ಅಲ್ಪನಾ ಭರತನಾಟ್ಯ ರಂಗ ಪ್ರವೇಶ 31ರಂದು
* ಹಿರಿಯ ವಿದುಷಿ ರಾಧಾ ಶ್ರೀಧರ್ ಶಿಷ್ಯೆ
*
* ಬದರಿನಾಥ್ ಮತ್ತು ಮೈಸೂರು ಸ್ಮಿತಾ ಅವರ ಪುತ್ರಿ
ಬೆಂಗಳೂರು: ಹಣಕಾಸು ತಜ್ಞ ಎಚ್. ಬದರಿನಾಥ್ ಮತ್ತುಸ್ಮಿತಾ ಅವರ ಪುತ್ರಿ ಅಲ್ಪನಾ ಬದರಿನಾಥ್ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜು. 31 ರ ಸಂಜೆ 6ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿದೆ.
ರಾಜಧಾನಿಯ ವೆಂಕಟೇಶ ನೃತ್ಯ ಮಂದಿರದ ಹಿರಿಯ ನೃತ್ಯವಿದುಷಿ ರಾಧಾ ಶ್ರೀಧರ್ ಮತ್ತು ಕುಸುಮಾ ರಾವ್ ಅವರ ಹೆಮ್ಮೆಯ ಶಿಷ್ಯೆ ಅಲ್ಪನಾ ಬದರಿನಾಥ್, ರಂಗಾರೋಹಣಕ್ಕೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕೂಚಿಪುಡಿ ವಿದುಷಿ ವೈಜಯಂತಿ ಕಾಶಿ, ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ್ ಕುಮಾರ್ ಮತ್ತು ವಿಮರ್ಷಕ ಸೂರ್ಯ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಗಾಯನದಲ್ಲಿ ವಿದುಷಿ ಐಶ್ವರ್ಯಾ ನಿತ್ಯಾನಂದ, ನಟವಾಂಗದಲ್ಲಿ ವಿದ್ವಾ ಪ್ರಸನ್ನ ಕುಮಾರ, ಮೃದಂಗದಲ್ಲಿ ವಿದ್ವಾನ್
ಸಾಯಿ ವಂಶಿ, ಕೊಳಲಿನಲ್ಲಿ ವಿದ್ವಾನ್ ಮಹೇಶ್ ಸ್ವಾಮಿ, ಪಿಟೀಲಿನಲ್ಲಿ ವಿದ್ವಾನ್ ಮೈಸೂರು ದಯಾಕರ್ ಸಹಕಾರ ನೀಡಲಿದ್ದಾರೆ.
ಕ್ರಿಯಾಶೀಲ ಪ್ರತಿಭೆ :
ಅಲ್ಪನಾ, ಈಗಾಗಲೇ ಸೀನಿಯರ್ ಹಂತದ ನೃತ್ಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಮಗಳಿಗೆ ಬಾಲ್ಯದಿಂದಲೇ ಈಜುವ ಹವ್ಯಾಸವನ್ನು ರೂಢಿಸಿದ ಬದರಿ- ಸ್ಮಿತಾ ದಂಪತಿಗಳು, ಶಾಲೆಯ ಪಠ್ಯ ಓದಿ ಕೇವಲ ಅಂಕ ಗಳನ್ನು ಗಳಿಸುವುದೇ ಸಾಧನೆ ಅಲ್ಲ. ಮೂಲ ವಿಷಯವನ್ನು ಸಮಗ್ರವಾಗಿ, ತಲಸ್ಪರ್ಶಯಾಗಿ ಅಧ್ಯಯನ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿದರು. ಇದರ ಫಲವಾಗಿಯೇ ಕಲ್ಪನಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲಿಯೂ ಸದಾ ನಂಬರ್ 1 ಸ್ಥಾನವನ್ನೇ ಕಾಪಾಡಿಕೊಂಡು ಬಂದಿರುವುದು ಗಮನೀಯವಾಗಿದೆ. ಪಿಯುಸಿ ನಂತರ ಆಲ್ ಇಂಡಿಯಾ ಜೆಇಇ ಪರೀಕ್ಷೆ ಮೂಲಕ ರ‌್ಯಾಂಕಿಂಗ್ ಪಡೆದು ಮದ್ರಾಸ್ ಐಐಟಿಯಲ್ಲಿ ಸದ್ಯ ಅಧ್ಯಯನಕ್ಕೆ ಅಲ್ಪನಾ ಪ್ರವೇಶ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಈಜು, ಬ್ಯಾಡಿಂಟನ್, ಚಿತ್ರಕಲೆ ಮತ್ತು ಜ್ಯುವೆಲರಿ ಮೇಕಿಂಗ್ ಕಲೆಗಳಲ್ಲೂ ಈಕೆ ವಿಶೇಷ ಆಸಕ್ತಿ ಹೊಂದಿದ್ದಾರೆ. ನೃತ್ಯ ಕಲಿಕೆಗೆ ಕೇಂದ್ರ ಸರ್ಕಾರದ ಸಿಸಿಆರ್‌ಟಿ ವಿದ್ಯಾರ್ಥಿ ವೇತನವನ್ನೂ ಇವರು ಪಡೆಯುತ್ತಿರುವುದು ಸಾಧನೆಗೆ ಪ್ರೇರಕವಾಗಿದೆ.
ಗುರು ರಾಧಾ ಶ್ರೀಧರ್ ಅವರೂ ಈಕೆಗೆ ಕ್ರಿಯಾಶೀಲ ನರ್ತಕಿ ಎಂದು ಪ್ರಶಂಸೆ ಮಾಡಿದ್ದು, ಕಲಾ ಜೀವನ ಯಶವಾಗಲಿ ಎಂದು ಹಾರೈಕೆ ಮಾಡಿದ್ದಾರೆ.