್ತು ಬಾಂಧವ ಸಂಸ್ಥೆಯ ಸಂಸ್ಥಾಪಕ ಎನ್.ನಾಗರಾಜು ಬಹುಮಾನ ವಿತರಿಸಿದರು. ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಾರ್ಥನ ಪ್ರಥಮ, ಕಾರ್ಮೆಲ್ ಕಾನ್ವೆಂಟ್ ದ್ವಿತೀಯ, ಪ್ರಸಿಡೆನ್ಸಿ ತೃತೀಯ ಸ್ಥಾನ ಪಡೆಯಿತು. ಪ್ರೌಢ ಶಾಲೆಯ ಬಾಲಕರ ವಿಭಾಗದಲ್ಲಿ ಬ್ಲ್ಯೂ ಬೆಲ್ ಕ್ರಮವಾಗಿ ಪ್ರಥಮ, ಸಂವೇದ, ಸಾಧನ ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದುಕೊಂಡಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಾರ್ಥನ ಪ್ರಥಮ, ಚಿತ್ರಕೂಟ ದ್ವಿತೀಯ ಮತ್ತು ವಿಐಪಿ ತೃತೀಯ ಸ್ಥಾನ, ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ್ರಥಮ, ಲಿಟಲ್ ಫ್ಲವರ್ ದ್ವಿತೀಯ ಮತ್ತು ಎಂ.ಎಸ್.ಎಸ್ ತೃತೀಯ ಬಹುಮಾನ ವಿತರಿಸಿದಸಿದರು.
ನಂತರ ಮಾತನಾಡಿದ ಎನ್. ನಾಗರಾಜು, ಶಿಕ್ಷಣ, ಕ್ರೀಡೆ, ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಪ್ರೇರಣೆಯಾಗಿದೆ. ಬಾಂಧವ ಸಂಸ್ಥೆಯ ಜನರ ಒಡನಾಡಿಯಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಬೇಕು, ರಾಷ್ಟ್ರ, ರಾಜ್ಯ ಹಾಗೂ ತಂದೆ, ತಾಯಿಗಳಿಗೆ ಉತ್ತಮ ಮಕ್ಕಳಾಗಿ ಬೆಳಯಬೇಕು. ಈ ನಿಟ್ಟಿನಲ್ಲಿ ಬಾಂಧವ ಸಂಸ್ಥೆ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪಗೊಳ್ಳಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
